ರಕ್ಷಣಾ ಸಚಿವಾಲಯ 2,290 ಕೋಟಿ ರೂ. ಮೌಲ್ಯದ ಶಸ್ತ್ರಾಸ್ತ್ರ ಸಂಗ್ರಹಣೆಗೆ ಅನುಮೋದನೆ   

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ರಕ್ಷಣಾ ಸಚಿವಾಲಯದ ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯಾದ ರಕ್ಷಣಾ ಸ್ವಾಧೀನ ಮಂಡಳಿ ಈ ಖರೀದಿ ಪ್ರಸ್ತಾವನೆಗೆ ಅನುಮೋದನೆ ಕೊಟ್ಟಿದೆ.​ ​ರಕ್ಷಣಾ ಸ್ವಾಧೀನ ಮಂಡಳಿ ಸಭೆಯು ಭಾರತೀಯ ಸಶಸ್ತ್ರ ಪಡೆಗಳಿಗೆ ಬೇಕಾಗಿರುವ ವಿವಿಧ ಉಪಕರಣಗಳ ಸುಮಾರು 2,290 ಕೋಟಿ ರೂ. ವೆಚ್ಚದ ಅನುಮೋದನೆ ನೀಡಿದೆ ಎಂದು ರಕ್ಷಣಾ ಸಚಿವಾಲಯ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.​ 

ಸ್ವದೇಶಿ ವಿನ್ಯಾಸ, ಅಭಿವೃದ್ಧಿ ಮತ್ತು ಉತ್ಪಾದನೆ (ಐಡಿಡಿಎಂ) ವಿಭಾಗದಲ್ಲಿ ಡಿಎಸಿ ಸುಮಾರು 1,510 ಕೋಟಿ ರೂ. ವೆಚ್ಚದಲ್ಲಿ ಸ್ಟ್ಯಾಟಿಕ್​ ಹೆಚ್‌ ಎಫ್ ಟ್ಯಾನ್ಸ್-ರಿಸೀವರ್ ಸೆಟ್‌ ಮತ್ತು ಸ್ಮಾರ್ಟ್ ಆಂಟಿ ಏರ್‌ಫೀಲ್ಡ್ ವೆಪನ್ (ಎಸ್‌ಎಎ ಡಬ್ಲ್ಯೂ) ಖರೀದಿಗೆ ಅನುಮೋದನೆ ನೀಡಲಾಗಿದೆ. ಹೆಚ್‌ಎಫ್ ರೇಡಿಯೊ ಸೆಟ್‌ಗಳನ್ನು ಅಂದಾಜು 540 ಕೋಟಿ ರೂ. ವೆಚ್ಚದಲ್ಲಿ ಖರೀದಿಸಲಾಗುತ್ತದೆ.

ಸ್ಮಾರ್ಟ್ ಆಂಟಿ ಏರ್​​ಫೀಲ್ಡ್ ವೆಪನ್ ಸುಮಾರು 970 ಕೋಟಿ ರೂ. ವೆಚ್ಚ ವಾಗಲಿದ್ದು, ಇದು ನೌಕಾಪಡೆ ಮತ್ತು ವಾಯುಪಡೆಯ ಅಗ್ನಿಶಾಮಕ ದಳದ ಶಕ್ತಿ ಇಮ್ಮಡಿಗೊಳಿಸುತ್ತದೆ. ಗಡಿಯಲ್ಲಿ ಸೈನ್ಯದ ಮುಂಚೂಣಿ ಪಡೆಗಳನ್ನು ಸಜ್ಜುಗೊಳಿಸಲು, ಡಿಎಸಿ ಸುಮಾರು 780 ಕೋಟಿ ರೂ. ವೆಚ್ಚದಲ್ಲಿ ಸಿಗ್ ಸೌರ್ ಅಸಾಲ್ಟ್​ ರೈಫಲ್​ಗಳನ್ನು ಖರೀದಿಸಲು ಅನುಮೋದನೆ ನೀಡಿದೆ. ಇನ್ನು ಈ ಹೊಸ ಪ್ರಸ್ತಾವನೆ ಭೂ ಸೇನೆಯ ಆಧುನೀಕರಣದ ಭಾಗವಾಗಿ 2019ರ ಆರಂಭದಲ್ಲಿ ಅಮೆರಿಕ ಜತೆಗೆ 72,400 ರೈಫಲ್‌ಗಳ ಆರ್ಡರ್ ಗಳನ್ನು ಒಳಗೊಂಡಿದೆ.

Leave a Reply