Janardhan Kodavoor/ Team KaravaliXpress
25.6 C
Udupi
Saturday, December 3, 2022
Sathyanatha Stores Brahmavara

ನ.25: ಮಾನಸ ವಿಶೇಷ ಶಾಲೆ ಪಾಂಬೂರು~ ರಜತ ಮಹೋತ್ಸವ

ಉಡುಪಿ:  ಮಾನಸ ವಿಶೇಷ ಶಾಲೆ ಪಾಂಬೂರು,  ಇದರ ರಜತ ಮಹೋತ್ಸವವು ನವೆಂಬರ್ 25 ರಂದು ಶುಕ್ರವಾರ  ಶಾಲಾ  ಆವರಣದಲ್ಲಿ, ಸಂಸ್ಥೆಯ ಅದ್ಯಕ್ಷರಾದ   ಹೆನ್ರಿ ಮಿನೇಜಸ್ ಇವರ ಅಧ್ಯಕ್ಷತೆಯಲ್ಲಿ  ಆಯೋಜಿಸಲಾಗಿದೆ.

ಬೆಳಿಗೆ 9.30 ಕ್ಕೆ ಧ್ವಜರೋಹಣ ನಡೆದು, ನಂತರ  ಶಾಲೆಯ ವಿಶೇಷ ಮಕ್ಕಳಿಗೆ ಹಾಗೂಅವರ ಪಾಲಕರಿಗೆ ವಿವಿದ ಸ್ಪರ್ದೆಗಳು ನಡೆಯಲಿವೆ.

ಮದ್ಯಾಹ್ನ 2.30 ಕ್ಕೆ ಮುಂಬಾಯಿಯ ದಾನಿ ನೋಯಲ್ ರಾಸ್ಕಿನ್ಹಾ ದಾನವಾಗಿ ನೀಡಿದ ಹೊಸ ವೃತ್ತಿ ತರಬೇತಿ ಘಟಕವನ್ನು ಉಡುಪಿಯ ಧರ್ಮಧ್ಯಕ್ಷರಾದ ಅತಿ ವಂದನೀಯ ಜೆರಾಲ್ಡ್ ಐಸಾಕ್ ಲೋಬೊ, ಆಶೀರ್ವದಿಸಿ ಉದ್ಘಾಟನೆ ಮಾಡಲಿದ್ದಾರೆ.

ಸಮಾರೋಪ ಕಾರ್ಯಕ್ರಮವು ಅಪರಾಹ್ನ 3 ಘಂಟೆಗೆ ಜರಗಲಿದ್ದು, ಉಡುಪಿಯ ಧರ್ಮಧ್ಯಕ್ಷರಾದ ಅತಿ ವಂದನೀಯ ಜೆರಾಲ್ಡ್  ಐಸಾಕ್ ಲೋಬೊ, ಉಧ್ಘಾಟನೆ ಮಾಡಲಿದ್ದಾರೆ.  ಮಂಗಳೂರಿನ ನಿವೃತ್ತ ಬಿಷಪ್ ಅತಿ ವಂದನೀಯ ಎಲೋಶಿಯಸ್ ಪಾವ್ಲ್ ಡಿ ಸೋಜಾ, ಕಾಪುವಿನ ಶಾಶಕರಾದ  ಲಾಲಾಜಿ. ಆರ್. ಮೆಂಡನ್, ಕರ್ನಾಟಕ ಸರಕಾರದ ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದಾರೆ.

ಪಾ. ಜೆಪ್ರಿನ್ ಮೊನಿಸ್,  ಕೊಡುಗೈ ದಾನಿ   ಮೈಕಲ್ ಡಿ ಸೋಜಾ ಹಾಗೂ ಸೀತಾರಾಮ್ ಶೆಟ್ಟಿ ಮುಂಬಾಯಿ,  ಎಲ್.ಜೆ. ಪೆರ್ನಾಂಡಿಸ್, ವಂದನೀಯ ಭಗಿನಿ ಐಡಾ ಲೋಬೊ, ಪಾ. ಹೆನ್ರಿ ಮಸ್ಕರೇಝಸ್, ಡಾ. ಎಡ್ವರ್ಡ್ ಲೋಬೊ, ಕು. ರೆಮೆಡಿಯಾ ಡಿ ಸೋಜಾ ಅತಿಥಿಗಳಾಗಿದ್ದಾರೆ.

ನಂತರ ಮಾನಸದ ಮಕ್ಕಳಿಂದ ಹಾಗೂ ಅನಿ ಡೇಸ ಹಾಗೂ ಬಳಗದವರಿಂದ ಮನೋರಂಜನ ಕಾರ್ಯಕ್ರಮ ನಡೆಯಲಿದೆ ಎಂದು ರಜತ ಮಹೋತ್ಸವ ಸಮಿತಿಯ ಸಂಚಾಲಕರಾದ ಎಲ್ ರೋಯ್ ಕಿರಣ್ ಕ್ರಾಸ್ಟೊ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!