ಹತ್ರಾಸ್ ನ ಅತ್ಯಾಚಾರ ಪ್ರಕರಣವನ್ನು ಸಿಬಿಐಗೆ​~ಯೋಗಿ ಆದಿತ್ಯನಾಥ್ 

ಲಕ್ನೋ: ಯುಪಿ ಹತ್ರಾಸ್‌ನಲ್ಲಿ ದಲಿತ ಯುವತಿಯ ಮೇಲೆ ನಡೆದ ಅತ್ಯಾಚಾರಕ್ಕೆ ಸಂಬಂಧಿಸಿದ ಪ್ರಕರಣ ಮತ್ತು ಅಂತ್ಯಕ್ರಿಯೆ ವಿವಾದಕ್ಕೆ ಸಂಬಂಧಿಸಿ ಕಾಂಗ್ರೆಸ್ ಹೋರಾಟ ನಡೆಸುತ್ತಿರುವಂತೆಯೇ, ಹಲವರ ಬೇಡಿಕೆಯಂತೆ ಪ್ರಕರಣವನ್ನು ಈಗ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸಿಬಿಐಗೆ ಒಪ್ಪಿಸುವುದಾಗಿ ಘೋಷಣೆ ಮಾಡಿದ್ದಾರೆ.​ 

ಶನಿವಾರದಂದು ಪ್ರಕರಣದ ತನಿಖೆ ಕೊನೆಗೊಳ್ಳುತ್ತಿದಂತೆ, ಕಾಂಗ್ರೆಸ್ ನಾಯಕರಾದ ಪ್ರಿಯಾಂಕಾ ವಾದ್ರಾ ಮತ್ತು ರಾಹುಲ್ ಗಾಂಧಿಯವರನ್ನು ಮಾತ್ರವಲ್ಲದೆ ಮಾಧ್ಯಮಗಳಿಗೂ ಸಂತ್ರಸ್ತ ಕುಟುಂಬವನ್ನು ಭೇಟಿಯಾಗಲು ಉತ್ತರ ಪ್ರದೇಶ ಸರಕಾರ ಅವಕಾಶ ನೀಡಿತ್ತು. ಅದರ ಬೆನ್ನಲ್ಲೇ  ಇದೀಗ ಪ್ರಕರಣವನ್ನು ಸಿಬಿಐಗೆ ಒಪ್ಪಿಸುವ ಮಹತ್ವದ ನಿರ್ಧಾರಕ್ಕೆ ತೆಗೆದುಕೊಂಡಿದೆ.

ಈಗಾಗಲೇ ಅ.14ರೊಳಗೆ ಸಿಟ್‌ಗೆ ತನಿಖಾ ವರದಿ ನೀಡುವಂತೆ ಆದೇಶ ಮಾಡಿರುವ ಯೋಗಿ ಆದಿತ್ಯನಾಥ್ ಅವರು ದೇಶದಲ್ಲೇ ಈ ಅತ್ಯಾಚಾರ ಪಾತಕಿಗಳಿಗೆ ಮಾದರಿ ಶಿಕ್ಷೆಯಾಗುವಂತೆ ಮಾಡುವುದಾಗಿ ಪ್ರತಿಜ್ಞೆ ಮಾಡಿದ್ದಾರೆ. ಹಾಗೆ ಸಹೋದರಿಯರು ಮತ್ತು ತಾಯಂದಿರ ಸುರಕ್ಷತೆಗೆ ತಮ್ಮ ಸರಕಾರ ಸದಾ ಮೊದಲ ಆದ್ಯತೆ ನೀಡಲಿದೆ ಎಂದಿದ್ದಾರೆ.​ 

ಇನ್ನು ಬಿಜೆಪಿ ಈ ಕುರಿತಂತೆ ಪ್ರತಿಕ್ರಿಯಿಸಿದ್ದು​ ಕಾಂಗ್ರೆಸ್ ಈ ಪ್ರಕರಣವನ್ನು ತನ್ನ ರಾಜಕೀಯ ಸಾಧನೆಗೆ ಬಳಸಿ ಕೊಳ್ಳುತ್ತಿದೆ.ಕಾಂಗ್ರೆಸ್ ಸರ್ಕಾರದ ರಾಜಸ್ತಾನದಲ್ಲಿ ನಡೆದ ಅತ್ಯಾಚಾರ ಪ್ರಕರಣಗಳ ಬಗ್ಗೆ ಮಾತನಾಡದೆ ಉತ್ತರ ಪ್ರದೇಶದ ಈ ಪ್ರಕರಣವನ್ನು ಯೋಗಿ ಆದಿತ್ಯನಾಥ್ ವಿರುದ್ಧದ ಹೋರಾಟಕ್ಕೆ ಅಸ್ತ್ರವಾಗಿಸಿಕೊಂಡಿದೆ ಎಂಬುದಾಗಿ  ಆರೋಪಿಸಿದೆ.

 
 
 
 
 
 
 
 
 

Leave a Reply