“ಕೃಷ್ಣಪ್ರೇಮ”ಪ್ರಶಸ್ತಿ ಪ್ರದಾನ ಸಮಾರಂಭ

ನೃತ್ಯನಿಕೇತನ ಕೊಡವೂರು ಸಂಸ್ಥೆಯವತಿಯಿಂದ ಪ್ರಾಯೋಜಿಸುತ್ತಿರುವ ಸಂಸ್ಥೆಯ ಸ್ಥಾಪಕ ಅಧ್ಯಕ್ಷ ದಿವಂಗತ ಕೆ ಕೃಷ್ಣಮೂರ್ತಿ ರಾಯರ ಹೆಸರಿನಲ್ಲಿನೀಡುತ್ತಿರುವ ಮೂರನೇ ವರುಷದ “ಕೃಷ್ಣ ಪ್ರೇಮ “ಪ್ರಶಸ್ತಿ 2021ನ್ನು ಕಲೆಯ ವಿವಿಧ ಪ್ರಕಾರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡ ನಾಲ್ಕು ಮಂದಿ ಹಿರಿಯಸಾಧಕರಿಗೆ ನೀಡಲಾಗುತ್ತಿದೆ.

ಸಂಗೀತ ಕ್ಷೇತ್ರದಲ್ಲಿ ಕಳೆದ 50 ವರ್ಷಗಳಿಂದ ತನ್ನನ್ನು ತೊಡಗಿಸಿಕೊಂಡ ಸಂಗೀತ ಕಲಾವಿದ ಉಡುಪಿಯ ಅಕಾಡೆಮಿ ಆಫ್ ಮ್ಯೂಸಿಕ್ ಅಂಡ್ ಫೈನ್ ಆರ್ಟ್ಸ್ ನ ಸಂಗೀತ ಪ್ರಾದ್ಯಾಪಕರಾಗಿರುವ “ಸಂಗೀತ ಕಲಾತಪಸ್ವಿ” ವಿದ್ವಾನ್ ಮಧೂರು .ಪಿ. ಬಾಲಸುಬ್ರಹ್ಮಣ್ಯಂ, ಕಲಾವಿಮರ್ಶಕರಾಗಿರುವ ನೃತ್ಯಕ್ಷೇತ್ರಕ್ಕೆಅನೇಕ ನೃತ್ಯ ಸಂಬಂಧಿ ನಾಟ್ಯಗ್ರಂಥಗಳನ್ನು ನೀಡಿರುವ ಪ್ರೊ| ಕೆ.ರಾಮಮೂರ್ತಿರಾವ್ ಮೈಸೂರು , ಉಡುಪಿಯ ಹೆಚ್ಚಿನ ನಾಟಕ ತಂಡಗಳಿಗೆ ರಂಗ ಸಂಗೀತ ನಿರ್ದೇಶಕರಾಗಿದ್ದ ಮೂರು ಸಾವಿರಕ್ಕೂ ಅಧಿಕ ಸಾಮಾಜಿಕ , ಪೌರಾಣಿಕ, ಐತಿಹಾಸಿಕ, ನಾಟಕಗಳಿಗೆ ಸಂಗೀತ ನಿರ್ದೇಶನ ಮಾಡಿರುವ  ಕೆ.ರಾಘವೇಂದ್ರ ಭಟ್ ಮತ್ತು ಉಡುಪಿಯ ಪ್ರೇಮ ಆರ್ಟ್ಸ್ ಮುಖಾಂತರ ವಸ್ತ್ರಾಲಂಕಾರ, ವರ್ಣಾಲಂಕಾರ ಕಲಾವಿದರಾಗಿ ಸೇವೆ ಸಲ್ಲಿಸಿರುವ ಯು. ಸೋಮನಾಥ್ ರವರಿಗೆ ನೀಡುವುದೆಂದು ಆಯ್ಕೆ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ

ನವೆಂಬರ್ 19 ಶುಕ್ರವಾರದಂದು ಸಂಜೆ 6:00 ಗಂಟೆಗೆ ಕೊಡವೂರಿನ ವಿಪ್ರಶ್ರೀ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು ಕನ್ನಡ ಗಣಕ ಕೀಲಿ ಮಣೆಯ ಕರ್ತೃ ಕೆ.ಪಿ. ರಾಯರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಕಲಾಪ್ರೋತ್ಸಾಹಕ ವಿಶ್ವನಾಥ್ ಶೆಣೈ, ಮತ್ತು ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದ ವ್ಯವಸ್ಥಾಪನಾ ಮಂಡಳಿಯ ಅಧ್ಯಕ್ಷ ಸಾಧು ಸಾಲಿಯಾನ್ ಕೊಡವೂರು ಇವರುಗಳು ಅತಿಥಿಗಳಾಗಿ ಉಪಸ್ಥಿತರಿರುವರು .

ಪ್ರಶಸ್ತಿ ಪ್ರದಾನದ ಬಳಿಕ ವಿದುಷಿ ಅನಘ ಶ್ರೀ ಇವರಿಂದ “ನೃತ್ಯಗಾಥಾ” ಏಕವ್ಯಕ್ತಿ ರಂಗ ಪ್ರಯೋಗ
ನಡೆಯಲಿದೆ ಎಂದು ವಿದ್ವಾನ್ ಸುಧೀರ್ ರಾವ್ ಕೊಡವೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

 
 
 
 
 
 
 
 
 
 
 

Leave a Reply