Janardhan Kodavoor/ Team KaravaliXpress
25.6 C
Udupi
Thursday, September 29, 2022
Sathyanatha Stores Brahmavara

ದೇಶಾಭಿಮಾನದ ಕಿಚ್ಚು ಪ್ರತಿಯೊಬ್ಬರಲ್ಲೂ ಇರಬೇಕಾದ ಅವಶ್ಯಕತೆ ಇದೆ – ನಿವೃತ್ತ ಯೋಧ ವಿಜೇಂದ್ರ ಗಾಣಿಗ

ಕೋಟ: ಸ್ವಾತಂತ್ರ್ಯದ ಬಗ್ಗೆ ಗೌರಯುತವಾದ ಭಾವನೆ ದೇಶಾಭಿಮಾನದ ಕಿಚ್ಚು ಪ್ರತಿಯೊಬ್ಬರಲ್ಲೂ ಇರಬೇಕಾದ ಅವಶ್ಯಕತೆ ಇದೆ ಎಂದು ನಿವೃತ್ತ ಸೈನಿಕ ವಿಜೇಂದ್ರ ಗಾಣಿಗ ಹೇಳಿದರು.

ಕೋಟದ ಪಂಚವರ್ಣ ಯುವಕ ಮಂಡಲ ಹಾಗೂ ಪಂಚವರ್ಣ ಮಹಿಳಾ ಮಂಡಲ ನೇತ್ರತ್ವದಲ್ಲಿ ಕೋಟದ ವರುಣತೀರ್ಥಕೆರೆ ಸಮೀಪ 75ನೇ ಸ್ವಾತಂತ್ರೋತ್ಸವದಲ್ಲಿ ಧ್ವಜಾರೋಹಣ ನೆರವೆರಿಸಿ ಮಾತನಾಡಿ ಗಡಿ ಕಾಯುವ ಯೋಧರನ್ನು ಗುರುತಿಸುವ ಕಾರ್ಯ ಸ್ವಾತಂತ್ರ÷್ಯ ದಿನಕ್ಕೆ ಶ್ರೇಷ್ಠತೆಯನ್ನು ತಂದುಕೊಟ್ಟಿದೆ, ಸ್ವಾತಂತ್ರ್ಯ ಪಡೆಯಬೇಕಾದರೆ ಅದೆಷ್ಟೊ ಜನರ ತ್ಯಾಗ ಬಲಿದಾನ ಮಹತ್ತರವಾಗಿದೆ.ಈ ದಿಸೆಯಲ್ಲಿ ನಾವೆಲ್ಲರೂ ರಾಷ್ಟಾçಭಿಮಾನವನ್ನು ಇನ್ನಷ್ಟು ಇಮ್ಮಡಿಗೊಳಿಸಿ ಎಂದು ಕರೆಇತ್ತರಲ್ಲದೆ ಸ್ಥಳೀಯ ಸಂಘಸoಸ್ಥೆಗಳ ದೇಶದ ಗಡಿ ಕಾಯುವ ಯೋಧರನ್ನು ಗುರುತಿಸುವ ಹಾಗೂ ಸಮಾಜಮುಖಿ ಕಾರ್ಯ ನಿರಂತರವಾಗಿ ನಡೆಯುವಂತ್ತಾಗಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಬ್ರಹ್ಮಾವರದ ಮಟಪಾಡಿಯ ವಿಜಯ ಬಾಲನಿಕೇತನ ಆಶ್ರಮಕ್ಕೆ ಅಕ್ಕಿ ಹಾಗೂ ಇನ್ನಿತರ ಪರಿಕರವನ್ನು ಹಸ್ತಾಂತರಿಸಸಲಾಯಿತು.
ಸoಘದ ಯುವ ಸದಸ್ಯರಿಗೆ ವಿದ್ಯಾರ್ಥಿವೇತನ,ಪ್ಲಾಸ್ಟಿಕ್ ಮುಕ್ತಗೊಳಿಸುವ ನಿಟ್ಟಿನಲ್ಲಿ ಬಟ್ಟೆ ಕೈಚೀಲ ,ಗಿಡವನ್ನು ವಿತರಿಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಮೃತ್ ಜೋಗಿ ವಹಿಸಿದ್ದರು.
ಮುಖ್ಯ ಅಭ್ಯಾಗತರಾಗಿ ಉದ್ಯಮಿಗಳಾದ ಗೋಪಾಲಕೃಷ್ಣ ಮಯ್ಯ,ರಮೇಶ್ ಪ್ರಭು,ಕೋಟ ಗ್ರಾ.ಪಂ ಅಧ್ಯಕ್ಷ ಅಜಿತ್ ದೇವಾಡಿಗ,ಕೋಟ.ಗ್ರಾ.ಪಂ ಘನ ಹಾಗೂ ದ್ರವ ತ್ಯಾಜ್ಯ ಘಟಕದ ಮುಖ್ಯಸ್ಥೆ ಲೋಲಾಕ್ಷಿ ಕೋತ್ವಾಲ್,ಪಂಚವರ್ಣದ ಗೌರವಾಧ್ಯಕ್ಷ ಸತೀಶ್ ಹೆಚ್ ಕುಂದರ್,ಗೌರವ ಸಲಹೆಗಾರ ಕೆ.ವೆಂಕಟೇಶ ಪ್ರಭು,ಚಂದ್ರಶೇಖರ್ ಆಚಾರ್ಯ,ಪರಿಸರವಾದಿ ಕೋ.ಗಿ.ನಾ,ಪಂಚವರ್ಣ ಯುವಕ ಮಂಡಲದ ಸ್ಥಾಪಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ, ಪಂಚವರ್ಣ ಮಹಿಳಾ ಮಂಡಲದ ಸಂಚಾಲಕಿ ಪುಷ್ಭಾ ಕೆ ಹಂದಟ್ಟು, ಮಣೂರು ಫ್ರೆಂಡ್ಸ್ ಅಧ್ಯಕ್ಷ ದಿನೇಶ್ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.ಪಂಚವರ್ಣ ಯುವಕ ಮಂಡಲದ ಕಾರ್ಯಾಧ್ಯಕ್ಷ ರವೀಂದ್ರ ಕೋಟ ಸ್ವಾಗತಿಸಿ ಪ್ರಾಸ್ತಾವನೆ ಸಲ್ಲಿಸಿದರು.
ಕಾರ್ಯಕ್ರಮವನ್ನು ಗೌರವ ಸಲಹೆಗಾರ ಕೆ.ಉಮೇಶ್ ಪ್ರಭು ನಿರೂಪಿಸಿದರು. ಸಂಚಾಲಕ ಅಜಿತ್ ಆಚಾರ್ಯ ವಂದಿಸಿದರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!