ಮತ್ತೆ ಬದಲಾ​ದ ನೈಟ್ ಕರ್ಫ್ಯೂ ಸಮಯ

ಬೆಂಗಳೂರು: ರಾತ್ರಿ ಕರ್ಫ್ಯೂ ಜಾರಿಯಲ್ಲ ಮತ್ತೆ ಬದಲಾವಣೆ. ಡಿಸೆಂಬರ್ 24ರ ರಾತ್ರಿ 11ಗಂಟೆಯಿಂದ ಬೆಳಗ್ಗೆ 5ಗಂಟೆವರೆಗೆ ಜನವರಿ 2ರವರೆಗೆ ರಾತ್ರಿ ಕರ್ಫ್ಯೂ ಜಾರಿಯಲ್ಲಿರಲಿದೆ ಎಂದು ಸರ್ಕಾರ ಹೊರಡಿಸಿರುವ ಪರಿಷ್ಕೃತ ಸುತ್ತೋಲೆಯಲ್ಲಿ ವಿವರಿಸಿದೆ.

ಈ ಮೊದಲು ಕೋವಿಡ್ ನ ರೂಪಾಂತರ ಹೊಂದಿದ ಸೋಂಕಿನ ಭೀತಿಯ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ರವರೆಗೆ ಒಂಬತ್ತು ದಿನಗಳ ಕಾಲ ಕರ್ಫ್ಯೂ ಜಾರಿಯಲ್ಲಿರಲಿದೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಆದೇಶ ಹೊರಡಿಸಿದ್ದರು.

ರಾತ್ರಿ ಕರ್ಫ್ಯೂ ಸಂದರ್ಭದಲ್ಲಿ ಸಂಚಾರ, ಬಸ್ ಓಡಾಟ, ಹೋಟೆಲ್, ಅಂಗಡಿ, ಮುಂಗಟ್ಟು, ಓಲಾ, ಕಾರು, ಬಾರ್ ಆಯಂಡ್ ರೆಸ್ಟೋರೆಂಟ್ ಸೇರಿದಂತೆ ಎಲ್ಲಾ ವಹಿವಾಟು ಬಂದ್ ಮಾಡುವಂತೆ ಎಂದು ಸೂಚಿಸಲಾಗಿದೆ.

ಆದರೆ ಇದಕ್ಕೆ ಹೋಟೆಲ್, ಬಸ್, ಕಾರು, ಓಲಾ ಹಾಗೂ ಬೀದಿ ಬದಿ ವ್ಯಾಪಾರಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸಿ ಸಮಯವನ್ನು ಬದಲಾಯಿಸುವಂತೆ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಬದಲಾದ ಈ ನಿರ್ಧಾರದ ಕುರಿತು ರಾಜ್ಯ ಸರ್ಕಾರ ಪುನ:  ​ಸುತ್ತೋಲೆಯನ್ನು ಹೊರಡಿಸಿದೆ.

 
 
 
 
 
 
 
 
 

Leave a Reply