ಸೆಲ್ಫಿಯ ಆಸೆಗೆ ಗುಂಡೇಟಿಗೆ ಬಲಿಯಾದ ಮಹಿಳೆ

ಲಕ್ನೋ : ಲಕ್ನೋದ ನಿವಾಸಿಯಾಗಿರುವ ರಾಧಿಕಾ ಗುಪ್ತಾ (26 ವರ್ಷ) ಎಂಬಾಕೆ ಸೆಲ್ಫಿಯ ಕ್ರೇಜ್ ನಿಂದ ಗುಂಡೇಟಿಗೆ ಬಲಿಯಾದ ಮಹಿಳೆ. ಮನೆಯಲ್ಲಿದ್ದ ಬಂದೂಕು ತೆಗೆದು ರಾಧಿಕಾ ಗುಪ್ತಾ ಸೆಲ್ಪಿ ತೆಗೆಯೋದಕ್ಕೆ ಮುಂದಾಗಿದ್ದಾರೆ. ಆದರೆ ಗನ್‌ ಲೋಡ್‌ ಆಗಿರೋ ವಿಚಾರ ರಾಧಿಕಾಗೆ ಗೊತ್ತೇ ಇರಲಿಲ್ಲ. ಸೆಲ್ಫಿ ಕ್ಲಿಕ್‌ ಮಾಡೋ ಬರದಲ್ಲಿ ಮೊಬೈಲ್‌ ಬದಲು ಗನ್‌ ಟ್ರಿಗರ್‌ ಒತ್ತಿದ್ದಾರೆ.

ರಾಧಿಕಾ ತನ್ನ ಗಂಟಲಿಗೆ ಸರಿಯಾಗಿ ಗನ್‌ ಹಿಡಿದು ಸೆಲ್ಪಿ ತೆಗೆದುಕೊಳ್ಳುತ್ತಿದ್ದರು. ಹೀಗಾಗಿ ಗುಂಡು ನೇರವಾಗಿ ಗಂಟಲಿಗೆ ಸಿಡಿದಿದ್ದು ರಾಧಿಕಾ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ರಾಧಿಕಾಗೆ ಗನ್‌ ಅಂದ್ರೆ ವಿಪರೀತ ವ್ಯಾಮೋಹ. ಗನ್‌ ಜೊತೆಗೆ ಆಗಾಗಾ ಪೋಟೋಗಳನ್ನು ಕ್ಲಿಕ್ಕಿಸಿಕೊಳ್ಳುತ್ತಿದ್ದಳು ಎಂದು ರಾಧಿಕಾ ಪತಿ ಆಕಾಶ್‌ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಕೆಲ ದಿನಗಳ ಹಿಂದೆಯಷ್ಟೇ ಅನುಮತಿ ಪಡೆದು ಗನ್‌ ಅನ್ನು ಮನೆಗೆ ತರಲಾಗಿತ್ತು. ಆದರೆ ಗನ್‌ ಲೋಡ್‌ ಆಗಿರೋ ವಿಚಾರ ಮಾತ್ರ ಗೊತ್ತಿರದೇ ಈ ದುರಂತ ಸಂಭವಿಸಿದೆ ಎಂದು ರಾಧಿಕಾರ ಮಾವ ರಾಜೇಶ್ ಗುಪ್ತಾ ತಿಳಿಸಿದ್ದಾರೆ. ಆದರೆ ಮಹಿಳೆಯ ಪೋಷಕರು ಇದೊಂದು ಕೊಲೆ ಎಂದು ಆರೋಪಿಸಿದ್ದು, ಪೊಲೀಸರು ಈ ಕುರಿತು ತನಿಖೆಯನ್ನು ನಡೆಸುತ್ತಿದ್ದಾರೆ.

 
 
 
 
 
 
 
 
 
 
 

Leave a Reply