ಅಖಿಲ ಅಮೇರಿಕ ತುಳುವೆರೆ ಅಂಗಣ “ಆಟ” ಉದ್ಘಾಟನೆ

“ಆಟ” (ಅಖಿಲ ಅಮೇರಿಕ ತುಳುವೆರೆ ಅಂಗಣ ಅಥವಾ all america tulu association) ಇದರ ಉದ್ಘಾಟನಾ ಸಮಾರಂಭವು ಆದಿತ್ಯವಾರ ಅಮೆರಿಕಾದಲ್ಲಿ ವಿಜೃಂಭಣೆಯಿಂದ ನೆರವೇರಿತು. ವಿಶ್ವವ್ಯಾಪಿ ಹರಡಿರುವ ಜಾಗತಿಕ ಪಿಡುಗಿನ ಪರಿಸ್ಥಿತಿಯಿಂದಾಗಿ ಅಂತರ್ಜಾಲ ವೀಕ್ಷಣೆಗಷ್ಟೇ ಸೀಮಿತವಾಗಿ ನಡೆದ ಈ ಉದ್ಘಾಟನಾ ಸಮಾರಂಭವು ಧರ್ಮಸ್ಥಳದ  ಧರ್ಮಾಧಿಕಾರಿ ಶ್ರೀ ಡಿ.ವೀರೇಂದ್ರ ಹೆಗ್ಗಡೆಯವರ ಅಮೃತ ಹಸ್ತದಿಂದ ನೆರವೇರಿತು.

ಸಮಾರಂಭದ ಶುಭಾಶರ‍್ವಚನವನ್ನು ಪುತ್ತಿಗೆ ಶ್ರೀ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ತಮ್ಮ ನ್ಯೂಜರ‍್ಸಿಯ ಶ್ರೀ ಕೃಷ್ಣ ವೃಂದಾವನ ಕ್ಷೇತ್ರದಿಂದ ನೆರವೇರಿಸಿದರೆ , ರೆವೆರೆಂಡ್ ಫಾಧರ್ ಡಾ. ಸಿರಿಲ್ ಫರ‍್ನಾಂ ಡಿಸ್ ತಮ್ಮ ಇಂಡಿಯಾನಾದಲ್ಲಿರುವ ಚರ್ಚ್ ನಿಂದ ಆಶೀರ್ವಚನ  ನೀಡಿದರು.

ಸುಮಾರು ಆರು ಘಂಟೆಗಳ ಕಾಲ ನಡೆದ ಈ ಸಮಾರಂಭವನ್ನು ಸಂಪೂರ್ಣವಾಗಿ ತುಳು ಭಾಷೆಯಲ್ಲಿಯೇ ನೆರ ವೇರಿಸಿದ ಎಲ್ಲ ಗಣ್ಯರೂ ನಮ್ಮ ಭಾಷೆ ಸಂಸ್ಕೃತಿ ಮತ್ತು ಹಿರಿಮೆಯನ್ನು ಉಳಿಸಿಕೊಂಡು ಬೆಳೆಸಿಕೊಂಡು ಹೋಗುವ ಉದ್ದೇಶದಿಂದ ಹುಟ್ಟಿಕೊಂಡ ಈ ಸಂಸ್ಥೆಯ ಯಶಸ್ಸಿಗೆ ಮನಃಪೂರ್ವಕವಾಗಿ ಆಶೀರ್ವದಿಸಿದರು. 

ಶ್ರೀ. ಡಿ ವೀರೇಂದ್ರ ಹೆಗ್ಗಡೆಯವರು ತುಳುನಾಡಿನ ಜನರ ಸಂಸ್ಕೃತಿ ಜಾಣ್ಮೆ ಪರಿಶ್ರಮದ ಉದಾಹರಣೆ ನೀಡಿ ದೂರದ ಅಮೆರಿಕದಲ್ಲಿಯೂ. ಆಟದಂತಹ ಸಂಘಟನೆಯ ಹುಟ್ಟಿನ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಪುತ್ತಿಗೆ ಶ್ರೀಗಳು ಆಶೀರ್ವಚನ ಸಂದೇಶ ನೀಡುತ್ತಾ ಭಾಷೆ ಮತ್ತು ಸಂಸ್ಕೃತಿಯ ಸತತ ಬೆಳವಣಿಗೆಗೆ “ಆಟ”ದ ಯಶಸ್ಸು ಬಹಳ ಮುಖ್ಯ. 

ಅದರಲ್ಲೂ ತಾಯ್ನಾಡಿನಿಂದ ಸಾವಿರಾರು ಮೈಲಿ ದೂರದಲ್ಲಿರುವ ತುಳುನಾಡಿನ ಮೂಲದ ಕುಟುಂಬಗಳಿಗೆ “ಆಟ” ಒಂದು. ಸಂಪನ್ಮೂಲ ಸಂಘಟನೆಯಾಗಲಿ ಎಂದು ಶುಭ ಹಾರೈಸಿದರು. ರೆವರೆಂಡ್. ಫಾದರ್. ಡಾ. ಸಿರಿಲ್ ಫೇರ‍್ನಾಂಡಿಸ್ ತುಳುನಾಡಿನ ಎಲ್ಲಾ ಭಾಂದವರಿಗೂ ಈ ಸಂಘಟನೆಯೊಂದು ತುಳು ಭಾಷೆ ಮತ್ತು ಸಂಸ್ಕೃತಿಯೊಂದಿಗಿನ ಸಂಬಂಧ ಸೇತುವಾಗಲಿ ಎನ್ನುವುದರ ಮೂಲಕ ಶುಭಾಶಯ ಸಲ್ಲಿಸಿದರು.  

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಶ್ರೀ.ದಯಾನಂದ. ಕತ್ತಲ್ಸಾರ್ ಮತ್ತು ಶ್ರೀ ಸರ್ವೋತ್ತಮ ಶೆಟ್ಟಿ, ಅಬುಧಾಬಿ ಇವರು ತುಳುನಾಡಿನ ಜನರ ಒಗ್ಗಟ್ಟು ಮತ್ತು ಪರಿಶ್ರಮದ ಜೀವನವನ್ನು ನೆನಪಿಸಿಕೊಳ್ಳುತ್ತಾ “ಆಟ”ದಂತಹ ಸಂಘಟನೆಯ ಅಗತ್ಯತೆಯ ಬಗ್ಗೆ ಹಿತ ನುಡಿಗಳಾನ್ನಾಡಿದರು.

ಈ ಉದ್ಘಾಟನಾ ಸಮಾರಂಭಕ್ಕೆ ವಿಶ್ವದ ಮೂಲೆ ಮೂಲೆಗಳಿಂದ ಶುಭಾಶಯಗಳ ಮಹಾಪೂರವೇ ಹರಿದು ಬಂತು. ಸಂಸದ ಶ್ರೀ ನಳಿನ್ ಕುಮಾರ್ ಕಟೀಲ್, ಶಾಸಕರಾದ ಉಮಾನಾಥ ಕೋಟ್ಯಾನ್, ವೇದವ್ಯಾಸ ಕಾಮತ್, ಹರೀಶ್ ಪೂಂಜಾ, ಅಬ್ದುಲ್ ಖಾದರ್ ಹಾಗೂ ಪ್ರಸಿದ್ದ ಬಾಲೀವುಡ್ ನಟ ಸುನೀಲ್ ಶೆಟ್ಟಿ, ಪೂಜಾ ಹೆಗ್ಡೆ, ಮೂಡಬಿದ್ರಿ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ಮಂಗಳೂರು ವಿಶ್ವವಿದ್ಯಾಲಯದ ಡಾ. ಮಾಧವ ಎಮ್. ಕೆ., ನಿಟ್ಟೆ ವಿಶ್ವವಿದ್ಯಾಲಯದ ಡಾ. ಸಾಯಿಗೀತ, ಮಣಿಪಾಲ್ ವಿಶ್ವವಿದ್ಯಾಲಯದ ಡಾ. ಜಗದೀಶ್ ಶೆಟ್ಟಿ, ಅಖಿಲ ಭಾರತ ತುಳು ಒಕ್ಕೂಟದ ಅದ್ಯಕ್ಷ ಶ್ರೀ ಧರ್ಮಪಾಲ್ ದೇವಾಡಿಗ, ಐಲೆಸದ ಶ್ರೀ ರಮೇಶ್ಚಂದ್ರ, ಶ್ರೀ ಶಾಂತಾರಾಮ ಶೆಟ್ಟಿ, ಡಾ. ರಾಜೇಶ್ ಆಳ್ವ, ದೆಹಲಿ ತುಳು ಕೂಟದ ವಸಂತ್ ಶೆಟ್ಟಿ ಬೆಳ್ಳಾರೆ, ಶಶಿಧರ್ ಶೆಟ್ಟಿ, ತುಳು ಕೂಟ ಫೌಂಡೇಶನ್ ಮುಂಬೈ, ಜಪಾನ್ ತುಳು ಕೂಟದ ಶ್ರೀಕಲಾ ಬೊಳ್ಳಜೆ, ಕತಾರ್ ತುಳು ಕೂಟದ ಡಾ. ರವಿ ಶೆಟ್ಟಿ ಮೂಡಂಬೈಲ್, ಕುವೈಟ್ ತುಳು ಕೂಟದ ಅಧ್ಯಕ್ಷ ಸಂದೇಶ್ ಶೆಟ್ಟಿ, ರಮೇಶ್ ಕಿದಿಯೂರ್, ಒಮಾನ್ ತುಳುವೇರ್ ಅಧ್ಯಕ್ಷ ರಮಾನಂದ ಶೆಟ್ಟಿ, ಇಂಗ್ಲಂಡ್ ತುಳುಕೂಟದ ಅರ್ಚನಾ  ಶೆಟ್ಟಿ, ಇಟಲಿ ತುಳುಕೂಟದ ನಾರಾಯಣ ಶೆಟ್ಟಿ, ನೈಜೀರಿಯ ತುಳುಕೂಟದ ಶರತ್ ಶೆಟ್ಟಿ ಹಾಗೂ ಅನೇಕ ಗಣ್ಯರು ಆಟದ ಉದ್ಘಾಟನೆಗೆ ಶುಭ ಕೋರಿದರು.

ಶ್ರೀಮತಿ ಶ್ರೀವಳ್ಳಿ ರೈ ಮಾರ್ಟಲ್  ರವರ ಮನಸೂರೆಗೈದ ಶುದ್ಧ ತುಳುವಿನಲ್ಲಿ ನಡೆಸಿಕೊಟ್ಟ ಕಾರ‍್ಯಕ್ರಮ ನಿರ್ವಹಣೆ ಮತ್ತು ಸುಮಾರು ಐದು ಘಂಟೆಗಳ ನಿರಂತರ ಮನೋರಂಜನಾ ಕಾರ‍್ಯಕ್ರಮವನ್ನು ಈವರೆಗೆ. 7500ಕ್ಕೂ ಹೆಚ್ಚು ವೀಕ್ಷಕರು ಯೂಟ್ಯೂಬ್ ನ ಮುಖಾಂತರ ವೀಕ್ಷಿಸಿರುವುದು “ಆಟ”ದ ಉದ್ಘಾಟನಾ ಸಮಾ ರಂಭದ ಪ್ರಚಂಡ ಯಶಸ್ಸಿಗೆ ಸಾಕ್ಷಿ.

ಮನೋರಂಜನ ಕಾರ‍್ಯಕ್ರಮವನ್ನು ತುಳುನಾಡಿನ ಖ್ಯಾತ ಕಲಾವಿದರಾದ ಶ್ರೀ ಪಟ್ಲ ಸತೀಶ ಶೆಟ್ಟಿ , ಕಾವ್ಯಶ್ರೀ ಅಜೇರು, ರಮೇಶಚಂದ್ರ, ಶ್ರೀಮತಿ ನಂದಿನಿ ರಾವ್ ಗುಜಾರ್, ಶ್ರೀ ಗುರುಕಿರಣ್. ಮತ್ತು ಪ್ರಶಂಸಾ ಕಾಪು ತಂಡದ ಬಲೇ ತೆಲಿಪಾಲೆ ಖ್ಯಾತಿಯ ಕಲಾವಿದರು ನೆರವೇರಿಸಿಕೊಟ್ಟರು. ಎಲ್ಲಕ್ಕೂ ಮಿಗಿಲಾಗಿ ಅಮೆರಿಕಾದಲ್ಲಿ ನೆಲೆಸಿರುವ ತುಳುನಾಡಿನ ಮೂಲದ ಕುಟುಂಬಗಳು ನೃತ್ಯ ಗಾಯನದ ಮೂಲಕ ಕಾರ‍್ಯಕ್ರಮದ ಮೆರುಗನ್ನು ಹೆಚ್ಚಿಸಿ ಸಾವಿರಾರು ಮಂದಿ ಅಂತರ್ಜಾಲದ ಮೂಲಕ ಸಮಾರಂಭದ ವೀಕ್ಷಣೆಗೆ ಒಟ್ಟಾದದ್ದು ಅಂದಿನ ಕಾರ್ಯ ಕ್ರಮದ ಯಶಸ್ಸಿಗೆ ಹಿಡಿದ ಕೈಗನ್ನಡಿ.

ಸಂಘಟನೆಯ ಆಧ್ಯಕ್ಷರಾದ ಶ್ರೀ ಭಾಸ್ಕರ ಶೇರಿಗಾರರ ಪರಿಶ್ರಮ ಮತ್ತು ದೂರದರ್ಶಿತ್ವ ಎಲ್ಲರ ಪ್ರಶಂಸೆಗೆ ಒಳಗಾದದ್ದು ಸಂಘಟನೆಯ ಭವಿಷ್ಯದಲ್ಲಿನ ಯಶಸ್ಸಿಗೆ ಮುನ್ನುಡಿ ಬರೆಯಿತೆಂದೇ ಭಾವಿಸಬೇಕು. ಸಂಸ್ಥೆಯ ಕಾರ್ಯದರ್ಶಿ ಪ್ರಕಾಶ ಉಡುಪರ ವಂದನಾರ್ಪಣೆಯೊಂದಿಗೆ ಸುಮಾರು 3500ಕ್ಕೂ ಹೆಚ್ಚು ವೀಕ್ಷರು ನೇರ ಪ್ರಸಾರದಲ್ಲಿ ನೋಡಿದ ಆಭೂತಪೂರ್ವ ಕಾರ್ಯಕ್ರಮ ಕೊನೆಗೊಂಡಿತು.

 
 
 
 
 
 
 
 
 
 
 

Leave a Reply