ಸರಕಾರಿ ಪದವಿಪೂರ್ವ ಕಾಲೇಜು ತೆಂಕನಿಡಿಯೂರು “ವಿಶ್ವ ತಂಬಾಕು ರಹಿತ ದಿನಾಚರಣೆ “

ದಿನಾಂಕ 31.05.2022 ರಂದು ಸರಕಾರಿ ಪದವಿಪೂರ್ವ ಕಾಲೇಜು (ಪ್ರೌಢಶಾಲೆ)ಯಲ್ಲಿ ವಿಶ್ವ ತಂಬಾಕು ದಿನಾಚರಣೆ ಹಾಗೂ ಮಣ್ಣು ಉಳಿಸಿ ಅಭಿಯಾನ ಕಾರ್ಯಕ್ರಮವನ್ನು ಜೊತೆ ಜೊತೆಯಾಗಿ ನಡೆಸಲಾಯಿತು.

ಮೊದಲಿಗೆ 10.30ಕ್ಕೆ ಮಣ್ಣಿನ ಫಲವತ್ತತೆಯ ಬಗ್ಗೆ ಮತ್ತು ಮಣ್ಣಿನ ಫಲವತ್ತತೆಯನ್ನು ಉಳಸುವುದರ ಮಹತ್ವದ ಕುರಿತು ಸದ್ಗುರು ಪೌಂಡೇಶನ್ ನ ಶ್ರೀಮತಿ ಅಮಿತ ಭಟ್ ಮತ್ತು ಶ್ರೀಮತಿ ಪ್ರೀತಿ ಇವರು ಮಕ್ಕಳೊಂದಿಗೆ ಸಂವಾದ ನೆಡೆಸಿದರು ಸಮಾಜ ವಿಜ್ಞಾನ ಶಿಕ್ಷಕರಾದ ಶ್ರೀಯುತ ಶಿವರಾಮ ಶೆಟ್ಟಿಯವರು ತಂಬಾಕಿನಿಂದಾಗುವ ದುಷ್ಪರಿಣಾಮಗಳನ್ನು ತಿಳಿಸಿದರು. ನಂತರ 11 ಗಂಟೆ ಸುಮಾರಿಗೆ ವಿಶ್ವ ತಂಬಾಕು ರಹಿತ ದಿನದ ಪ್ರತಿಜ್ಞಾ ವಿಧಿ ಬೋಧಿಸಿದರು.

ಲ್ಲರೂ ಪ್ರತಿಜ್ಞಾ ವಿಧಿ ಸ್ವೀಕರಿಸಿದರು ಕಾರ್ಯಕ್ರಮದಲ್ಲಿ ಶಿಕ್ಷಕ ವೃಂಧವರು,ಸಿಬ್ಬಂದಿಗಳು ಸದ್ಗುರು ಪೌಂಡೇಶನ್ ಪ್ರತಿನಿಧಿಗಳು ಹಾಜರಿದ್ದರು. ಆಂಗ್ಲ ಭಾಷಾ ಶಿಕ್ಷಕಿಯಾದ ಶ್ರೀಮತಿ ಪ್ರಕಾಶಿನಿಯವರು ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿ, ವಂದಿಸಿದರು .

 
 
 
 
 
 
 
 
 
 
 

Leave a Reply