ಪದ್ಮಶಾಲಿ ತರುಣ ವೃಂದ, ಶ್ರಿ ವೀರಭದ್ರ ದೇವಸ್ಥಾನ ಕಿನ್ನಿಮುಲ್ಕಿ, ಉಡುಪಿ ಇದರ ವತಿಯಿಂದ ಶ್ರೀ ವರಮಹಾಲಕ್ಷ್ಮಿಪೂಜೆಯು ದೇವಸ್ಥಾನದ ವೀರಭದ್ರ ಕಲಾಭವನದಲ್ಲಿ ಜರಗಿತು. ದೇವಸ್ಥಾನದ ಅರ್ಚಕರಾದ ವಾದಿರಾಜ್ ಭಟ್ ಮತ್ತು ರವೀಂದ್ರ ಭಟ್ ಪೌರೋಹಿತ್ಯದಲ್ಲಿ ಜರಗಿದ ಪೂಜೆಯಲ್ಲಿ ನೂರಾರು ಮಂದಿ ಭಕ್ತರು ಭಾಗವಹಿಸಿ ಪುನೀತರಾದರು. ಸೇರಿದ ಭಕ್ತಾದಿಗಳಿಗೆ ಅನ್ನ ಪ್ರಸಾದ ವಿತರಿಸಲಾಯಿತು. ವೃಂದದ ಸದಸ್ಯೆಯರಿಂದ ಭಜನಾ ಸಂಕೀರ್ತನೆ ಜರಗಿತು.
KaravaliXpress.com - ವಿಶ್ವಾಸದ ನಡೆ
ಬದಲಾವಣೆ ಜಗದ ನಿಯಮ. ಅದಕ್ಕೆ ಮಾಧ್ಯಮ ಲೋಕವೂ ಹೊರತಲ್ಲ.
ಪತ್ರಿಕಾರಂಗದಲ್ಲಿ ಸುಮಾರು ಎರಡು ದಶಕಗಳ ಅನುಭವ, ಸಹೃದಯರ ಒಡನಾಟದ ಅನುಭವಾಮೃತದಿಂದ ಮೊಳಕೆಯೊಡೆದಿದೆ ಈ ವೆಬ್ ಸುದ್ದಿಜಾಲ.