Janardhan Kodavoor/ Team KaravaliXpress
25.6 C
Udupi
Thursday, September 29, 2022
Sathyanatha Stores Brahmavara

ಕೋಟದ ಪಂಚವರ್ಣ ಯುವಕ ಮಂಡಲದ ವಿನೂತ ಕಾರ್ಯಕ್ರಮ ಮನೆಗೊಂದು ಗಿಡ ನೆಟ್ಟು ಬರುವೆವು

ಕೋಟ: ಪರಿಸರ ಪ್ರಜ್ಞೆ ಪ್ರತಿಯೊರ್ವರಲ್ಲೂ ಮೂಡಿದರೆ ಪರಿಶುದ್ಧ ಪ್ರಕೃತಿ ನಮ್ಮದಾಗಿಸಲು ಸಾಧ್ಯವಿದೆ ಈ ದಿಸೆಯಲ್ಲಿ ಸಂಘಸoಸ್ಥೆಗಳ ಪರಿಸರ ಉಳಿಸುವ ಕಾರ್ಯ ಶ್ಲಾಘನೀಯ ಎಂದು ಕೋಟತಟ್ಟು ಗ್ರಾಮಪಂಚಾಯತ್ ಸದಸ್ಯೆ ವಿದ್ಯಾ ಸಾಲಿಯಾನ್ ಹೇಳಿದರು.

ಕೋಟದ ಪಂಚವರ್ಣ ಯುವಕ ಮಂಡಲ ಮತ್ತು ಪಂಚವರ್ಣ ಮಹಿಳಾ ಮಂಡಲ ಇವರುಗಳ ನೇತ್ರತ್ವದಲ್ಲಿ126ನೇ ಪರಿಸರಸ್ನೇಹಿ ಅಭಿಯಾನ,ಗಿಳಿಯಾರು ಯುವಕ ಮಂಡಲ,ಮಣೂರು ಫ್ರೆಂಡ್ಸ್,ವಿಪ್ರ ಮಹಿಳಾ ಬಳಗ ಸಾಲಿಗ್ರಾಮ,ಯಕ್ಷಸೌರಭ ಕಲಾರಂಗ ಕೋಟ,ಹಂದಟ್ಟು ಮಹಿಳಾ ಬಳಗ ಇವರುಗಳ ಸಹಯೋಗದೊಂದಿಗೆ ಗೀತಾನಂದ ಫೌಂಡೇಶನ್ ಮಣೂರು ಕೊಡ ಮಾಡಿದ ಗಿಡಗಳನ್ನು ಮನೆಗೊಂದು ಗಿಡ ನೆಟ್ಟು ಬರುವೆವು ವಿನೂತ ಯೋಜನೆಯ ಭಾಗವಾಗಿ ಕೋಟತಟ್ಟು ಪಡುಕರೆ ಅರಮದೇವಸ್ಥಾನ ಅಂಗನವಾಡಿ ಕೇಂದ್ರದಲ್ಲಿ ನಡೆಸಲಾದ ಕಾರ್ಯಕ್ರಮದಲ್ಲಿ ಗಿಡ ವಿತರಿಸಿ ಮಾತನಾಡಿ ಹಿಂದೆ ಇದ್ದ ಸ್ಥಿತಿ ಇಂದು ಇಲ್ಲ ಬದಲಾದ ವ್ಯವಸ್ಥೆಯಲ್ಲಿ ತಾಪಮಾನದ ಭಯದಿಂದ ಜನಸಮುದಾಯ ನರಳಲು ಆರಂಭಿಸಿದೆ ಇದಕ್ಕೆ ಕಾರಣ ನಾವುಗಳೇ ಕಾಡು ಕಡಿದು ನಾಡು ಮಾಡುವ ವಿಚಾರದಲ್ಲಿ ಮುಂದಿನ ಮನುಕುಲದ ಬಗ್ಗೆ ಚಿಂತಿಸದೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸುವಂತ್ತಾಗಿದೆ ಇದಕ್ಕೆ ಪರಿಹಾರ ಪಂಚವರ್ಣದ ಮನೆಗೊಂದು ಗಿಡ ನೆಟ್ಟು ಪೋಷಿಸುವ ಕಾರ್ಯ ನಡೆಯುತ್ತಿದೆ ಇದರಿಂದ ಪ್ರಕೃತಿಯನ್ನು ಉಳಿಸಿ ಮುಂದಿನ ತಲೆಮಾರಿಗೆ ಬಹುದೊಡ್ಡ ಕೊಡುಗೆ ನೀಡಿದಂತ್ತಾಗುತ್ತದೆ ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೋಟತಟ್ಟು ಗ್ರಾ.ಪಂ ಅಧ್ಯಕ್ಷೆ ಅಶ್ವಿನಿದಿನೇಶ್ ವಹಿಸಿದ್ದರು. ಮುಖ್ಯ ಅಭ್ಯಾಗತರಾಗಿ ವಾಡ್೯ ಸದಸ್ಯ ರವೀಂದ್ರ ತಿಂಗಳಾಯ,ಗ್ರಾಮದ ಹಿರಿಯ ಕೃಷಿಕ ಸೀತಾರಾಮ ತುಂಗ,ಅoಗನವಾಡಿ ಕಾರ್ಯಕರ್ತೆ ಯಶೋಧ ವಿಜಯ್,ಸ್ತಿçà ಶಕ್ತಿ ಸಂಘದ ಅಧ್ಯಕ್ಷೆ ಮೆಟಿಲ್ಡಾ ರೊಬರ್ಟ್ ರೊಡ್ರೀಗಸ್,ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಮೃತ್ ಜೋಗಿ,ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಕಲಾವತಿ ಅಶೋಕ್,ಗಿಳಿಯಾರು ಯುವಕ ಮಂಡಲದ ಸ್ಥಾಪಕಾಧ್ಯಕ್ಷ ಸುರೇಶ್ ಗಿಳಿಯಾರ್,ಯಕ್ಷಸೌರಭದ ಅಧ್ಯಕ್ಷ ಪ್ರಶಾಂತ್ ಪೂಜಾರಿ,ಮಣೂರು ಫ್ರೆಂಡ್ಸ್ ಅಧ್ಯಕ್ಷ ದಿನೇಶ್ ಆಚಾರ್ಯ,ವಿಪ್ರ ಮಹಿಳಾ ಬಳಗದ ಸುಜಾತ ಬಾಯರಿ,ಹಂದಟ್ಟು ಮಹಿಳಾ ಬಳಗದ ಪುಷ್ಭಾ ಕೆ ಹಂದಟ್ಟು ಮತ್ತಿತರರು ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ಪಂಚವರ್ಣದ ಕಾರ್ಯಾಧ್ಯಕ್ಷ ರವೀಂದ್ರ ಕೋಟ ನಿರ್ವಹಿಸಿದರೆ,ಸಂಚಾಲಕ ಅಜಿತ್ ಆಚಾರ್ಯ ವಂದಿಸಿದರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!