ಮಂಗಳೂರು ವಿಮಾನ ನಿಲ್ಧಾಣಕ್ಕೆ ಜಾರ್ಜ್ ಫೆರ್ನಾಂಡಿಸ್ ರವರ ಹೆಸರು ನಾಮಕರಣ ಮಾಡಲಿ~ ತೋನ್ಸೆ ಜಯಕೃಷ್ಣ ಶೆಟ್ಟಿ

ಜಯಶ್ರಿಕೃಷ್ಣ ಪರಿಸರ ಪ್ರೇಮಿ ಸಮಿತಿಯಿಂದ ಜಾರ್ಜ್ ಫೆರ್ನಾಂಡಿಸ್ ರವರ 94ನೇ ಜನ್ಮದಿನಾಚರಣೆ ರಾಷ್ಟ್ರೀಯ ಪ್ರಶಸ್ತಿ ಪ್ರಧಾನ ಪಕ್ಷಬೇದವಿಲ್ಲದೆ ಮಂಗಳೂರು ವಿಮಾನ ನಿಲ್ಧಾಣಕ್ಕೆ ಜಾರ್ಜ್ ನಾಮಕರಣದಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ನೆನಪಿಡುವಂತಾಗಲಿ – ತೋನ್ಸೆ ಜಯಕೃಷ್ಣ ಶೆಟ್ಟಿ

ಮುಂಬಯಿ : ಜಯಶ್ರಿಕೃಷ್ಣ ಪರಿಸರ ಪ್ರೇಮಿಯ ಮೂಲ ಉದ್ದೇಶ ಪರಿಸರ ರಕ್ಷಣೆ ಯೊಂದಿಗೆ ಕೈಗಾರಿಕೋಧ್ಯಮಕ್ಕೆ ಪ್ರಾಶಸ್ತ್ಯ ನೀಡುವುದು. ಆದರೆ ಅರಣ್ಯ ರಕ್ಷಣೆ ಮಾಡುವ ರಾಧಾಕೃಷ್ಣ ನಾಯರ್ ಎನ್ನುವ ಸಂತನಿಗೆ ಜಾರ್ಜ್ ಫೆರ್ನಾಂಡಿಸ್ ರವರ 94ನೇ ಜನ್ಮದಿನಾಚರಣೆ ಯಂದು ರಾಷ್ಟ್ರೀಯ ಪ್ರಶಸ್ತಿ ಪ್ರಧಾನಿಸುವ ಮೂಲಕ ಮುಂದಿನ ದಿನಗಳಲ್ಲಿ ಅರಣ್ಯ ರಕ್ಷಣೆ ಮಾಡುದರೊಂದಿಗೆ “ಜಾರ್ಜ್ ವನ” ದ ಮೂಲಕ ಅರಣ್ಯ ಸಂರಕ್ಷಣಾ ಪ್ರಶಸ್ತ್ಯ ನೀಡಲು ಪ್ರಯತ್ನಿಸುತ್ತೇವೆ. 
 
ಈ ಮೊದಲಿನಿಂದಲೂ ಮಂಗಳೂರು ವಿಮಾನ ನಿಲ್ದಾಣಕ್ಕೆ ಜಾರ್ಜ್ ಹೆಸರು ನೀಡುವಂತೆ ನಮ್ಮ ಪ್ರಯತ್ನ ನಡೆಯುತ್ತಲೇ ಇದೆ, ರಾಜ್ಯದ ಎಲ್ಲ ಜನನಾಯಕರು ಪಕ್ಷ ಬೇದವಿಲ್ಲದೆ ಮಂಗಳೂರು ವಿಮಾನ ನಿಲ್ಧಾಣಕ್ಕೆ ಜಾರ್ಜ್ ಫೆರ್ನಾಂಡಿಸ್ ಅವರ ಹೆಸರು ನೀಡಲಿ. ರಾಜಕೀಯದ ಸಂತನೆನಿಸಿಕೊಂಡ ಜಾರ್ಜ್ ಫೆರ್ನಾಂಡಿಸ್ ರವರ ಹೆಸರು ಅಂತರಾಷ್ಟ್ರೀಯ ಮಟ್ಟದಲ್ಲಿ ನೆನಪಿಡುವಂತಾಗಲು ಈ ಮೂಲಕ ಸಾಧ್ಯ ಎಂದು ಜಯಶ್ರಿಕೃಷ್ಣ ಪರಿಸರ ಪ್ರೇಮಿ ಸಮಿತಿಯ ಸಂಸ್ಥಾಪಕ ರಾದ ತೋನ್ಸೆ ಜಯಕೃಷ್ಣ ಶೆಟ್ಟಿಯವರು ನುಡಿದರು
 ನಮ್ಮ ಜಿಲ್ಲೆಗಳು 22 ಸುಂದರವಾದ ನದಿಗಳನ್ನು ಹೊಂದಿದ್ದು ಅದನ್ನು ಮುಖ್ಯ ಉದ್ದೇಶವನ್ನಾಗಿರಿಸಿ ಜಿಲ್ಲೆಯನ್ನು ಪ್ರವಾಸಿ ಕೇಂದ್ರ ವನ್ನಾಗಿಸಲು ಸರಕಾರ ಶ್ರಮಿಸಬೇಕು. ಜಿಲ್ಲೆಯಲ್ಲಿ ಮೆಟ್ರೋ ರೈಲುಗಳು ಓಡುವಂತಾಗಬೇಕು.  ಇದನ್ನು ರಾಜ್ಯ ಹಾಗೂ ಕೇಂದ್ರ ಸರಕಾರ ಗಮನದಲ್ಲಿಡಬೇಕು. ನಮ್ಮ ಸಮಿತಿಯು ಕೈಗೊಂಡ ಎಲ್ಲಾ ಅಭಿವೃದ್ದಿ ಕೆಲಸಗಳನ್ನು ಕಾರ್ಯರೂಪಕ್ಕೆ ನಾವು ತರಲಿದ್ದೇವೆ ಎಂದರು.

ಪ್ರಶಸ್ತಿ ಪ್ರಧಾನ ಸಮಾರಂಭದ ಕಾರ್ಯಕ್ರಮವನ್ನು ಉತ್ತರ ಮುಂಬಯಿ ಸಂಸದರಾದ ಗೋಪಾಲ ಶೆಟ್ಟಿಯವರು ದೀಪ ಬೆಳಗಿಸಿ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ತುಂಗಾ ಗ್ರೂಫ್ ಆಫ್ ಹೋಟೇಲ್ಸನ ಸಿಎಂಡಿ ಸುಧಾಕರ ಹೆಗ್ದೆ ಯವರು ಮಾತನಾಡುತ್ತಾ ತೋನ್ಸೆ ಜಯಕೃಷ್ಣ ಶೆಟ್ಟಿಯವರು ಓರ್ವ ನೇರ ನುಡಿಯ ವ್ಯಕ್ತಿತ್ವವನ್ನು ಹೊಂದವರು. ಯಾವುದೇ ಕೆಲಸವನ್ನು ನಿಸ್ವಾರ್ಥದಿಂದ ಮಾಡುವವರು ನಾಗಾರ್ಜುನ ಸ್ಥಾಪನೆಗೆ ಬಹಳಷ್ಟು ಅಡೆತಡೆಗಳೂ ಸಮಸ್ಯೆಗಳು ಬಂದರೂ ಪರಿಸರ ಪ್ರೇಮಿ ಸಮಿತಿ ಹೋರಾಟ ದಿಟ್ಟ ನಿಲುವಿನಿಂದಾಗಿ ಜಿಲ್ಲೆಯ ಜನರಿಗೆ ನಾಗಾರ್ಜುನದಿಂದ ಬಹಳಷ್ಟು ಪ್ರಯೋಜನವಾಗಿದೆ. 
 
ಜಯಶ್ರಿಕೃಷ್ಣ ಪರಿಸರ ಪ್ರೇಮಿ ಸಮಿತಿಯ 22 ವರ್ಷಗಳ ಸಾಧನೆ ಸಾಮಾನ್ಯ ಜನರೂ ಕೂಡ ನೆನಪಿಸುವಂತಾಗಲಿ, ಮುಂದಿನ ದಿನಗಳಲ್ಲಿ ಜಿಲ್ಲೆಗಳ ಅಭಿವೃದ್ದಿಗೆ ಬೇಕಾಗುವ ಕಾರ್ಯಗಳು ಸಮಿತಿಯ ಮೂಲಕ ನಡೆಯಲಿ ಎಂದು ನುಡಿದರು.

ವಿಶೇಷ ಅತಿಥಿಯಾಗಿ ಪಾಲ್ಗೊಂಡಿದ್ದ ಸಮಿತಿಯ ಜಿಲ್ಲೆಯ ಉಪಾಧ್ಯಕ್ಷ ಹಿರಿಯ ರಾಜಕಾರಿಣಿ ಜಗದೀಶ್ ಅಧಿಕಾರಿ ಮಾತನಾಡುತ್ತಾ ಪೇಜಾವರ ಶ್ರೀಗಳ ಆಶ್ರೀರ್ವಾದದೊಂದಿಗೆ ವೀರೇಂದ್ರ ಹೆಗ್ಡೆಯವರ ಮಾರ್ಗದರ್ಶನದಲ್ಲಿ ಸಮಿತಿ ಸ್ಥಾಪನೆಗೊಂಡಿದೆ. ಜಾರ್ಜ್ ಫೆರ್ನಾಂಡಿಸ್ ರವರ ಒಡನಾಟ ಸದಾ ನೆನಪಿಸುವಂತದ್ದು,. ದೊಡ್ಡ ವ್ಯಕ್ತಿತ್ವದ ರಾಜಕಾರಣೀಯಾಗಿ ಸಾಮಾನ್ಯ ರಂತೆ ಬದುಕು ಕಟ್ಟಿದವರು. ಜಿಲ್ಲೆಯಲ್ಲಿ ವಿದ್ಯುತ್ ಸ್ಥಾವರ ಸ್ಥಾಪನೆಯಾದುದರಿಂದ ಇಂದು ಕರ್ನಾಟಕದಲ್ಲಿ ಉಚಿತ ವಿದ್ಯುತ್ ಯೋಜನೆ ಜಾರಿಗೆ ತರುವಲ್ಲಿ ಸರಕಾರವು ಪರಿಸರ ಪ್ರೇಮಿ ಸಮಿತಿಗೆ ಕೃತಜ್ನತೆಯನ್ನು ಸಲ್ಲಿಸಬೇಕು. ಯಾಕೆಂದರೆ ಜಿಲ್ಲೆಗೆ ಪರಿಸರ ಪ್ರೇಮಿ ಸಮಿತಿಯ ಹೋರಾಟದ ಮೂಲಕ ವಿದ್ಯುತ್ ಸ್ಥಾವರ ಸ್ಥಾಪನೆಯಾಗಿದೆ ಎಂದರು.

ವೇದಿಕೆಯಲ್ಲಿ ಕಾಪು ಕ್ಷೇತ್ರದ ಶಾಸಕ ಸುರೇಶ್ ಶೆಟ್ಟಿ ಗುರ್ಮೆ, ಮಾಜಿ MLC, ಕರ್ನಾಟಕ ಸರ್ಕಾರ, ಎಐಸಿಸಿ ಕಾರ್ಯದರ್ಶಿ ಐವನ್ ಡಿಸಜಾ, ಮಾಜಿ ಎಂಎಲ್‌ಸಿ,, ಕರ್ನಾಟಕ ಬಿಜೆಪಿ ಯ ವಕ್ತಾರರು ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ತುಂಗಾ ಗ್ರೂಪ್ ಆಫ್ ಹೋಟೆಲ್, ಸಿಎಂ ಡಿ ಸುಧಾಕರ ಎಸ್ ಹೆಗ್ಡೆ, ಪ್ರಶಸ್ತಿ ಸಮಿತಿಯ ಸಂಚಾಲಕ ಡಾ. ಆರ್, ಕೆ, ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಮುಂಡ್ಕೂರು ಸುರೇಂದ್ರ ಸಾಲ್ಯಾನ್,ಕೋಶಾಧಿಕಾರಿ ತುಳಸಿದಾಸ್ ಅಮೀನ್ ಉಪಸ್ಥಿತರಿದ್ದರು

ಈ ಸಂದರ್ಭದಲ್ಲಿ ಜಾರ್ಜ್ ಫೆರ್ನಾಂಡಿಸ್ ರವರ 94ನೇ ಜನ್ಮದಿನಾಚರಣೆ ಪ್ರಯತ್ನ ಅರಣ್ಯ ಸೃಷ್ಟಿಕರ್ತರು ಭಾರತದ ಹಸಿರು ಹೀರೋ ಎಂದೇ ಖ್ಯಾತಿ ಪಡೆದ ಡಾ, ರಾಧಾಕೃಷ್ಣ ನಾಯರ್ ಅವರಿಗೆ ರಾಷ್ಟ್ರೀಯ ಪ್ರಶಸ್ತಿ ಪ್ರಧಾನ ಪ್ರಧಾನಿಸಲಾಯಿತು. ಪ್ರಶಸ್ತಿ ಸ್ವಿಕರಿಸಿ ಮಾತನಾಡಿದ ಡಾ, ರಾಧಾಕೃಷ್ಣ ನಾಯರ್ ಅವರು ಭಾರತ ದೇಶ ವಿಕಾಸವಾಗುತ್ತಿದೆ ಅದು ನಮಗೆ ಅಗತ್ಯ ಅದರೊಂದಿಗೆ ಪರಿಸರ ಸಂರಕ್ಷಣೆಗೆ ಶ್ರಮಿಸುತ್ತಿರುವ ಸಂಸ್ಥೆ ಜಯಶ್ರಿಕೃಷ್ಣ ಪರಿಸರ ಪ್ರೇಮಿ ಸಮಿತಿ ಕೊಡುಗೆ ನಮ್ಮ ಜಿಲ್ಲೆಗೆ ಮಹತ್ವ ರವಾಗಿದೆ . ಇಲ್ಲಿನ ಪ್ರಶಸ್ತಿ ನನ್ನ ಜೀವಮಾನ ಸಾಧನೆಗೆ ಸಂದ ಗೌರವ. 

 
ಜೂನ್ ತಿಂಗಳು ಅಂದರೆ ವನಮಹೋತ್ಸವಗಳ ಪರ್ಯಾಯ ತಿಂಗಳು. ಈ ಸಂದರ್ಭದಲ್ಲಿ ಜನ ವನ ಸಂರಕ್ಷಣೆಯ ಕೆಲಸವನ್ನು ಮಾಡಿ ಮತ್ತೆ ಮುಂದಿನ ವರ್ಷ ಅದರ ಬಗ್ಗೆ ಕಾರ್ಯಪ್ರವರ್ತರಾಗುತ್ತಾರೆ. ಈಗಾಗಬಾರದು. ವನ ಸಂರಕ್ಷಣೆ ನಮ್ಮ ಕೆಲಸವಾಗಲಿ. ಸಾವಿರಾರು ಜೀವ ಜಂತುಗಳಿಗೆ ಮಾನವ ಕುಲಕ್ಕೆ ಆಶ್ರಯಾಗುವ ಮರಗಳನ್ನು ಕಡಿದು ಮರಗಳನ್ನೇ ನಾಶ ಮಾಡುತ್ತಿದ್ದಾರೆ ಇದು ಸಲ್ಲದು, ಗುಜರಾಥ್ ನ ಕಚ್ಚ್ ನಂತಹ ಊರಲ್ಲಿ ಕೋರೋನ ಸಂಧರ್ಭದಲ್ಲಿ ಕೂಡಾ ವನ ಸಂರಕ್ಷಣಾ ಕಾರ್ಯವನ್ನು ಮಾಡಿದ್ದೇವೆ ಹಾಗೆ ಯಾವುದೇ ರೀತಿಯ ಕೊರೋನಾ ತೊಂದರೆ ನೀಡಿಲ್ಲ. ನಮ್ಮ ತುಳು ನಾಡಿನಲ್ಲಿ ವಿಶಿಷ್ಠಾವಾದ ಶಕ್ತಿ ಇದೆ. 
 
ನಾವು ಯಾವುದೇ ಕೆಲಸವನ್ನು ಕೈಗೆತ್ತಿಕೊಂಡಲ್ಲಿ ಅದನ್ನು ಸಮರ್ಥ ರೀತಿಯಲ್ಲಿ ಮುನ್ನಡೆಸುವ ಶಕ್ತಿ ನಮ್ಮಲ್ಲಿದೆ. ಜಯಶ್ರಿಕೃಷ್ಣ ಪರಿಸರ ಪ್ರೇಮಿ ಸಮಿತಿಯಿಂದ ಜಿಲ್ಲೆಯ ಅಭಿವೃದ್ದಿಗೆ ಸಾಕಷ್ಟು ಕೆಲಸ ನಡೆದಿದೆ. ಮುಂದಿನ ದಿನಗಳಲ್ಲಿ ಕಾಡನ್ನು ಉಳಿಸಿ ನಾಡನ್ನು ಬೆಳೆಸುವ ಕಾರ್ಯ ಆಗಬೇಕು. ಅದರೊಂದಿಗೆ ನನ್ನ ಕರ್ತ್ಯವ್ಯವನ್ನು ನಿವಾರಿಸಲು ನಾನು ನಿಮ್ಮೊಂದಿಗೆ ಸಿದ್ದನಿದ್ದೇನೆ ಎಂದು ನುಡಿದರು.

ಅಭಿನಂದನಾ ಮಾತುಗಳನ್ನು ಪತ್ರಕರ್ತ ದಯ ಸಾಗರ್ ಚೌಟ ವಾಚಿಸಿದರು, ಹಿರಿಯ ಸಾಹಿತಿ ಡಾ. ಸುನಿತಾ ಶೆಟ್ಟಿ ರಚಿಸಿದ ಸಂಸದ ಗೋಪಾಲ ಶೆಟ್ಟಿಯವರ ಬಗ್ಗೆ ರಚಿಸಿದ ಕವಿತೆಯನ್ನು ಡಾ. ಸುರೇಂದ್ರ ಕುಮಾರ್ ಹೆಗ್ಡೆ ವಾಚಿಸಿದರು. ಡಾ. ಆರ್. ಕೆ ಶೆಟ್ಟಿ ಯವರು ಸ್ವಾಗತಿಸಿದರು. ಸಮಿತಿಯ ಉಪಾಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್ ನಿರೂಪಿಸಿದರು. ಅತಿಥಿಯನ್ನು ಎಚ್ ಮೋಹನ್ ದಾಸ್ ಪರಿಚಯಿಸಿದರು , ಕಾರ್ಯದರ್ಶಿ ದೇವದಾಸ್ ಕುಲಾಲ ಧನ್ಯವಾದವಿತ್ತರು.


ವೇದಿಕೆಯ ಗಣ್ಯರಿಗೆ ಜಯಶ್ರಿಕೃಷ್ಣ ಪರಿಸರ ಪ್ರೇಮಿ ಸಮಿತಿಯ ಪ್ರಶಸ್ತಿ ಸಮಿತಿಯ ಸಂಚಾಲಕ ಡಾ. ಆರ್, ಕೆ, ಶೆಟ್ಟಿ, ಸಮಿತಿಯ ಉಪಾಧ್ಯಕ್ಷರುಗಳಾದ ಧನಂಜಯ ಶೆಟ್ಟಿ, ನಿತ್ಯಾನಂದ ಡಿ.ಕೋಟ್ಯಾನ್, ಸಿಎ ಐ ಆರ್ ಶೆಟ್ಟಿ, , ಹಿರಿಯಡ್ಕ ಮೋಹನ್ ದಾಸ್, ನ್ಯಾ ಆರ್‌.ಎಂ. ಭಂಡಾರಿ, ಗಿರೀಶ್ ಬಿ ಸಾಲ್ಯಾನ್, ಜಿತೇಂದ್ರ ಗೌಡ, ಗೌರವ ಪ್ರಧಾನ ಕಾರ್ಯದರ್ಶಿಯಾದ ಮುಂಡ್ಕೂರು ಸುರೇಂದ್ರ ಸಾಲ್ಯಾನ್,ಕೋಶಾಧಿಕಾರಿ ತುಳಸಿದಾಸ್ ಅಮೀನ್, ಸಮಿತಿಯ ಮಾಜಿ ಅಧ್ಯಕ್ಷರು ಗಳಾದ ಎಡ್ವಕೇಟ್ ಪ್ರಕಾಶ್‌ ಎಲ್. ಶೆಟ್ಟಿ, ವಿಶ್ವನಾಥ್ ಮಾಡ ,ಹರೀಶ್‌ ಕುಮಾರ್ ಶೆಟ್ಟಿ ಮತ್ತು ಜಿಲ್ಲೆಯ ಉಪಾಧ್ಯಕ್ಷರಾದ ಜಗದೀಶ್ ಅಧಿಕಾರಿ, ಗೌರವಿಸಿದರು.

ಪ್ರಾರಂಭದಲ್ಲಿ ತೋನ್ಸೆ ವಿಜಯಕುಮಾರ್ ಶೆಟ್ಟಿ ನಿರೂಪಣೆಯಲ್ಲಿ ವಿಜಯ್ ಶೆಟ್ಟಿ ಮೂಡುಬೆಳ್ಳೆ, ತೃಷಾ ಆಳ್ವ, ಇವರಿಂದ ಸಂಗೀತ ಕಾರ್ಯಕ್ರಮ ನಡೆಯಿತು. ದಯಾಸಾಗರ ಚೌಟ, ಶ್ಯಾಮ್ ಎನ್. ಶೆಟ್ಟಿ, ಕರುಣಾಕರ ಹೆಜ್ಮಾಡಿ, ವಾಸು ಎಸ್ ದೇವಾಡಿಗ, ಡಾ. ಸುರೇಂದ್ರಕುಮಾರ್ ಹೆಗ್ಡೆ, ಡಾ. ತೋನ್ಸೆ ವಿಜಯಕುಮಾರ್ ಶೆಟ್ಟಿ, ರಮಾನಂದ ರಾವ್, ರಾಮಚಂದ್ರ ಗಾಣಿಗ, ಶ್ರೀನಿವಾಸ್ ಸಾಪಲ್ಯ, ಚಿತ್ರಾಪು ಕೆ. ಎಂ. ಕೋಟ್ಯಾನ್, ರಾಕೇಶ್ ಭಂಡಾರಿ, ಜಯಪ್ರಕಾಶ್ ಕಾಮತ್, ನ್ಯಾ. ಶಶಿಧರ ಕಾಪು, ಜಿ.ಎಸ್. ಗಣೇಶ್ ಎಸ್ ಶೆಟ್ಟಿ, ಉಪಸ್ಥಿತರಿದ್ದರು.

 

 

 
 
 
 
 
 
 
 
 
 
 

Leave a Reply