ಕೊನೆಗೂ ಕೊರೊನಾ ಗೆದ್ದ ಎಸ್.ಪಿ.ಬಾಲ ಸುಬ್ರಹ್ಮಣ್ಯಂ

ಚೆನ್ನೈ : ಲಕ್ಷಾಂತರ ಅಭಿಮಾನಿಗಳ ಹರಕೆ, ಹಾರೈಕೆ ಫಲಿಸಿದೆ. ಎಸ್.ಪಿ.ಬಾಲಸುಬ್ರಹ್ಮಣ್ಯಂ ಕೊನೆಗೂ ಕೊರೊನಾ ಗೆದ್ದಿದ್ದಾರೆ. ಎಸ್ ಪಿಬಿ ಅವರ ಕೊರೊನಾ ತಪಾಸಣಾ ವರದಿ ನೆಗೆಟಿವ್ ಬಂದಿದ್ದು, ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ಚೆನ್ಮೈನ ಎಂಜಿಎಂ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಕಳೆದ 19 ದಿನಗಳಿಂದಲೂ ಚಿಕಿತ್ಸೆಯನ್ನು ಪಡೆಯುತ್ತಿರುವ ಎಸ್.ಪಿ. ಬಾಲ ಸುಬ್ರಹ್ಮಣಂ ಆರೋಗ್ಯ ಸಂಪೂರ್ಣವಾಗಿ ಹದಗೆಟ್ಟಿತ್ತು.​ ಈ ಹಿನ್ನೆಲೆಯಲ್ಲಿ ದೇಶದ ತಜ್ಞರ ವೈದ್ಯರ ಜೊತೆಗೆ ವಿದೇಶಿ ತಜ್ಞರ ಸಹಕಾರದೊಂದಿಗೆ ಬಾಲಸುಬ್ರಹ್ಮಣ್ಯಂ ಅವರಿಗೆ ಚಿಕಿತ್ಸೆಯನ್ನು ನೀಡಲಾಗುತ್ತಿತ್ತು. ಇದೀಗ ಎಸ್.ಪಿ.ಬಿ ಅವರು ಕೊರೊನಾ ಸೋಂಕನ್ನು ಗೆದ್ದಿದ್ದಾರೆ ಎಂದು ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಪುತ್ರ ಚರಣ್ ತಿಳಿಸಿದ್ದಾರೆ.​  

ಕಳೆದ 48 ಗಂಟೆಗಳಿಂದಲೂ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ಸ್ಥಿರವಾಗಿರುವುದು ಸಮಾಧಾನವನ್ನು ತಂದಿದೆ. ಆದರೆ ಕೊರೊನಾ ವೈರಸ್ ಸೋಂಕಿನ ವರದಿ ನೆಗೆಟಿವ್ ಬಂದಿದ್ದರೂ ಕೂಡ ಒಂದು ವಾರಗಳ ಕಾಲ ವೆಂಟಿಲೇಟರ್ ನಲ್ಲಿಯೇ ಚಿಕಿತ್ಸೆಯನ್ನು ನೀಡಲಾಗುತ್ತದೆ.​
 
 
 
 
 
 
 

Leave a Reply