Janardhan Kodavoor/ Team KaravaliXpress
24.6 C
Udupi
Sunday, September 25, 2022
Sathyanatha Stores Brahmavara

ಹಿಂದೂ ಕಾರ್ಯಕರ್ತ ಕನ್ನಯ್ಯ ಲಾಲ್ ಹತ್ಯೆ ~ ನಯನಾ ಗಣೇಶ್ ಖಂಡನೆ

ನೂಪುರ್ ಶರ್ಮಾ ಹೇಳಿಕೆ ಪರವಾಗಿ ಪೋಸ್ಟ್ ಮಾಡಿದ ನೆಪವಾಗಿಟ್ಟು ರಾಜಸ್ತಾನ  ಉದಯಪುರದ ಹಿಂದೂ ಕಾರ್ಯಕರ್ತ ಕನ್ನಯ್ಯ ಲಾಲ್ ರನ್ನು  ಮತಾಂಧ ಶಕ್ತಿಗಳು ತಾಲಿಬಾನ್ ಮಾದರಿಯಲ್ಲಿ ಹತ್ಯೆ ಮಾಡಿರುವ ಘಟನೆಯನ್ನು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ನಯನಾ ಗಣೇಶ್ ಉಗ್ರವಾಗಿ ಖಂಡಿಸಿದ್ದಾರೆ.
 
ರಾಜಸ್ಥಾನದ ಈ ಘಟನೆ ಹೇಯ ಕೃತ್ಯವಾಗಿದ್ದು,ಮಾನವೀಯ ಸಮಾಜ ಕ್ಷಮಿಸಲಾರದ ಘಟನೆಯಾಗಿದೆ. ತಾಲಿಬಾನ್ ಮಾದರಿಯಲ್ಲಿ ಹತ್ಯೆ ಯ ಚಿತ್ರಣ ಮಾಡಿ ದೇಶದಲ್ಲಿ ಭಯದ ವಾತಾವರಣ ಮೂಡಿಸಲು ಕೆಲ ಶಕ್ತಿಗಳು ಪ್ರಯತ್ನ ಮಾಡುತ್ತಿದೆ, ರಾಜಸ್ಥಾನದ ಕಾಂಗ್ರೆಸ್ ಸರ್ಕಾರದ ತುಷ್ಟಿಕರಣ ನೀತಿಯೇ ಈ ಘಟನೆಗೆ ಕಾರಣವಾಗಿದೆ. 
 
ದೇಶದಲ್ಲಿ ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ  ಬಹುಸಂಖ್ಯಾತರ ಭಾವನೆಗಳ ವಿರುದ್ಧವಾಗಿ ಹೇಳಿಕೆ ನೀಡುವ  ಸೆಕ್ಯುಲರ್ ಪಕ್ಷಗಳು ಮತ್ತು ವಿಚಾರವಂತ ಬುದ್ದಿ ಜೀವಿಗಳು ಈ ಘಟನೆ ಬಗ್ಗೆ ನಿಲುವೇನು? ಇಂತಹ ಮತಾಂಧ ಶಕ್ತಿಗಳನ್ನು ಏಳವೆಯಲ್ಲಿ ಮಟ್ಟ ಹಾಕುವ ಅಗತ್ಯವಿದೆ, ಈ ಜಿಹಾದಿ ಶಕ್ತಿಗಳು ಪ್ರಜಾಪ್ರಭುತ್ವಕ್ಕೆ ಮಾರಕವಾಗಿದ್ದು, ಆರೋಪಿಗಳಿಗೆ ಮರಣ ದಂಡನೆಯೇ ಸೂಕ್ತವೆಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ನಯನಾ ಗಣೇಶ್ ಪತ್ರಿಕಾ ಹೇಳಿಕೆ ಯಲ್ಲಿ ತಿಳಿಸಿದ್ದಾರೆ
- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!