ಸಾವಿನಲ್ಲೂ ಸಾರ್ಥಕತೆ ಮೆರೆದ ಪೈಲಟ್ ಸಾಠೆ

ಶುಕ್ರವಾರ ಕೇರಳದಲ್ಲಿ ವಿಮಾನ ಲ್ಯಾಂಡಿಗ್ ನಲ್ಲಿ ತೊಂದರೆಯಾಗಿ ಕಂದಕಕ್ಕೆ ಬಿದ್ದು ವಿಮಾನ ಇಬ್ಭಾಗವಾಗಿ ಇಬ್ಬರು ಪೈಲಟ್ ಸೇರಿದಂತೆ ಒಟ್ಟು 19 ಮಂದಿ ತಮ್ಮ ಜೀವವನ್ನು ಕಳೆದುಕೊಂಡಿದ್ದು 150 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಆದರೆ ವಿಮಾನ ಲ್ಯಾಂಡ್ ಆಗೋದಿಲ್ಲ ಎಂಬುದನ್ನು ಅರಿತ ಪೈಲಟ್ ವಸಂತ್ ಸಾಠೆ ಅವರು ಪ್ರಯಾಣಿಕರ ಜೊತೆ ಮಾತನಾಡಿದ್ದಾರೆ. ಈ ಬಗ್ಗೆ ಗಾಯಗೊಂಡ ಪ್ರಯಾಣಿಕರು ಪೈಲಟ್ ಬಗ್ಗೆ ಹೆಮ್ಮೆಯಿಂದ ಮಾತನಾಡಿದ್ದಾರೆ‌‌.. ನಿಜಕ್ಕೂ ಮೈ ಜುಮ್ಮೆನ್ನುವಂತಿದೆ..ಹೌದು ಪೈಲಟ್ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿರುವ ಪ್ರಯಾಣಿಕರು, ತಮ್ಮ ಪ್ರಾಣವನ್ನು ಅರ್ಪಿಸಿ ನಮ್ಮ ಪ್ರಾಣವನ್ನು ಕಾಪಾಡಿದ್ದಾರೆ ಎಂದು ಕಂಬನಿ‌ ಮಿಡಿದಿದ್ದಾರೆ.. ವಿಮಾನ ಲ್ಯಾಂಡ್ ಆಗುವ ಸಮಯದಲ್ಲಿ ತುಂಬಾ ಮಳೆಯಾಗುತ್ತಿತ್ತು. ತಕ್ಷಣ ಹವಾಮಾನ ಕೆಟ್ಟದಾಗಿದೆ ಎಂದು ಪೈಲಟ್ ವಿಮಾನವನ್ನು ಇಳಿಸುವ ಮೊದಲೇ ಎಚ್ಚರಿಕೆ ನೀಡಿದ್ದರು. ಅಲ್ಲದೆ ಎರಡು ಬಾರಿ ಸುರಕ್ಷಿತವಾಗಿ ವಿಮಾನವನ್ನು ಇಳಿಸಲು ಪ್ರಯತ್ನಿಸಿದರೂ ಸಹ ಅದು ಸಾಧ್ಯವಾಗಲಿಲ್ಲ.. ನಿಯಂತ್ರಣ ಕಳೆದುಕೊಂಡರು. ಕೊನೆಗೆ ರನ್ ವೇ ಯಿಂದ ಜಾರಿ 33 ಅಡಿ ಕಂದಕಕ್ಕೆ ಜಾರಿ ಎರಡು ಭಾಗವಾಯಿತು..ತಕ್ಷಣ ಅಲ್ಲಿನ ಸ್ಥಳೀಯರು ಆಗಮಿಸಿ ರಕ್ಷಣಾ ಕಾರ್ಯಾಚರಣೆ ಮಾಡಿ ನಮ್ಮನ್ನೆಲ್ಲಾ ರಕ್ಷಿಸಿದರು.. ಈ ಪ್ರಯಾಣಿಕರೆಲ್ಲರೂ ಕೊರೊನಾ ವೈರಸ್‍ನಿಂದಾಗಿ ದುಬೈನಲ್ಲಿ ಸಿಲುಕಿದ್ದರು. ಇವರನ್ನು ಏರ್ ಇಂಡಿಯಾ ವಿಮಾನ ಮೂಲಕ ವಾಪಸ್ ಕರೆತರಲಾಗುತಿತ್ತು. ವಿಮಾನ ಕರಿಪುರ ವಿಮಾನ ನಿಲ್ದಾಣ ತಲುಪುತ್ತಿದ್ದಂತೆಯೇ ರನ್ ವೇಯಿಂದ ಜಾರಿ 33 ಅಡಿ ಕಂದಕಕ್ಕೆ ಬಿದ್ದು ಗೋಡೆಗೆ ಡಿಕ್ಕಿ ಹೊಡೆದು ಇಬ್ಭಾಗವಾಗಿದೆ..ಆದರೆ ಪೈಲಟ್ ವಸಂತ್ ಸಾಠೆ ಅವರು ತಮ್ಮ ಪ್ರಾಣವನ್ನು ಅರ್ಪಿಸಿ ಆಗಬಹುದಾದ ದೊಡ್ಡ ಅನಾಹುತವನ್ನು ತಪ್ಪಿಸಿದ್ದಾರೆ. ಸರಿಯಾಗಿ ಲ್ಯಾಂಡ್ ಆಗುವುದಿಲ್ಲ ಎಂದು ತಿಳಿದಾಕ್ಷಣ ಎಂಜಿನ್ ಅನ್ನು ಆಫ್ ಮಾಡಿ ನೂರಾರು ಜನರ ಪ್ರಾಣವನ್ನು‌ ಉಳಿಸಿದ್ದಾರೆ.. ಇಲ್ಲವಾಗಿದ್ದರೆ ವಿಮಾನಕ್ಕೆ ಬೆಂಕಿ ಹತ್ತಿಕೊಳ್ಳಿತಿತ್ತು ಎಂದು ತಜ್ಞರು ತಿಳಿಸಿದ್ದಾರೆ..ಪೈಲಟ್ ದೀಪಕ್ ವಸಂತ್ ಸಾಠೆ 1981ರಲ್ಲಿ ವಾಯಪಡೆಗೆ ಸೇರಿದ್ದರು.. ಅವರಿಗೆ 55 ವರ್ಷ ವಯಸ್ಸಾಗಿದೆ.. ವಸಂತ್ ಸಾಠೆ ಅವರು 22 ವರ್ಷಗಳ ಕಾಲ ವಾಯುಸೇನೆಯಲ್ಲಿ ಸೇವೆ ಸಲ್ಲಿಸಿದ್ದರು. ನಂತರ ಬೆಂಗಳೂರಿನ ಎಚ್‍ಎಎಲ್‍ನಲ್ಲಿ ಇರುವ ಏರ್ ಫೋರ್ಸ್ ಟ್ರೈನಿಂಗ್ ಅಕಾಡೆಮಿಯಲ್ಲಿ ತರಬೇತಿ ನೀಡುತ್ತಿದ್ದರು. ಸ್ಕ್ವಾಡ್ರನ್ ಲೀಡರ್ ಆಗಿ ನಿವೃತ್ತಿ ಪಡೆದ ಬಳಿಕ ನಾಗರಿಕ ವಿಮಾನ ಸೇವೆಗೆ ಸೇರ್ಪಡೆಯಾಗಿದ್ದರು. ಪುಣೆಯ ನ್ಯಾಷನಲ್‌ ಡಿಫೆನ್ಸ್‌ ಅಕಾಡೆಮಿಯ ಹಳೆಯ ವಿದ್ಯಾರ್ಥಿಯಾಗಿದ್ದ ಸಾಠೆ ಮಿಗ್‌ 21 ಯುದ್ಧವಿಮಾನವನ್ನು ಹಾರಿಸಿದ್ದರು. ವಾಯುಪಡೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ್ದಕ್ಕೆ ಅವರಿಗೆ ರಾಷ್ಟ್ರಪತಿಯಿಂದ ಚಿನ್ನದ ಪದಕ ದೊರೆತಿತ್ತು.ನಿನ್ನೆ ವಿಮಾನ ಲ್ಯಾಂಡಿಂಗ್ ನಲ್ಲಿ ತೊಂದರೆ ಆಗುತ್ತಿದ್ದಂತೆ ಪ್ರಯಾಣಿಕರೆಲ್ಲರಿಗೂ ಆತ್ಮ ಸ್ಥೈರ್ಯ ತುಂಬಿದ್ದಾರೆ. ಧೈರ್ಯವಾಗಿರಿ ಎಲ್ಲಾ ಪ್ರಯತ್ನವನ್ನು ಮಾಡುವೆ ಎಂದಿದ್ದರಂತೆ. ನನ್ನ ಪ್ರಾಣ ಹೋದರೂ ನಾನು ನಿಮ್ಮೆಲ್ಲರ ಪ್ರಾಣ ರಕ್ಷಣೆ ಮಾಡುವ ಪ್ರಯತ್ನ ಮಾಡುವೆ ಎಂದಿದ್ದರಂತೆ ವಸಂತ್ ಸಾಠೆ ಅವರು. ಕಡೆಗೂ ಅವರ ಮಾತಿನಂತೆ ತಮ್ಮ ಪ್ರಾಣ ಕೊಟ್ಟು 150ಕ್ಕೂ ಅಧಿಕ ಪ್ರಯಾಣಿಕರ ಜೀವವನ್ನು‌ ಉಳಿಸಿದ್ದಾರೆ.

 
 
 
 
 
 
 
 
 
 
 

Leave a Reply