Janardhan Kodavoor/ Team KaravaliXpress
24.6 C
Udupi
Monday, November 28, 2022
Sathyanatha Stores Brahmavara

ದುರ್ಗಾದೇವಿಯ ಏಳನೇ ರೂಪ ದೇವಿ “ಕಾಳರಾತ್ರಿ”

ನವರಾತ್ರಿಯಲ್ಲಿ ದುರ್ಗಾ ದೇವಿಯ ಒಂಬತ್ತು ವಿಭಿನ್ನ ರೂಪಗಳನ್ನು ಪೂಜಿಸುವುದು ವಿಶೇಷ ಮಹತ್ವವನ್ನು ಹೊಂದಿದೆ. ಅದೇ ರೀತಿ ನವರಾತ್ರಿಯ ಏಳನೇ ದಿನದಂದು ಕಾಳರಾತ್ರಿ ದೇವಿಯನ್ನು ಪೂಜಿಸುವ ಪದ್ಧತಿಯಿದೆ. ಈ ದಿನ ಕಾಳರಾತ್ರಿ ದೇವಿಯನ್ನು ವಿಧಿ – ವಿಧಾನಗಳ ಮೂಲಕ ಪೂಜಿಸುವುದರಿಂದ ಭಕ್ತನು ಎಲ್ಲಾ ರೀತಿಯ ಭಯದಿಂದ ಮುಕ್ತನಾಗುತ್ತಾನೆ ಮತ್ತು ಎಲ್ಲಾ ಸಮಸ್ಯೆಗಳಿಂದ ಪರಿಹಾರ ಪಡೆಯುತ್ತಾನೆ ಎನ್ನುವ ನಂಬಿಕೆಯಿದೆ.

ದುರ್ಗಾ ದೇವಿಯ 7ನೇ ರೂಪವಾದ ಕಾಳರಾತ್ರಿಯು ಮೂರು ಭಯಾನಕ ಕಣ್ಣುಗಳನ್ನು ಮತ್ತು 4 ಕೈಗಳನ್ನು ಹೊಂದಿದ್ದಾಳೆ. ಈಕೆಯು ತನ್ನ ಮೇಲಿನ ಬಲಗೈ ವರದ ಮುದ್ರೆಯಲ್ಲಿದೆ ಮತ್ತು ಕೆಳಗಿನ ಬಲಗೈ ಅಭಯ ಮುದ್ರೆಯಲ್ಲಿದೆ. ಎಡಭಾಗದಲ್ಲಿರುವವರು ಒಂದು ಕೈಯಲ್ಲಿ ಕಬ್ಬಿಣದ ಮುಳ್ಳುಗಳಂತಿರುವ ಆಯುಧವನ್ನು ಮತ್ತು ಇನ್ನೊಂದು ಕೈಯಲ್ಲಿ ಖಡ್ಗವನ್ನು ಹಿಡಿದುಕೊಂಡು ಕತ್ತೆಯ ಮೇಲೆ ಸವಾರಿ ಮಾಡುತ್ತಾಳೆ. ಘೋರ ಕಪ್ಪು ಮೈಬಣ್ಣವನ್ನು ಹೊಂದಿರುವ ಈಕೆ, ಬಿಚ್ಚಿದ ದಟ್ಟ ತಲೆಕೂದಲು, ಕೊರಳಲ್ಲಿ ರುಂಡ ಮಾಲೆ, ಬಾಯಲ್ಲಿ ಉರಿಯುವ ಬೆಂಕಿಯನ್ನು ಹೊಂದಿದ್ದಾಳೆ. ಪುರಾಣಗಳ ಪ್ರಕಾರ, ಕಾಳರಾತ್ರಿ ದೇವಿಯು ಶುಂಭ, ನಿಶುಂಭರನ್ನು ಸಂಹಾರ ಮಾಡಲು ಈ ರೂಪವನ್ನು ತೆಗೆದುಕೊಂಡಳು ಎಂದು ಹೇಳಲಾಗುತ್ತದೆ.

ಕಾಳರಾತ್ರಿ ದೇವಿಯನ್ನು ಪೂಜಿಸುವುದರಿಂದ ವ್ಯಕ್ತಿಯು ಸಕಲ ಸಿದ್ಧಿಗಳನ್ನು ಹೊಂದುತ್ತಾನೆ ಎನ್ನುವ ನಂಬಿಕೆಯಿದೆ. ಮಹಾಶಕ್ತಿಗಳನ್ನು (ತಂತ್ರ – ಮಂತ್ರಗಳನ್ನು) ಅಭ್ಯಾಸ ಮಾಡುವ ಜನರಲ್ಲಿ ಕಾಳರಾತ್ರಿ ದೇವಿಯು ಹೆಚ್ಚು ಪ್ರಚಲಿತದಲ್ಲಿದ್ದಾಳೆ. ತಾಯಿಯ ಮೇಲಿನ ಭಕ್ತಿಯು ದುಷ್ಟರನ್ನು ನಾಶಪಡಿಸುತ್ತದೆ ಮತ್ತು ಎಲ್ಲಾ ರೀತಿಯ ಗ್ರಹಗಳ ಅಡೆತಡೆಗಳನ್ನು ನಿವಾರಿಸುತ್ತದೆ.

ದಂತಕಥೆಯ ಪ್ರಕಾರ, ರಾಕ್ಷಸರಾದ ಶುಂಭ-ನಿಶುಂಭ ಮತ್ತು ರಕ್ತಬೀಜಾಸುರರು ಮೂರು ಲೋಕಗಳಲ್ಲಿ ತಮ್ಮ ಭಯವನ್ನು ಸೃಷ್ಟಿಸಲು ಮುಂದಾದರು. ಇದರಿಂದ ಆತಂಕಗೊಂಡ ದೇವತೆಗಳೆಲ್ಲ ಶಿವನ ಮೊರೆ ಹೋದರು. ರಾಕ್ಷಸರನ್ನು ಸಂಹರಿಸಿ ತನ್ನ ಭಕ್ತರನ್ನು ರಕ್ಷಿಸುವಂತೆ ಶಿವನು ಪಾರ್ವತಿಯನ್ನು ಕೇಳಿದನು. ಶಿವನ ಸಲಹೆಯಂತೆ ಪಾರ್ವತಿಯು ದುರ್ಗೆಯ ರೂಪವನ್ನು ತೆಗೆದುಕೊಂಡು ಶುಂಭ-ನಿಶುಂಭರನ್ನು ಕೊಂದಳು. ಆದರೆ ದುರ್ಗಾ ದೇವಿಯು ರಕ್ತಬೀಜಾಸುರನನ್ನು ಕೊಂದ ತಕ್ಷಣ ಆತನ ದೇಹದಿಂದ ಹೊರಬಂದ ರಕ್ತದಿಂದ ಲಕ್ಷಗಟ್ಟಲೆ ರಕ್ತಬೀಜಾಸುರರು ಉತ್ಪತ್ತಿಯಾದರು. ಇದನ್ನು ನೋಡಿದ ದುರ್ಗಾ ಮಾತೆಯು ತನ್ನ ತೇಜಸ್ಸಿನಿಂದ ಕಾಳರಾತ್ರಿಯನ್ನು ರಚಿಸಿದಳು. ಇದಾದ ನಂತರ ದುರ್ಗಾ ದೇವಿಯು ರಕ್ತಬೀಜಾಸುರರನ್ನು ಕೊಂದಾಗ ಕಾಳರಾತ್ರಿಯು ಆತನ ದೇಹದಿಂದ ಹೊರಬರುತ್ತಿದ್ದ ರಕ್ತವನ್ನು ತನ್ನ ಬಾಯಿಯಲ್ಲಿ ತುಂಬಿಕೊಂಡು ರಕ್ತಬೀಜಾಸುರನನ್ನು ಸೀಳಿ ಕೊಂದಳು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!