Janardhan Kodavoor/ Team KaravaliXpress
26.6 C
Udupi
Thursday, August 11, 2022
Sathyanatha Stores Brahmavara

ನಾನು ರಾಷ್ಟ್ರಪತಿ ಭವನದಲ್ಲಿದ್ದರೆ ಸಿಎಎ ಜಾರಿಯಾಗದಂತೆ ನೋಡಿಕೊಳ್ಳುತ್ತೇನೆ- ಯಶವಂತ್ ಸಿನ್ಹಾ

ರಾಷ್ಟ್ರಪತಿ ಚುನಾವಣೆಗೆ ಸಕಲ ಸಿದ್ಧತೆ ನಡೆಯುತ್ತಿದ್ದು, ಇತ್ತ ವಿರೋಧ ಪಕ್ಷಗಳ ಅಧ್ಯಕ್ಷೀಯ ಅಭ್ಯರ್ಥಿಯಾಗಿರುವ ಯಶವಂತ್ ಸಿನ್ಹಾ ಅವರು, ನಾನು ಆಯ್ಕೆಯಾದರೆ ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ಜಾರಿಯಾಗದಂತೆ ನೋಡಿಕೊಳ್ಳುವುದಾಗಿ ಹೇಳಿದ್ದಾರೆ.
ಅಸ್ಸಾಂನ ವಿರೋಧ ಪಕ್ಷದ ಶಾಸಕರೊಂದಿಗೆ ಸಂವಾದ ನಡೆಸಿದ ಸಿನ್ಹಾ, ಬಿಜೆಪಿ ನೇತೃತ್ವದ ಸರ್ಕಾರ ಮೂರ್ಖತನದಿಂದ ತರಾತುರಿಯಲ್ಲಿ ಸಿಎಎ ಜಾರಿಗೆ ತರಲು ಸಾಧ್ಯವಾಗಿಲ್ಲ ಎಂದು ಹೇಳಿದರು.

ಪೌರತ್ವ ಅಸ್ಸಾಂಗೆ ಪ್ರಮುಖ ವಿಷಯವಾಗಿದೆ, ಸರ್ಕಾರ ದೇಶಾದ್ಯಂತ ಕಾಯಿದೆಯನ್ನು ತರಲು ಬಯಸಿದೆ. ಆದರೆ ಇನ್ನೂ ಅದನ್ನು ಜಾರಿ ಮಾಡಲು ಸಾಧ್ಯವಾಗಲಿಲ್ಲ ಎಂದು ಹೇಳಿದರು.

ನಾನು ರಾಷ್ಟ್ರಪತಿ ಭವನದಲ್ಲಿದ್ದರೆ ಸಿಎಎ ಜಾರಿಯಾಗದಂತೆ ನೋಡಿಕೊಳ್ಳುತ್ತೇನೆ ಎಂದರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!