ಸರ್ವಋತು ಸಂಪರ್ಕ ಕಲ್ಪಿಸಲಿರುವ ಜೋಜಿಲಾ ಸುರಂಗ

ಶ್ರೀನಗರ: ಶ್ರೀನಗರ ಕಣಿವೆಯಿಂದ ಲೇಹ್​ಗೆ ಸಂಪರ್ಕ ಕಲ್ಪಿಸುವ ಸರ್ವಋತು ಸುರಂಗ ಮಾರ್ಗ ನಿರ್ಮಾಣಕ್ಕೆ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಗುರುವಾರ ಚಾಲನೆ ನೀಡಿದ್ದಾರೆ.14.15 ಕಿ.ಮೀ ಉದ್ದದ ಸುರಂಗವಾದ ಇದು
ಏಷ್ಯಾದ ಅತ್ಯಂತ ಉದ್ದದ ಸುರಂಗಗಳಲ್ಲಿ ಒಂದಾಗಿದೆ. ಇದರ ನಿರ್ಮಾಣಕ್ಕಾಗಿ ಬೃಹತ್ ಬಂಡೆ ಸ್ಫೋಟನೆಗೂ ಗಡ್ಕರಿ ಚಾಲನೆ ನೀಡಿದ್ದಾರೆ.

ಶ್ರೀನಗರ-ಕಾರ್ಗಿಲ್-ಲೇಹ್ ರಾಷ್ಟ್ರೀಯ ಹೆದ್ದಾರಿಯಲ್ಲಿ 11,578 ಅಡಿ ಎತ್ತರದಲ್ಲಿ ಜೋಜಿಲಾ ಪಾಸ್ ಇದೆ. ಹೀಗಾಗಿ ಇದು ವ್ಯೂಹದ ರಚನೆ ಪಡೆದುಕೊಂಡಿದೆ. ಚಳಿಗಾಲದಲ್ಲಿ ಭಾರಿ ಹಿಮಪಾತದಿಂದ ಮುಚ್ಚಿ ಹೋಗುವ ಈ ಮಾರ್ಗ ಜಗತ್ತಿನ ಅತ್ಯಂತ ಅಪಾಯಕಾರಿ ಸಂಚಾರ ಪ್ರದೇಶಗಳಲ್ಲಿ ಒಂದು.

ಈ ಮಾರ್ಗದಲ್ಲಿ ವಾಹನ ಚಲಾಯಿಸುವುದು ಸಾಹಸವೇ ಅನ್ನುವಷ್ಟು ರಸ್ತೆ ಕಿರಿದಾಗಿದೆ. ಹೀಗಾಗಿ, ಈ ಯೋಜನೆ ಮಹತ್ವ ದ್ದಾಗಿದ್ದು, ಸುರಂಗ ಪೂರ್ಣಗೊಂಡಾಗ ಆಧುನಿಕ ಭಾರತದ ಇತಿಹಾಸದಲ್ಲಿ ವಿಶೇಷ ಸಾಧನೆಯಾಗಿ ಉಳಿಯಲಿದೆ. ಲಡಾಖ್, ಗಿಲ್ಗಿಟ್ ಮತ್ತು ಬಾಲ್ಟಿಸ್ತಾನ್ ಗಡಿಗಳಲ್ಲಿ ಸೇನಾ ಚಟುವಟಿಕೆಗಳು ಭರದಿಂದ ನಡೆಯುತ್ತಿರುವುದರಿಂದ ದೇಶದ ರಕ್ಷಣೆಯಲ್ಲೂ ಇದು ಮಹತ್ವದ ಪಾತ್ರ ವಹಿಸಲಿದೆ ಎಂದು ಸರ್ಕಾರ ಹೇಳಿದೆ.

ಎಂಐಇಎಲ್ ಕಂಪನಿ ಕಾಮಗಾರಿ ನಡೆಸುತ್ತಿರುವ ಈ ಸುರಂಗ ಮಾರ್ಗ ಪೂರ್ಣಗೊಂಡು ಸಂಚಾರಕ್ಕೆ ತೆರವಾದಾಗ ಈ ಮಾರ್ಗದಲ್ಲಿ ಮೂರು ಗಂಟೆಗಳ ಸಂಚಾರ ಕೇವಲ 15 ನಿಮಿಷಕ್ಕೆ ಇಳಿಕೆಯಾಗಲಿದೆ. ಎನ್​ಎಚ್-1ರಲ್ಲಿ ಶ್ರೀನಗರ ಕಣಿವೆ ಮತ್ತು ಲೇಹ್ ನಡುವೆ ಸರ್ವಋತು ಸಂಪರ್ಕ ಕಲ್ಪಿಸಲಿರುವ ಜೋಜಿಲಾ ಸುರಂಗ, ಜಮ್ಮು – ಕಾಶ್ಮೀರದ ಆರ್ಥಿಕ ಅಭಿವೃದ್ಧಿ ಹಾಗೂ ಸಾಮಾಜಿಕ-ಸಾಂಸ್ಕೃತಿಕ ಅಭಿವೃದ್ಧಿ ಗೂ ಸಹಾಯವಾಗಲಿದೆ.

ಇದೀಗ ಮರುವಿನ್ಯಾಸಗೊಂಡಿರುವ ಯೋಜನೆಯಿಂದ 4000 ಕೋಟಿ ರೂಪಾಯಿ ಉಳಿತಾಯವಾಗಲಿದೆ. ಭದ್ರತೆ, ಸುರಕ್ಷತೆ, ಗುಣಮಟ್ಟದಲ್ಲಿ ಯಾವುದೇ ರಾಜಿ ನಡೆಸಿಲ್ಲ ಎಂದು ಗಡ್ಕರಿ ಮಾಹಿತಿ ನೀಡಿದ್ದಾರೆ. ಇನ್ನು ಪ್ರಧಾನಿ ಮೋದಿ 6,800 ಕೋಟಿ ರೂಪಾಯಿ ವೆಚ್ಚದ ಈ ಯೋಜನೆಗೆ 2018 ಮೇ ತಿಂಗಳಲ್ಲಿ ಶಿಲಾನ್ಯಾಸ ನೆರವೇರಿಸಿದ್ದರು. ‘ಜೋಜಿಲಾ ಯೋಜನೆ ಒಂದು ಸುರಂಗ ಮಾತ್ರವಲ್ಲ, ಪ್ರಸ್ತುತ ಕಾಲದ ಒಂದು ಅದ್ಭುತವಾಗಲಿದೆ ಎಂದು ಹೇಳಿದ್ದರು.

 
 
 
 
 
 
 
 
 
 
 

Leave a Reply