ದಿ. ನಿತ್ಯಾನಂದ ಕೆಮ್ಮಣ್ಣು ಅವರ ಅಭಿಮಾನಿಗಳಿಂದ ಹಣ್ಣು ಹಂಪಲು ವಿತರಣೆ ಕಾರ್ಯಕ್ರಮ

ಕಾಂಗ್ರೆಸ್‌ ಮುಖಂಡ, ತೋನ್ಸೆ ಗ್ರಾಮ ಪಂಚಾಯತ್‌ ನ ಉಪಾಧ್ಯಕ್ಷರಾಗಿದ್ದು, ಕರಾಟೆ ಶಿಕ್ಷಕ ದಿ. ನಿತ್ಯಾನಂದ ಕೆಮ್ಮಣ್ಣು ಅವರ ಹುಟ್ಟು ಹಬ್ಬದ ಪ್ರಯುಕ್ತ ಅವರ ಅಭಿಮಾನಿಗಳಿಂದ ವಿವಿಧ ಕಡೆ ಹಣ್ಣು ಹಂಪಲು ವಿತರಣೆ ಕಾರ್ಯಕ್ರಮ ಜರುಗಿತು.

ಈ ವೇಳೆ ಅಭಿಮಾನ ಬಳಗದ ಸದಸ್ಯರು ಉಡುಪಿ ಜಿಲ್ಲಾಸ್ಪತ್ರೆಯ ರೋಗಿಗಳಿಗೆ, ನಿಟ್ಟೂರು ಸ್ಟೇಟ್‌ ಹೋಮ್‌ ಇಲ್ಲಿನ ನಿವಾಸಿಗಳಿಗೆ, ಹಾಗೂ ಗೊರೆಟ್ಟಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣುಹಂಪಲುಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಕೆಪಿಸಿಸಿ ಪ್ಯಾನಲಿಸ್ಟ್,ಸಮಾಜ ಸೇವಕಿ ವೆರೋನಿಕ ಕನೆ೯ಲಿಯೋ, ಕೀತಿ೯ ಶೆಟ್ಟಿ , ಓಂ ಪ್ರಕಾಶ್ ಕೆಮ್ಮಣ್ಣು ಅಧ್ಯಕ್ಷರು ಉಡುಪಿ ಹಾಲು ಉ.ಸ.ನೌ.ಸ.ಸಂಘ.ಉಡುಪಿ,ಕಜೆ೯ ಗ್ರಾಮ ಪಂಚಾಯತ್ ಅಧ್ಯಕ್ಷರು ರಾಘವೇಂದ್ರ ಶೆಟ್ಟಿ ಕಜೆ೯,ತೋನ್ಸೆ ಗ್ರಾಮದ ಕಾಂಗ್ರೆಸ್ ಪಕ್ಷದ ಕಾಯ೯ಕತ೯ರಾದ ಕುಶಲ್ ಅಮೀನ್ ಬೆಂಗ್ರೆ,ಪುರಂದರ್ ಬೆಂಗ್ರೆ,ದೇವದಾಸ್ ಖಾವಿ೯ ಬೆಂಗ್ರೆ,
ತೋನ್ಸೆ ಗ್ರಾಮ ಪಂಚಾಯತ್ ಸದಸ್ಯರಾದ ಯಶೋಧ ಕೆಮ್ಮಣ್ಣು,ಆಶಾ ತಿಮ್ಮಣ್ಮಕುದ್ರು,ವತ್ಸಲಾ ವಿನೋದ್ ಗುಜ್ಜರುಬೆಟ್ಟು, ಮಹೇಶ್ ಪೂಜಾರಿ ಹೂಡೆ, ಅಂಬೇಡ್ಕರ್ ಯುವ ಸೇನೆ ಉಡುಪಿ ತಾಲ್ಲೂಕು ಉಪಾಧ್ಯಕ್ಷರಾದ ರಿತೇಶ್ ಪಡುಕುದ್ರು, ಪ್ರಥಮ್ ಪೂಜಾರಿ ಅಧ್ಯಕ್ಷರು ಟೀಮ್ ಸಹಾರ, ಪ್ರೀತಿ ಕಲ್ಯಾಣಪುರ ಸೇವಾ ಪ್ರತಿನಿಧಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಶಿವಳ್ಳಿ , ಲಕ್ಷ್ಮೀನಾರಾಯಣ ಆಚಾರ್ಯ : ಗೌರವಾಧ್ಯಕ್ಷರು ರಾಜ್ಯಕರಾಟೆ ಶಿಕ್ಷಕರ ಸಂಘ, ರೋಹಿತಾಕ್ಷ ಉದ್ಯಾವರ ಪ್ರಧಾನ ಕಾರ್ಯದರ್ಶಿ ಉಡುಪಿ ಜಿಲ್ಲಾ ಕರಾಟೆ ಶಿಕ್ಷಕರ ಸಂಘ, ಕರಾಟೆ ಶಿಕ್ಷಕರಾದ ಪ್ರತಿಭಾ ಕೋಟ್ಯಾನ್,ದೀಕ್ಷಿತ್ ಡಿ ಪೂಜಾರಿ,ಪ್ರತಾಪ್ ಪೂಜಾರಿ ಬೈಕಾಡಿ,ಹಾರ್ಥಿಕ ಎಸ್ ಪೂಜಾರಿ,ಸುಶ್ಮಿತಾ ಡಿ ಕೋಟ್ಯಾನ್,ಪ್ರಣೀತ್ ಪಿ ಕೋಟ್ಯಾನ್,ಪ್ರಜಾಯ್ ಪೂಜಾರಿ
ರೋಶನಿ ಪೂಜಾರಿ ಉಪಸ್ಥಿತರಿದ್ದರು. ನಿತ್ಯಾನಂದ ಕೆಮ್ಮಣ್ಣು ಅಭಿಮಾನಿ ಬಳಗದ ಸದಸ್ಯರು ಉಪಸ್ಥಿತರಿದ್ದರು.

ಬ್ರಹ್ಮಾವರ ಬ್ಲಾಕ್‌ ಕಾಂಗ್ರೆಸ್‌ ಹಿಂದುಳಿದ ವರ್ಗ ಘಟಕದ ಅಧ್ಯಕ್ಷರಾಗಿ, ತೋನ್ಸೆ ಗ್ರಾಮ ಪಂಚಾಯತ್‌ ಅಧ್ಯಕ್ಷರಾಗಿ, ಸಲ್ಲಿಸಿದ್ದ ಅವರು ಒರ್ವ ಉತ್ತಮ ಕರಾಟೆಪಟುವಾಗಿದ್ದರು. ಕ್ರೀಡಾ ಸೇವೆಗಾಗಿ ಅವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಕೂಡ ಲಭಿಸಿದ್ದು ಅಸೌಖ್ಯದಿಂದ ಕಳೆದ ವರ್ಷ ಮೇ 24ರಂದು ನಿಧನ ಹೊಂದಿದ್ದರು

 
 
 
 
 
 
 
 
 
 
 

Leave a Reply