ನೇತ್ರಜ್ಯೋತಿ ಕಾಲೇಜು ಉಡುಪಿ ಇದರ 2022-23 ನೇ ಓರಿಯೆಂಟೇಶನ್ ಮತ್ತು ಬ್ಯಾಚ್‌ನ ಉದ್ಘಾಟನೆ.

ಪ್ರಸಾದ್ ನೇತ್ರಾಲಯದ ಅಂಗ ಸಂಸ್ಥೆಯಾದ ನೇತ್ರಜ್ಯೋತಿ ಇನ್ಸಿಟ್ಯೂಟ್ ಆಫ್ ಎಲ್ಯಾಡ್ ಹೆಲ್ತ್ ಅಂಡ್ ಪ್ಯಾರಾಮೆಡಿಕಲ್ ಸೈನ್ಸ್ ಉಡುಪಿ ಇದರ 2022-23 ನೇ ಹೊಸ ಬ್ಯಾಚ್ ಉದ್ಘಾಟನೆ ಮತ್ತು ಓರಿಯೆಂಟೇಶನ್ ಕಾರ್ಯಕ್ರಮವನ್ನು ಡಾ.ಎ.ವಿ.ಬಾಳಿಗೆ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ| ಪಿ.ವಿ. ಭಂಡಾರಿ ಇವರು ನೆರವೇರಿಸಿದರು.

ಇದೇ ಸಂದರ್ಭದಲ್ಲಿ ಅವರು ಅರೆ ವೈದ್ಯಕೀಯ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ನಡವಳಿಕೆ, ಶಿಸ್ತು, ಸಮಯಪ್ರಜ್ಞೆ, ಸಂವಹನ, ಪತ್ಯೇತರ ಚಟುವಟಿಕೆಗಳಲ್ಲಿ ಆಸಕ್ತಿ, ವೈದ್ಯಕೀಯ ಸೇವಾ ಮನೋಭಾವನೆ, ಸಮುದಾಯದ ಬಗ್ಗೆ ಕಾಳಜಿ, ವಿದ್ಯಾರ್ಥಿಗಳಲ್ಲಿ ಮೊಬೈಲ್‌ಗಳ ಸದ್ಬಳಕೆ ಹಾಗೂ ದುರ್ಬಳಕೆ, ಸ್ಪೋರ್ಟ್ಸ್ ಮತ್ತು ಆರೋಗ್ಯದ ಬಗ್ಗೆ ಕಾಳಜಿಯ ಬಗ್ಗೆ ಮಾರ್ಗದರ್ಶನ ನೀಡಿದರು.

ಇದೇ ಸಂದರ್ಭದಲ್ಲಿ ನೇತ್ರಜ್ಯೋತಿ ಸಂಸ್ಥೆಯ ಚೇ‌ಮ್ಯಾನ್‌ರಾದ ನಾಡೋಜ ಡಾ| ಕೃಷ್ಣ ಪ್ರಸಾದ್‌ರವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ಇತ್ತೀಚಿನ ದಿನಗಳಲ್ಲಿ ಅರೆ ವೈದ್ಯಕೀಯ ಮತ್ತು ಎಲ್ಯಾಡ್ ಹೆಲ್ತ್ ಆಂಡ್ ಪ್ಯಾರಾಮೆಡಿಕಲ್ ಸೈನ್ ವಿದ್ಯಾರ್ಥಿಗಳ ವೈದ್ಯಕೀಯ ಕ್ಷೇತ್ರದಲ್ಲಿ ಬೇಡಿಕೆ ಮತ್ತು ವಿಫುಲವಾದ ಅವಕಾಶದ ಬಗ್ಗೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.

ಡಾ| ಪಿ.ವಿ. ಭಂಡಾರಿಯವರು ಹೊಸದಾಗಿ ಸೇರ್ಪಡೆಗೊಂಡ ಎಲ್ಲಾ ವಿದ್ಯಾರ್ಥಿಗಳಿಗೆ ಹೂಗುಚ್ಚಗಳನ್ನು ನೀಡಿ ನಮ್ಮ ನೇತ್ರಜ್ಯೋತಿ ಸಂಸ್ಥೆಗೆ ಬರಮಾಡಿಕೊಂಡರು.

ಈ ಸಂದರ್ಭದಲ್ಲಿ ನೇತ್ರಜ್ಯೋತಿ ಕಾಲೇಜಿನ ನಿರ್ದೇಶಕರಾದ ಶ್ರೀಮತಿ ರಶ್ಮಿ ಕೃಷ್ಣಪ್ರಸಾದ್‌ರವರು, ಆಸ್ಪತ್ರೆಯ ಆಡಳಿತ ಅಧಿಕಾರಿಯಾದ ಶ್ರೀ ಎಂ. ವಿ. ಆಚಾರ್ಯ, ಪ್ರಾಂಶುಪಾಲರಾದ ಶ್ರೀ ರಾಜೀಬ್ ಮಂಡಲ್, ಕಾಲೇಜಿನ ಆಡಳಿತ ಅಧಿಕಾರಿಯಾದ ಶ್ರೀ ಅಬ್ದುಲ್ ಖಾದರ್, ಉಪ ಪ್ರಾಂಶುಪಾಲರಾದ ಶ್ರೀಮತಿ ಸುಪ್ರೀತ, ಸಂಸ್ಥೆಯ ಆಕಾಡೆಮಿಕ್ ಕೋ-ಆರ್ಡಿನೇಟರ್’ ಶ್ರೀ ಬಾಲಕೃಷ್ಣ ಇವರುಗಳು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply