ನಿಟ್ಟೂರು ಪ್ರೌಢಶಾಲಾ ಶಿಕ್ಷಕ-ರಕ್ಷಕ ಸಂಘದ ಮಹಾಸಭೆ

ಉಡುಪಿ ನಿಟ್ಟೂರು ಪ್ರೌಢ ಶಾಲಾ ಶಿಕ್ಷಕ-ರಕ್ಷಕ ಸಂಘದ ಮಹಾಸಭೆ ದಿನಾಂಕ 22-07-2022 ರಂದು ಶಾಲೆಯ ಸಭಾಂಗಣದಲ್ಲಿ ಜರಗಿತು. ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿ ಮುರಲಿ ಕಡೆಕಾರ್ ಪೋಷಕರನ್ನು ಕುರಿತು ಮಾತನಾಡುತ್ತಾ, ವಿದ್ಯಾರ್ಥಿಗಳ ಕಲಿಕೆಯಲ್ಲಿ ಶಿಕ್ಷಕರಷ್ಟೇ ಪೋಷಕರ ಪಾತ್ರ ಮಹತ್ತರವಾದದು, ಹೆತ್ತವರು ಪ್ರತಿ ದಿನ ತಮ್ಮ ಮಕ್ಕಳಿಗೆ ನಿಗದಿತ ಸಮಯವನ್ನು ಮೀಸಲಿಡಬೇಕು. ಇದರಿಂದ ಕಲಿಕೆ ಸುಲಭ ಸಾಧ್ಯವಾಗುತ್ತದೆ ಎಂದರು. ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಯೋಗಿಶ್ಚಂದ್ರಾಧರ ಮತ್ತು ಉಪಾಧ್ಯಕ್ಷ ದಿನೇಶ್ ಪೂಜಾರಿ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನದಲ್ಲಿ ಶಾಲೆ ಹಲವು ಚಟುವಟಿಕೆಗಳನ್ನು ಹಮ್ಮಿಕೊಂಡಿದೆ ಎಂದರು. ಈ ಸಂದರ್ಭದಲ್ಲಿ ಪಿ. ಎಲ್ ಅಣ್ಣಾಜಿ ರಾವ್ ಸ್ಮಾರಕ ಧರ್ಮ ನಿಧಿಯಿಂದ ಕೊಡಲ್ಪಟ್ಟ ಸಹಾಯಧನವನ್ನು ಆಯ್ದ 40 ವಿದ್ಯಾರ್ಥಿಗಳಿಗೆ ತಲಾ ಒಂದು ಸಾವಿರ ರೂಪಾಯಿ ವಿತರಿಸಲಾಯಿತು. ಎಂಟನೆಯ ತರಗತಿಯ 77 ವಿದ್ಯಾರ್ಥಿಗಳಿಗೆ ಶಾಲಾ ಆಡಳಿತ ಮಂಡಳಿಯ ಜತೆಕಾರ್ಯದರ್ಶಿ ದಿನೇಶ್ ಪೂಜಾರಿಯವರಿಂದ ಕೊಡಲ್ಪಟ್ಟ ಊಟದ ಬಟ್ಟಲುಗಳನ್ನು ವಿತರಿಸಲಾಯಿತು. ಶಾಲಾ ಹಳೆ ವಿದ್ಯಾರ್ಥಿಗಳಾದ ಶಶಿಧರ ಮೆಲಂಟ ಸಹೋದರರ ಧನ ಸಹಾಯದಿಂದ ಎಂಟನೆಯ ತರಗತಿ ವಿದ್ಯಾರ್ಥಿನಿಯರಿಗೆ ಉಚಿತ ಸಮವಸ್ತ್ರ ನೀಡಲಾಯಿತು. ಶಾಲಾ ಹಳೆ ವಿದ್ಯಾರ್ಥಿ ಪಿ. ಪರಶುರಾಮ ಶೆಟ್ಟಿ ಹಾಗೂ ನಿವೃತ್ತ ಅಧ್ಯಾಪಕ ಹೆಚ್.ಎನ್. ಶೃಂಗೇಶ್ವರ ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯಿನಿ ಶ್ರೀಮತಿ ಅನಸೂಯಾ ಸ್ವಾಗತಿಸಿದರು. ಶಿಕ್ಷಕ ದೇವದಾಸ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ರಕ್ಷಕ ಸಂಘದ ಸಂಯೋಜಕ ರಾಮದಾಸ್ ನಾಯ್ಕ್ ವಂದಿಸಿದರು.

 
 
 
 
 
 
 
 
 
 
 

Leave a Reply