ನೃತ್ಯನಿಕೇತನ ಕೊಡವೂರಿನ “ನೃತ್ಯಚಾವಡಿ”ಯ ಸರಣಿ 2ರ ಕಾರ್ಯಕ್ರಮ

ಉಡುಪಿ: ನೃತ್ಯನಿಕೇತನ ಕೊಡವೂರು ಸಂಯೋಜಿಸುತ್ತಿರುವ,ಏಕವ್ಯಕ್ತಿ ನೃತ್ಯಪ್ರದರ್ಶನದ ನೃತ್ಯಸರಣಿ “ನೃತ್ಯಚಾವಡಿ”ಯ ಸರಣಿ 2 ರ ಕಾರ್ಯಕ್ರಮ ದಿ.18-04-21 ಆದಿತ್ಯವಾರ ಸಂಜೆ 6-30 ಕ್ಕೆ ಮಣಿಪಾಲದ ನಿರ್ಮಿತಿಕೇಂದ್ರದ ಸೋಪಾನ ವೇದಿಕೆಯಲ್ಲಿ ನಡೆಯಲಿದೆ.

ವಿಜಯಕುಮಾರ್ ಮುದ್ರಾಡಿ ಅತಿಥಿಯಾಗಿ ಭಾಗವಹಿಸಲಿದ್ದು, ನೃತ್ಯ ಕಾರ್ಯಕ್ರಮವನ್ನು  ಯುವ ಕಲಾವಿದೆ ವಿದುಷಿ ಅನಘಶ್ರೀ ನಡೆಸಿಕೊಡಲಿದ್ದಾಳೆ ಎಂದು ಸಂಸ್ಥೆಯ ನಿರ್ದೇಶಕ ವಿದ್ವಾನ್ ಸುಧೀರ್ ಕೊಡವೂರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಕಲಾವಿದೆ ಅನಘ ಶ್ರೀ, ಡಾ. ವೀರಕುಮಾರಮತ್ತು ಡಾ. ಉಷಾಪಾರ್ವತಿ ದಂಪತಿಗಳ ಪುತ್ರಿಯಾದ ಅನಘಶ್ರೀ, ನೃತ್ಯನಿಕೇತನ ಕೊಡವೂರು ಸಂಸ್ಥೆಯ ವಿದ್ವಾನ್ ಸುಧೀರ್ ರಾವ್ ಹಾಗೂ ವಿದುಷಿ ಮಾನಸಿ ಸುಧೀರ್ ಇವರ ಶಿಷ್ಯೆಯಾಗಿ ಕಳೆದ 18 ವರ್ಷಗಳಿಂದ ಭರತನಾಟ್ಯ ಅಭ್ಯಾಸ ಮಾಡುತ್ತಿದ್ದಾಳೆ. 2017ರ ವಿದ್ವತ್ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣಳಾಗಿ ಉಡುಪಿ ಜಿಲ್ಲೆಗೆ ದ್ವಿತೀಯ ಸ್ಥಾನಿಯಾಗಿದ್ದಾಳೆ. ಮಾರ್ಪಳ್ಳಿ ಯಕ್ಷಗಾನ ಮಂಡಳಿಯಲ್ಲಿ ಕಳೆದ 10 ವರ್ಷಗಳಿಂದ ಯಕ್ಷಗಾನ ಅಭ್ಯಾಸವನ್ನು ನಡೆಸುತ್ತಿದ್ದಾಳೆ. ಮಣಿಪಾಲದ ಎಂ.ಐ.ಟಿಯಲ್ಲಿ ಎಂ.ಟೆಕ್ ವ್ಯಾಸಂಗವನ್ನು ನಡೆಸುತ್ತಿದ್ದು ವಿ.ಎಂ ವೇರ್ ನಲ್ಲಿ ಉದ್ಯೋಗಿಯಾಗಿದ್ದಾಳೆ. ದೂರದರ್ಶನದ ‘ಬಿ’ ಶ್ರೇಣಿಯ ಕಲಾವಿದೆಯಾಗಿದ್ದು, ಭರತನಾಟ್ಯಕ್ಕೆ ಕನ್ನಡ ಸಂಸ್ಕೃತಿ ಇಲಾಖೆಯ ಶಿಷ್ಯವೇತನವನ್ನು ಪಡೆದಿದ್ದಾಳೆ. ನೃತ್ಯನಿಕೇತನ ಕೊಡವೂರಿನ ನೃತ್ಯಗಾಥಾ, ನಾರಸಿಂಹ, ಚಿತ್ರಾ, ಶ್ರೀನಿವಾಸ ಕಲ್ಯಾಣ, ಶಬರಿ ಮುಂತಾದ ನೃತ್ಯರೂಪಕ, ನೃತ್ಯನಾಟಕಗಳಲ್ಲಿ ಅಭಿನಯಿಸಿ ಸಂಸ್ಥೆಯ ಭಾಗವಾಗಿ ದೇಶದಾದ್ಯಂತ 500ಕ್ಕೂ ಹೆಚ್ಚಿನ ಕಾರ್ಯಕ್ರಮಗಳನ್ನು ನೀಡಿದ್ದಾಳೆ. ಪುಷ್ಪರಾಣಿ, ಮಹಿಳಾಭಾರತ, ಚೋಮನದುಡಿ, ಗಂಗಿ ಪರಸಂಗ ಇತ್ಯಾದಿ ನಾಟಕಗಳಲ್ಲಿ ಅಭಿನಯಿಸಿದ್ದಾಳೆ. ರೋಣದ ಚಿದಂಬರೇಶ್ವರ ದೇವಸ್ಥಾನದಿಂದ ‘ನೃತ್ಯಕಲಾಶಿರೋಮಣಿ, ಮಾರ್ಪಳ್ಳಿ ಯಕ್ಷಗಾನ ಮಂಡಳಿಯಿಂದ ಅಭಿನಯ ಶಾರದೆ ಎಂಬ ಬಿರುದನ್ನು ಪಡೆದಿದ್ದಾಳೆ.

 
 
 
 
 
 
 
 
 
 
 

Leave a Reply