ವಿಮಾನ ನಿಲ್ದಾಣದಲ್ಲಿ ಸಲ್ಮಾನ್​ ಖಾನ್ ರನ್ನು ತಡೆದ ಸಿಐಎಸ್​ಎಫ್​ ಅಧಿಕಾರಿ ಸೋಮನಾಥ್​ ಮೊಹಂತಿಗೆ ಸಂಕಷ್ಟ!

ಬಾಲಿವುಡ್​ ನಟ ಸಲ್ಮಾನ್​ ಖಾನ್​ರನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ತಡೆದು ನಿಲ್ಲಿಸಿ ಭಾರಿ ಮೆಚ್ಚುಗೆಗೆ ಪಾತ್ರರಾಗಿದ್ದ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ (ಸಿಐಎಸ್​ಎಫ್​) ಯುವ ಅಧಿ ಕಾರಿ ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಕೆಲವು ದಿನಗಳ ಹಿಂದೆ ಸಲ್ಮಾನ್​ ಖಾನ್​ರನ್ನು ತಡೆದು ಭದ್ರತಾ ತಪಾಸಣೆ ನಡೆಸುವ ಮೂಲಕ ರಾತ್ರೋರಾತ್ರಿ​ ರಿಯಲ್​ ಹೀರೋ ಆಗಿ ಎಲ್ಲರ ಗಮನ ಸೆಳೆದಿದ್ದ ಸೋಮನಾಥ್​ ಮೊಹಂತಿ ಇದೀಗ ಚಿಕ್ಕದೊಂದು ತಪ್ಪಿನಿಂದ ಸಮಸ್ಯೆಗೆ ಸಿಕ್ಕಿಹಾಕಿ ಕೊಂಡಿದ್ದಾರೆ.
ಟೈಗರ್​ 3 ಚಿತ್ರದ ಚಿತ್ರೀಕರಣಕ್ಕಾಗಿ ಸಲ್ಮಾನ್​ ಖಾನ್​ ಅವರು ವಿದೇಶಕ್ಕೆ ತೆರಳಲೆಂದು ಮುಂಬೈ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ಮೊಹಂತಿ ಏರ್​ಪೋರ್ಟ್​ನಲ್ಲಿ ಕರ್ತವ್ಯದಲ್ಲಿದ್ದರು. ಬಹು ತೇಕರು ವಿಐಪಿಗಳು ಬಂದಾಗ ಭದ್ರತಾ ತಪಾಸಣೆ ನಡೆಸಲು ಹಿಂಜರಿಯುತ್ತಾರೆ.
ಆದರೆ, ಯಾವುದಕ್ಕೂ ಕ್ಯಾರೆ ಎನ್ನದೇ ಮೊಹಂತಿ ಅವರು ಸಲ್ಮಾನ್​ ಭದ್ರತಾ ತಪಾಸಣೆ ನಡೆಸಿ ಕಳುಹಿಸಿ ದ್ದರು. ಸಲ್ಮಾನ್​ ಖಾನ್​ರನ್ನು ತಡೆದು ಸಾಮಾನ್ಯ ಜನರ ರೀತಿ ಸಾಲಿನಲ್ಲಿ ನಿಲ್ಲುವಂತೆ ಯು ಮತ್ತು ದಾಖಲಾತಿಗಳನ್ನು ತೋರಿಸುವಂತೆ ಹೇಳಿದರು.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದರಿಂದ ಹೀರೋ ಏನೋ ಆದರು. ಆದರೆ ಇದೇ ಅವರಿಗೆ ಮುಳುವಾಗಿದೆ. ಅದೇನೆಂದರೆ ವೈರಲ್​ ವಿಡಿಯೋಗೆ ಸಂಬಂಧಿಸಿದಂತೆ ಮಾಧ್ಯಮವೊಂದಕ್ಕೆ ಮೊಹಂತಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಇದರಿಂದ ತೊಂದರೆಗೆ ಸಿಲುಕಿ ದ್ದಾರೆ. ಹೌದು, ಘಟನೆಗೆ ಸಂಬಂಧಿಸಿದಂತೆ ಅವರಿಂದ ಪ್ರತಿಕ್ರಿಯೆ ಪಡೆಯಲು ಮಾಧ್ಯಮ ಪ್ರತಿನಿಧಿಗಳು ಕರೆ ಮಾಡಿದಾಗ ಅವರು ಪ್ರತಿಕ್ರಿಯೆ ನೀಡಿಬಿಟ್ಟಿದ್ದಾರೆ. 
ಅಸಲಿಗೆ ಸಿಐಎಸ್​ಎಫ್​ ಪ್ರೋಟೋಕಾಲ್​ ಪ್ರಕಾರ ಅವರು ಮಾಧ್ಯಮಗಳ ಜತೆಗೆ ಹಿರಿಯ ಅಧಿಕಾರಿಗಳ ಪೂರ್ವಾನುಮತಿ ಇಲ್ಲದೆಯೇ ಮಾತುಕತೆ ನಡೆಸುವಂತಿರಲಿಲ್ಲ.
ಆದ್ದರಿಂದ ಇವರು ನಿಯಮ ಮೀರಿದ್ದರಿಂದ ಅವರ ಮೊಬೈಲ್​ ಫೋನ್​ ಅನ್ನು ಹಿರಿಯ ಅಧಿಕಾರಿ ಗಳು ವಶಕ್ಕೆ ಪಡೆದಿದ್ದಾರೆ, ಈಗ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.
 
 
 
 
 
 
 
 
 

Leave a Reply