ವರ್ಷಾಂತ್ಯಕ್ಕೆ ಸಿಗಲಿದೆ ಕೊರೊನಾ ವ್ಯಾಕ್ಸಿನ್ : ಸಚಿವ ಹರ್ಷವರ್ಧನ್

ಜಗತ್ತಿನಾದ್ಯಂತ ತನ್ನ ಅಬ್ಬರವನ್ನು ಮುಂದುವರೆಸಿರುವ ಕೊರೊನಾ ವೈರಸ್ ನಿಗ್ರಹಿಸುವ ದೇಶದ ಮೊಟ್ಟ ಮೊದಲ ಲಸಿಕೆ ಈ ವರ್ಷಾಂತ್ಯ ದಲ್ಲಿ ದೊರೆಯಲಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಹರ್ಷವರ್ಧನ್ ತಿಳಿಸಿದ್ದಾರೆ. ಮಹಾ ಮಾರಿ ನಿಗ್ರಹ ಕ್ಕಾಗಿ ಪರಿಣಾಮಕಾರಿ ಲಸಿಕೆ ಮತ್ತು ಔಷಧಿಗಾಗಿ ಭಾರತೀಯರು ಎದುರು ನೋಡುತ್ತಿರುವಾಗಲೇ, ಈ ವರ್ಷಾಂತ್ಯದಲ್ಲಿ ಕೊರೊನಾ ನಿಗ್ರ ಹಿಸುವ ದೇಶದ ಮೊದಲ ಲಸಿಕೆ ಲಭ್ಯವಾಗಲಿ ಎಂಬ ಡಾ. ಹರ್ಷವರ್ಧನ್ ಹೇಳಿಕೆಯು ಜನರಲ್ಲಿ ಸಮಾಧಾನ ತಂದಿದೆ.

ಇದು ಆಶಾದಾಯಕ ಬೆಳವಣಿಗೆಯಾಗಿದ್ದು, ದೇಶದ ಸಾಕಷ್ಟು ಸಂಸ್ಥೆಗಳು ವೈರಸ್ ನಿಯಂತ್ರಣಕ್ಕಾಗಿ ಲಸಿಕೆ ಮತ್ತು ಔಷಧಗಳನ್ನು ಅಭಿವೃದ್ದಿ ಗೊಳಿಸುವಲ್ಲಿ ನಿರತವಾಗಿದ್ದು, ಸಾಂಕ್ರಾಮಿಕ ರೋಗ ಮತ್ತು ಮರಣ ಪ್ರಮಾಣದ ನಡುವೆಯೂ ಚೇತರಿಸಿಕೊಳ್ಳುತ್ತಿರುವವರ ಸಂಖ್ಯೆ ನಿರಂತರ ವಾಗಿ ಹೆಚ್ಚಾಗುತ್ತಿದೆ.

 

Leave a Reply