Janardhan Kodavoor/ Team KaravaliXpress
24.6 C
Udupi
Thursday, June 30, 2022
Sathyanatha Stores Brahmavara

ನಿಟ್ಟೂರು ಪ್ರೌಢಶಾಲೆ: ಪ್ರತಿಭಾ ಪುರಸ್ಕಾರ

ಉಡುಪಿ : ನಿಟ್ಟೂರು ಪ್ರೌಢಶಾಲೆಯಲ್ಲಿ, ಇತ್ತೀಚೆಗೆ ಜರಗಿದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಸಮಾನ ಅಂಕ ಗಳಿಸಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ (92%) ಈರ್ವರು ವಿದ್ಯಾರ್ಥಿನಿಯರುಗಳಾದ ದೀಪಿಕಾ ಮತ್ತು ನಿಶ್ಚಿತಾ ಇವರಿಗೆ ಶಾಲೆಯ ಹಳೆ ವಿದ್ಯಾರ್ಥಿನಿ ವತಿಯಿಂದ ತಲಾ ೧೦,೦೦೦ ರೂಪಾಯಿ ಪ್ರತಿಭಾ ಪುರಸ್ಕಾರವನ್ನು ನೀಡಿ ಇಂದು (27.05.2022) ಅಭಿನಂದಿಸಲಾಯಿತು.

ನಿಟ್ಟೂರು ಎಜುಕೇಶನ್ ಸೊಸೈಟಿಯ ಕಾರ್ಯದರ್ಶಿ, ನಿವೃತ್ತ ಮುಖ್ಯೋಪಾಧ್ಯಾಯ ಮುರಲಿ ಕಡೆಕಾರ್ ಈ ಸಂದರ್ಭದಲ್ಲಿ ಮಾತನಾಡಿ, ಹಳೆ ವಿದ್ಯಾರ್ಥಿಗಳು ಶಾಲೆಯ ಸಂಪತ್ತು. ತನ್ನ ಹೆಸರನ್ನು ಎಲ್ಲಿಯೂ ಪ್ರಕಟಿಸಬಾರದೆಂದು ಸೂಚಿಸಿ ವಿದೇಶದಲ್ಲಿ ಉದ್ಯೋಗದಲ್ಲಿರುವ ಶಾಲೆಯ ಹೆಮ್ಮೆಯ ಹಳೆವಿದ್ಯಾರ್ಥಿನಿ ದೊಡ್ಡ ಮೊತ್ತವನ್ನು ಕಳುಹಿಸಿರುತ್ತಾರೆ. ಪ್ರತಿಭಾನ್ವಿತ ಬಡ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದ ಹಳೆ ವಿದ್ಯಾರ್ಥಿನಿಯನ್ನು ಅಭಿನಂದಿಸಿ, ನಿಮ್ಮ ಮೇಲಿಟ್ಟ ನಿರೀಕ್ಷೆಯನ್ನು ಹುಸಿಗೊಳಿಸದೆ ಶ್ರದ್ಧೆಯಿಂದ ವಿದ್ಯಾರ್ಜನೆಗೈದಲ್ಲಿ ಶಿಕ್ಷಣಕ್ಕೆ ಹಣದ ಕೊರತೆ ಎಂದೂ ಆಗಲಾರದು ಎಂದು ನುಡಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಅನಸೂಯ ಹಾಗೂ ಶಾಲಾ ಅಧ್ಯಾಪಕವೃಂದ ಉಪಸ್ಥಿತರಿದ್ದರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!