74ನೇ ಸ್ವಾತಂತ್ರ್ಯೋತ್ಸವದ ಸಂದೇಶ ನೀಡಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್  

ನವದೆಹಲಿ, ಆಗಸ್ಟ್ 14:

ಇಂದು 74ನೇ ಸ್ವಾತಂತ್ರ್ಯೋತ್ಸವದ ಸಂದೇಶವನ್ನು ನೀಡಿ ಮಾತನಾಡಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಈ ದೇಶದ ಸ್ವತಂತ್ರ್ಯ ಪ್ರಜೆಗಳು ಎಂಬ ವಿಚಾರಕ್ಕೆ ಯುವಜನರು ಹೆಮ್ಮೆಪಡಬೇಕು. ಸ್ವಾತಂತ್ರ್ಯ ಚಳವಳಿಗೆ ಮಹಾತ್ಮ ಗಾಂಧೀ ಸಹಿತ ಅನೇಕ ಹೋರಾಟಗಾರರು ದಾರಿದೀಪವಾಗಿದ್ದರು. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ವೈದ್ಯರು, ವೈದ್ಯಕೀಯ ಸಿಬ್ಬಂದಿ, ಆರೋಗ್ಯ ಕಾರ್ಯ ಕರ್ತರ ಬಗ್ಗೆ ಇಡೀ ದೇಶವೇ ಹೆಮ್ಮೆ ಪಡುತ್ತದೆ.

ಮುಂಚೂಣಿಯಲ್ಲಿ ನಿಂತು ಅವರು ಕೊರೊನಾದ ವಿರುದ್ಧ ಹೋರಾಡುತ್ತಿದ್ದಾರೆ. ಕೆಲವರು ಈ ಹೋರಾಟದಲ್ಲಿ ಬಲಿಯಾಗಿದ್ದಾರೆ, ಅವರೆಲ್ಲರೂ ನಮ್ಮ ಹೆಮ್ಮೆಯ ಪ್ರತೀಕ ಎಂದರು.

ಈ ರೋಗದ ವಿರುದ್ಧ ನಾವು ಸಾಂಘಿಕವಾಗಿ ಹೋರಾಡಬೇಕು, ಇಂತಹ ಸಂದರ್ಭದಲ್ಲಿ ನಿರ್ಲಕ್ಷ ಸಲ್ಲದು ಎಂದಿದ್ದಾರೆ. ಗಡಿಯನ್ನು ಕಾಯುವ ಯೋಧರು ಹುತಾತ್ಮರಾಗಿದ್ದಾರೆ, ಭಾರತ ಮಾತೆಯ ಹೆಮ್ಮೆಯ ಪುತ್ರರಿಗೆ ನಮನಗಳು ಎಂದ ರಾಷ್ಟ್ರಪತಿ, ಗಾಲ್ವಾನ್ ಕಣಿವೆಯಲ್ಲಿ ಹುತಾತ್ಮರಾದ ಯೋಧರನ್ನು ಸ್ಮರಿಸಿದ್ದಾರೆ.

ಕಣ್ಣಿಗೆ ಕಾಣದ ವೈರಾಣು ನಾನೇ ಪ್ರಕೃತಿಯ ಯಜಮಾನ ಎಂಬ ಮನುಷ್ಯನ ಧೋರಣೆಯನ್ನು ಧೂಳೀಪಟ ಮಾಡಿದೆ. ನಿಸರ್ಗದೊಂದಿಗೆ ಸೌಹಾರ್ದಯುತವಾಗಿ ಜೀವಸಲು ಇನ್ನಾದರೂ ಪರಿಣಾಮ ಕಾರಿಯಾಗಿ ಪ್ರಯತ್ನಿಸೋಣ ಎಂದು ಕರೆ ನೀಡಿದರು.

 
 
 
 
 
 
 
 
 
 
 

Leave a Reply