ಮೂಳೆ ಸಾಂದ್ರತೆ ಮತ್ತು ಆರೋಗ್ಯ ತಪಾಸಣೆ ಶಿಬಿರ

ಸಮಾಜ ಸೇವೆ ಮಾಡುವ ಮೂಲಕ ನಮ್ಮ ಜೀವನವನ್ನು ನಾವು ಆನಂದಿಸುತ್ತೇವೆ. ಇಂದಿನ ಹೆಚ್ಚಿನ ಜನರಿಗೆ ಮೂಳೆಗೆ ಸಂಬಂಧ ಪಟ್ಟ ತೊಂದರೆಗಳು ಹೆಚ್ಚಾಗುತ್ತಿದೆ ಇದಕ್ಕೆ ಮುಖ್ಯ ಕಾರಣ ಸೂರ್ಯನ ಬೆಳಕಿಗೆ ಹೋಗದೆ ಇರೋದು. ಹಿಂದಿನ ಕಾಲದಲ್ಲಿ ನಮ್ಮ ಜನರು ಬಿಸಿಲಿನಲ್ಲಿ ಹೆಚ್ಚಿನ ಸಮಯವನ್ನು ತಮ್ಮ ಕೆಲಸದ ಮುಖಾಂತರ ಕಳೆಯುತ್ತಿದ್ದರು. ರೋಗ ಬರುವ ಮೊದಲು ಅದನ್ನು ಮೊದಲೇ ಪರೀಕ್ಷೆ ಮಾಡಿ ತಿಳಿದಾಗ ಅದರ ಉಲ್ಬಣತೆಯನ್ನು ದೂರ ಮಾಡಬಹುದಾಗಿದೆ ಎಂದು ಖ್ಯಾತ ಮಕ್ಕಳ ತಜ್ಞರಾಗಿರುವ ಡಾ. ಜನಾರ್ಧನ ಪ್ರಭು ಅವರು ತಿಳಿಸಿದರು.

ಇವರು ಶಿವಾನಿ ಡಯಾಗ್ನೋಸ್ಟಿಕ್ ಸೆಂಟರ್ ಉಡುಪಿ ಮತ್ತು ನವ್ಯ ಚೇತನ ಶಿಕ್ಷಣ ಸಂಶೋಧನೆ ಮತ್ತು ಕಲ್ಯಾಣ ಟ್ರಸ್ಟ್ ಇದರ ವತಿಯಿಂದ ನವಚೇತನ ಯುವಕ ಮಂಡಳಿ ಇದರ ಸಭಾಂಗಣದಲ್ಲಿ ನಡೆದ ಮೂಳೆ ಸಾಂದ್ರತೆ ಮತ್ತು ಆರೋಗ್ಯ ತಪಾಸಣೆ ಶಿಬಿರದಲ್ಲಿ ಮಾತನಾಡಿದರು.

ಆರೋಗ್ಯ ಬಹಳ ಮುಖ್ಯ ಈ ಆರೋಗ್ಯವನ್ನು ಕಾಪಾಡಿಕೊಂಡು ಬರುವ ಲ್ಲಿ ನಮ್ಮ ದಿನನಿತ್ಯದ ನಡವಳಿಕೆ ಸುಧಾರಿಸಬೇಕು, ಆರೋಗ್ಯವಿದ್ದರೆ ಜೀವನ ಇದರಿಂದ ಸಂತೋಷ ಜೀವನ ನೀಡುತ್ತದೆ ಎಂದು ಡಾ!! ರವೀಂದ್ರನಾಥ್ ಶೆಟ್ಟಿ ಅವರು ತಿಳಿಸಿದರು ವೇದಿಕೆ ಮೇಲೆ ತಜ್ಞ ವೈದ್ಯರಾದ ಡಾ!! ಸುಚರಿತ ರಾಜೇಂದ್ರ, ಡಾ!!ದೀಪಕ್ ಕಡಿಯಾಳಿ, ಡಾ. ಸದಾನಂದ ಎಲ್ ಭಟ್, ಉಪಸ್ಥಿತರಿದ್ದರು.

ಡಾ!! ಶಿವಾನಂದ ನಾಯಕ್ ಪ್ರಸ್ತಾವಿಕ ಮಾತುಗಳನ್ನಾಡಿ ಟ್ರಸ್ಟ್ ಮತ್ತು ಶಿವಾನಿ ಡಯಾಗ್ನೋಸ್ಟಿಕ್ ಸೆಂಟರ್ ನ ಚಟುವಟಿಕೆಗಳನ್ನು ವಿವರಿಸಿದರು.

ನವ್ಯ ಚೇತನ ಟ್ರಸ್ಟಿನ ಕಾರ್ಯದರ್ಶಿಗಳಾದ ರಾಜಶಂಕರ್ ಅತಿಥಿಗಳನ್ನು ಸ್ವಾಗತಿಸಿ ಟ್ರಸ್ಟಿ ಚಂದ್ರಶೇಖರ್ ವಂದಿಸಿದರು. ಅನ್ನಪೂರ್ಣ ಕಾರ್ಯಕ್ರಮ ನಿರ್ವಹಿಸಿದರು. ಈ ಕಾರ್ಯಕ್ರಮದಲ್ಲಿ ಡಾ!! ಅಮರೀನ್, ಅನಿತಾ, ಕನ್ನಡ ಸಾಹಿತ್ಯ ಪರಿಷತ್ ಸಂಘಟನಾ ಕಾರ್ಯದರ್ಶಿ ರಾಘವೇಂದ್ರ ಪ್ರಭು ಕರ್ವಾಲು ಮತ್ತು ಶಿವಾನಿ ಡಯಾಗ್ನೋಸ್ಟಿಕ್ ಅಂಡ್ ರಿಸರ್ಚ್ ಸೆಂಟರ್ ನ ಸಿಬ್ಬಂದಿಗಳು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply