ಬೆಂಗಳೂರು : ಭಾರತೀಯ ಯೋಧರು ಸಾಧನಾ ಶಿಖರದಲ್ಲಿ ಮತ್ತೊಂದು ಉತ್ತುಂಗಕ್ಕೆ ಏರಿದ್ದಾರೆ. ಭಾರತೀಯ ಸೇನೆಯ ಸೇನಾ ಸೇವಾ ದಳದ ಮೋಟಾರ್ ಸೈಕಲ್ ಪ್ರದರ್ಶನ ತಂಡ ಅಗ್ನಿ ಸುರಂಗದಲ್ಲಿ ಅತಿ ಹೆಚ್ಚು ದೂರ ಸವಾರಿ ಮಾಡುವ ಮೂಲಕ ನೂತನ ಸಾಧನೆ ಮಾಡಿದೆ.
ಬೆಂಗಳೂರಿನ ASC ಮೈದಾನದಲ್ಲಿ ರೈಡರ್ ಕ್ಯಾಪ್ಟನ್ ಶಿವಂ ಸಿಂಗ್ 127 ಮೀಟರ್ ಬೆಂಕಿ ಸುರಂಗದಲ್ಲಿ ಬೈಕ್ ಚಲಾಯಿಸಿ ಈ ಸಾಧನೆ ಮಾಡಿದ್ದಾರೆ. ಈ ನಡುವೆ ಕ್ಯಾಪ್ಟನ್ ಶಿವಂ ಚಲಾಯಿಸಿದ ಬೈಕ್ ಸಂಪೂರ್ಣವಾಗಿ ನಾಶವಾಗಿದೆ. ಹಾಗೂ ಸಿಂಗ್ರಿಗೆ ಸಣ್ಣಪುಟ್ಟ ಗಾಯ ಗಳಾಗಿದ್ದು ಕೂಡಲೇ ಅವರನ್ನ ಅಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಈ ಹಿಂದೆ ದಕ್ಷಿಣ ಆಫ್ರಿಕಾದ ಎನ್ರಿಕೋ ಸ್ಕೋಮನ್ ಹಾಗೂ ಆಂಡ್ರೆ ಡಿ ಕಾಕ್ 2014ರಲ್ಲಿ ಪ್ಯಾರಿಸ್ನಲ್ಲಿ ಉದ್ದದ ಬೆಂಕಿ ಸುರಂಗದಲ್ಲಿ ಬೈಕ್ ಚಲಾಯಿಸಿ ಸಾಧನೆ ಮಾಡಿದ್ದರು. ಈ ಕ್ಯಾಪ್ಟನ್ ಶಿವಂರ ಸುಂಟರಗಾಳಿ ತಂಡವನ್ನ 1982ರಲ್ಲಿ ಕರ್ನಲ್ ಸಿ.ಎನ್ ರಾವ್ ಹಾಗೂ ಕ್ಯಾಪ್ಟನ್ ಜೆ.ಪಿ ಶರ್ಮಾ ನೇತೃತ್ವದಲ್ಲಿ ಸ್ಥಾಪಿಸಲಾಗಿತ್ತು. ಈವರೆಗೆ ಈ ಸುಂಟರಗಾಳಿ ತಂಡ ಭಾರತದಲ್ಲಿ 1,000ಕ್ಕೂ ಹೆಚ್ಚು ಸಾಹಸ ಪ್ರದರ್ಶನ ನೀಡುವೆ.