ಪದ್ಮಶಾಲಿ ಕ್ರೀಡೋತ್ಸವಕ್ಕೆ ಚಾಲನೆ ನೀಡಿದ ಮಟ್ಟಾರು ರತ್ನಾಕರ್ ಹೆಗ್ಡೆ.

ನಿಷ್ಠೆ ಪ್ರಾಮಾಣಿಕತೆ ,ಬದ್ಧತೆ ಮತ್ತು ಅಪಾರ ಇಚ್ಚಾಶಕ್ತಿಗಳಿಂದ ಮಾತ್ರ ಸಮುದಾಯ ಸಂಘಟನೆಗಳು ಸಾಧ್ಯ ಹಾಗು ಕ್ರೀಡೆ ಸಾಂಸ್ಕ್ರತಿಕ ಚಟುವಟಿಕೆಗಳನ್ನು ನಿರಂತರವಾಗಿ ಆಯೋಜಿಸುವುದರಿಂದ ಸಾಮಾಜಿಕ ಸಂಬಂಧಗಳು ಬೆಳೆದು ಸಂಘಟನೆಗಳು ಸದ್ರಢವಾಗುತ್ತದೆ ಎಂದು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮಟ್ಟಾರು ರತ್ನಾಕರ್ ಹೆಗ್ಡೆಯವರು ಅಭಿಮತ ವ್ಯಕ್ತ ಪಡಿಸಿದರು. ಅವರು ಭಾನುವಾರ ಉಡುಪಿ ಅಜ್ಜರಕಾಡಿನ ಮಹಾತ್ಮಾ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪದ್ಮಶಾಲಿ ಮಹಾಸಭಾ ಮಂಗಳೂರು ಇದರ ಆಶ್ರಯದಲ್ಲಿ ಮತ್ತು ಪದ್ಮಶಾಲಿ ನೇಕಾರ ಪ್ರತಿಷ್ಠಾನ ಉಡುಪಿ ಇವರ ಆತಿಥ್ಯದಲ್ಲಿ ಆಯೋಜಿಸಿದ ಪದ್ಮಶಾಲಿ ಕ್ರೀಡೋತ್ಸವಕ್ಕೆ ಮಾಡಿ ಚಾಲನೆ ನೀಡಿ ಮಾತನಾಡಿದರು.

ದಕ್ಷಿಣ ಕನ್ನಡ ಮೀನುಗಾರರ ಫೆಡರೇಶನ್ ಅಧ್ಯಕ್ಷರಾದ ಯಶಪಾಲ್ ಸುವರ್ಣರವರು ಮಾತನಾಡಿ ಜಿಲ್ಲೆಗೆ ಪದ್ಮಶಾಲಿ ಸಮುದಾಯದ ಗಣ್ಯರು ನೀಡಿದ ಸಾಮಾಜಿಕ ಕೊಡುಗೆಗಳನ್ನು ಸ್ಮರಿಸಿದರು. ಸ್ಥಳೀಯ ನಗರಸಭಾ ಸದಸ್ಯೆ ರಶ್ಮಿ ಸಿ ಭಟ್ ಕ್ರೀಡಾ ಜ್ಯೋತಿಯನ್ನು ಹಸ್ತಾಂತರಿಸಿದರು. ಮಹಾಸಭಾ ಮಾಜಿ ಅಧ್ಯಕ್ಷರಾದ ಎಸ್ ಸದಾನಂದ ಶೆಟ್ಟಿಗಾರ್ ಉದ್ಯಾವರ ಇವರು ಕರ‍್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.

ವಾಮದಪದವು ಸರಕಾರಿ ಪ್ರಥಮ ರ‍್ಜೆ ಕಾಲೇಜಿನ ಉಪನ್ಯಾಸಕರಾದ ಶ್ರೀ ಅಶೋಕ್ ಕುಮಾರ್ ಭಾವಿಕಟ್ಟಿ ಹಾಗು ಮಣಿಪಾಲ ಡಾಟ್ ನೆಟ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ತಾಂತ್ರಿಕ ನರ‍್ದೇಶಕರಾದ ಶ್ರೀ ನಾಗರಾಜ್ ಶೆಟ್ಟಿಗಾರ್ ಕಟೀಲ್ ಇವರ ನರ‍್ದೇಶನದಲ್ಲಿ ಉದ್ಯೋಗ ಮಾಹಿತಿ ಶಿಬಿರವನ್ನು ಆಯೋಜಿಸಲಾಯಿತು.
ಬಿಜೆಪಿ ಜಿಲ್ಲಾ ಅಧ್ಯಕ್ಷರಾದ ಕುಯಿಲಾಡಿ ಸುರೇಶ್ ನಾಯಕ್, ಉಡುಪಿ ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ಡಿ ಬಾಲಕೃಷ್ಣ ಶೆಟ್ಟಿ, ನಗರಸಭಾ ಸದಸ್ಯ ಗಿರಿಧರ್ ಆಚರ‍್ಯ, ದೇವದಾಸ್ ವಿ ಶೆಟ್ಟಿಗಾರ್, ಮಂಜುನಾಥ್ ಮಣಿಪಾಲ, ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳ ಪದ್ಮಶಾಲಿ ಸಮುದಾಯಕ್ಕೆ ಸಂಬಂಧ ಪಟ್ಟ ಕೂಡುಕಟ್ಟಿನ ಹದಿನಾರು ದೇವಸ್ಥಾನಗಳ ಅಧ್ಯಕ್ಷರು ಹಾಗು ಮೊಕ್ತೇಸರರಾದ ಡಾ ಜಯರಾಮ್ ಶೆಟ್ಟಿಗಾರ್, ಜ್ಯೋತಿ ಪ್ರಸಾದ್ ಶೆಟ್ಟಿಗಾರ್, ಬಾಲಕೃಷ್ಣ ಶೆಟ್ಟಿಗಾರ್, ಪ್ರಭಾಶಂಕರ್ ಶೆಟ್ಟಿಗಾರ್, ಜನರ‍್ದನ್ ಶೆಟ್ಟಿಗಾರ್, ರತ್ನಾಕರ್ ಕಾಂತಪ್ಪ ಗುರಿಕಾರ, ಭಾಸ್ಕರ್ ಶೆಟ್ಟಿಗಾರ್, ಬಾಲಕೃಷ್ಣ ಕಲ್ ಭಾವಿ, ಈಶ್ವರ್ ಎನ್ ಶೆಟ್ಟಿಗಾರ್, ಓಂಪ್ರಕಾಶ್ ಡಿ ಶೆಟ್ಟಿಗಾರ್, ಪುರಂದರ ಶೆಟ್ಟಿಗಾರ್, ವಿವೇಕ್ ಶೆಟ್ಟಿಗಾರ್ ಇನ್ನಾ, ಸುಂದರ್ ಶೆಟ್ಟಿಗಾರ್, ನಾಮದೇವ್, ಚಂದ್ರಹಾಸ ಗುರಿಕಾರ, ಐತಪ್ಪ ಶೆಟ್ಟಿಗಾರ್, ಮಹಾಸಭಾ ಮತ್ತು ಪ್ರತಿಷ್ಠಾನದ ಪ್ರಮುಖರಾದ ಡಾ.ಶಿವಪ್ರಸಾದ ಕೆ, ದಟ್ಟರಾಜ್ ಶೆಟ್ಟಿಗಾರ್, ಸರೋಜಾ ಶೆಟ್ಟಿಗಾರ್, ನರೇಂದ್ರ ಶೆಟ್ಟಿಗಾರ್, ಸದಾಶಿವ ಗೋಳಿಜೋರ, ವಿಠ್ಠಲ್ ಶೆಟ್ಟಿಗಾರ್ ಕರ‍್ಕಳ, ರಾಮದಾಸ್ ಶೆಟ್ಟಿಗಾರ್ ಪಣಿಯಾಡಿ, ಪ್ರಭಾಕರ್ ಕುಕ್ಕಿಕಟ್ಟೆ, ವಿಠ್ಠಲ್ ಶೆಟ್ಟಿಗಾರ್ ಕಾಟಿಪಳ್ಳ, ಪ್ರತಿಷ್ಠಾನದ ಅಧ್ಯಕ್ಷರ ರತ್ನಾಕರ್ ಇಂದ್ರಾಳಿ ಸ್ವಾಗತಿಸಿದರು. ಬೆಂಗಳೂರಿನ ಉಪನ್ಯಾಸಕಿ ನವ್ಯಶ್ರೀ ಪ್ರವೀಣ್ ನಿರೂಪಿಸಿದರು. ಕೋಶಾಧಿಕಾರಿ ರಾಘವ ಶೆಟ್ಟಿಗಾರ್ ವಂದಿಸಿದರು.

 
 
 
 
 
 
 
 
 
 
 

Leave a Reply