ವಾಯುಪಡೆ ಪೈಲಟ್‌ ಆಗಿ ಅಪ್ಪನ ಕನಸು ನನಸಾಗಿಸುವೆ ಎಂದ ವಿಂಗ್ ಕಮಾಂಡರ್ ಪುತ್ರಿ

ಲಖನೌ: ತಮಿಳುನಾಡಿನ ಕೂನೂರು ಬಳಿಯ ಅರಣ್ಯ ಪ್ರದೇಶದಲ್ಲಿ ಸಂಭವಿಸಿದ ಹೆಲಿಕಾಪ್ಟರ್ ಅಪಘಾತದಲ್ಲಿ ಸೇನಾ ಮುಖಂಡ ಬಿಪಿನ್‌ ರಾವತ್‌ ರ ಜತೆ ಮೃತಪಟ್ಟ 11 ಯೋಧರಲ್ಲಿ ವಿಂಗ್ ಕಮಾಂಡರ್ ಪೃಥ್ವಿ ಸಿಂಗ್ ಚೌಹಾಣ್ ಕೂಡ ಒಬ್ಬರು. ಇವರು ಪತ್ನಿ, 11 ವರ್ಷದ ಮಗಳು ಹಾಗೂ ಚಿಕ್ಕ ಮಗನನ್ನು ಅನಾಥ ಮಾಡಿ ಹೋಗಿದ್ದಾರೆ.

ರಕ್ತದ ಕಣಕಣದಲ್ಲಿಯೂ ಸೇನೆಯ ಬಗ್ಗೆ ಅಪಾರ ಪ್ರೀತಿ, ದೇಶಪ್ರೇಮವನ್ನು ಇಟ್ಟುಕೊಂಡಿದ್ದ ತನ್ನ ಅಪ್ಪನ ಹಾದಿಯಲ್ಲಿಯೇ ಸಾಗಿ ಅವರು ಕಟ್ಟುಕೊಂಡಿದ್ದ ಅಪಾರ ಕನಸನ್ನು ತಾನು ನನಸು ಮಾಡುವುದಾಗಿ ಆರಾಧ್ಯ ಹೇಳಿದ್ದಾಳೆ. ಹುತಾತ್ಮರಾದ ತನ್ನ ತಂದೆಯ ಪಾರ್ಥಿವ ಶರೀರದ ಮುಂದೆ ಬರುತ್ತಿದ್ದ ದುಃಖವನ್ನು ತಡೆಹಿಡಿದು ತಾನೂ ಪೈಲಟ್‌ ಆಗಿ ದೇಶಕ್ಕಾಗಿ ಸೇವೆ ಸಲ್ಲಿಸುವೆ ಎಂದಿದ್ದಾಳೆ ಏಳನೇ ಕ್ಲಾಸ್‌ನಲ್ಲಿ ವಿದ್ಯಾರ್ಥಿನಿ ಆರಾಧ್ಯ.

ನನಗೆ ನನ್ನ ತಂದೆಯೇ ಹೀರೋ. ಅವರು ದೇಶಕ್ಕಾಗಿ ಪ್ರಾಣ ಕೊಟ್ಟಿದ್ದಾರೆ. ಅವರ ದೇಶಭಕ್ತಿ ನನ್ನ ರಕ್ತದಲ್ಲಿಯೂ ಹರಿಯುತ್ತಿದೆ. ದೇಶಸೇವೆಗಾಗಿ ಪ್ರಾಣವನ್ನೇ ಮುಡುಪಾಗಿಟ್ಟ ನನ್ನ ಅಪ್ಪನೇ ನನ್ನ ಬದುಕಿನ ಸ್ಫೂರ್ತಿ. ನಾನು ಕೂಡ ವಾಯುಪಡೆ ಸೇರಿ ಪೈಲಟ್‌ ಆಗುವೆ. ಅಪ್ಪ ಜೀವನದಲ್ಲಿ ಏನೇನು ಮಾಡಬೇಕು ಎಂದು ಕನಡು ಕಂಡಿದ್ದರೋ, ಅದನ್ನು ನಾನು ಮಾಡಿ ತೋರಿಸುವೆ ಎಂದಿದ್ದಾಳೆ ಆರಾಧ್ಯ. ನೀನು ಅಧ್ಯಯನದ ಕಡೆ ಹೆಚ್ಚು ಗಮನ ಕೇಂದ್ರೀಕರಿಸು, ಅಂಕಗಳಿಗಾಗಿ ಓದಬೇಡ. ನೀನು ಚೆನ್ನಾಗಿ ಅಧ್ಯಯನ ಮಾಡಿದ ಅಂಕಗಳು ತಾನಾಗಿಯೇ ಬರುತ್ತವೆ ಎಂದು ಅಪ್ಪ ಹೇಳುತ್ತಿದ್ದರು ಎಂದು ಆಕೆ ನೆನಪಿಸಿಕೊಂಡಿದ್ದಾಳೆ.

ಪೃಥ್ವಿ ಸಿಂಗ್ ಚೌಹಾಣ್ 2000ರಲ್ಲಿ ವಾಯುಪಡೆ ಸೇವೆಗೆ ಸೇರ್ಪಡೆಯಾಗಿದ್ದರು. 2006ರಲ್ಲಿ ಕುಟುಂಬದ ಜತೆ ಮಧ್ಯಪ್ರದೇಶದ ಗ್ವಾಲಿಯರ್‌ನಿಂದ ಆಗ್ರಾಕ್ಕೆ ಸ್ಥಳಾಂತರಿಸಿದ್ದರು.

 
 
 
 
 
 
 
 
 
 
 

Leave a Reply