Janardhan Kodavoor/ Team KaravaliXpress
24 C
Udupi
Saturday, January 23, 2021

ಶ್ರೀಪಾದ ನಾಯ್ಕ ಅವರ ಆರೋಗ್ಯ  ಸ್ಥಿರ: ಸಚಿವ ರಾಜನಾಥ್ ಸಿಂಗ್

ಕೇಂದ್ರ ಆಯುಷ್ ಮಂತ್ರಿ ಶ್ರೀಪಾದ ನಾಯ್ಕ ಅವರ ಆರೋಗ್ಯ ಸದ್ಯ ಸ್ಥಿರವಾಗಿದ್ದು, ಗೋವಾ ಬಾಂಬೋಲಿಂ ಆಸ್ಪತ್ರೆಯ ವೈದ್ಯರೊಂದಿಗೆ ದೆಹಲಿಯ ಏಮ್ಸ್ ಆಸ್ಪತ್ರೆಯ ವೈದ್ಯರ ತಂಡ ಸತತವಾಗಿ ಸಂಪರ್ಕದಲ್ಲಿದ್ದು, ಸದ್ಯ ಎಲ್ಲ ಚಿಕಿತ್ಸೆಯನ್ನೂ ಅವರ ಮಾರ್ಗದರ್ಶನದಲ್ಲಿ ಗೋವಾದಲ್ಲಿಯೇ ನೀಡಲಿದ್ದಾರೆ. 
ಅಗತ್ಯಬಿದ್ದರೆ ಅವರನ್ನು ದೆಹಲಿಗೆ ಕರೆದೊಯ್ಯಲಾಗುವುದು ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಮಂಗಳವಾರ ದೆಹಲಿಯಿಂದ ಗೋವಾಕ್ಕೆ ಆಗಮಿಸಿದ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ರವರು ಆಸ್ಪತ್ರೆಗೆ ತೆರಳಿ ಶ್ರೀಪಾದ ನಾಯ್ಕ ರವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.
ಬಳಿಕ ಮಾತನಾಡಿದ ಅವರು, ಶ್ರೀಪಾದ ನಾಯ್ಕ ಅವರ ಆರೋಗ್ಯ ಸದ್ಯ ಸ್ಥಿರವಾಗಿದೆ .ಅವರಿಗೆ ಗೋವಾ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಮುಂದುವರೆ ಯಲಿದೆ. ಇಲ್ಲಿನ ವೈದ್ಯರು ಸಮಯಕ್ಕೆ ತಕ್ಕಂತೆಯೇ ಸೂಕ್ತ ನಿರ್ಣಯ ತೆಗೆದುಕೊಳ್ಳುತ್ತಿದ್ದಾರೆ, ಇದಕ್ಕೆ ಬಾಂಬೋಲಿಂ ವೈದ್ಯರ ತಂಡಕ್ಕೆ ಧನ್ಯವಾದ ಸಲ್ಲಿಸುತ್ತೇನೆ ಎಂದರು.
ಶ್ರೀಪಾದ ನಾಯ್ಕ ಅವರಿಗೆ ಅಪಘಾತವಾಗಿರುವ ವಿಷಯ ತಿಳಿದ ನಂತರ ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ರವರೊಂದಿಗೆ ದೂರವಾಣಿಯ ಮೂಲಕ ಮಾತನಾಡಿದ್ದೇನೆ. ಪ್ರಧಾನಿ ಅವರು ಗೋವಾ ಸಿಎಂ ಜೊತೆ ಮಾತನಾಡಿದ್ದಾರೆ. ಬಳಿಕ ಪ್ರಧಾನಿ ಅವರು ನನಗೆ ದೂರವಾಣಿ ಕರೆ ಮಾಡಿ ನೀವೆ ಸ್ವತಃ ಗೋವಾಕ್ಕೆ ತೆರಳಿ ಶ್ರೀಪಾದ ನಾಯ್ಕರ ಆರೋಗ್ಯ ವಿಚಾರಿಸಲು ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ನೇರವಾಗಿ ಗೋವಾಕ್ಕೆ ಆಗಮಿಸಿ ದ್ದಾಗಿ ಹೇಳಿದ್ದಾರೆ.
- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

ಪಾಜಕಕ್ಷೇತ್ರದಲ್ಲಿ ಕಾಣಿಯೂರು ಮಠಾಧೀಶರಿಂದ ಮಧ್ವನವಮಿಯ ವಿಶೇಷ ಪೂಜೆ

ಜಗದ್ಗುರು ಶ್ರೀಮನ್ಮಧ್ವಾಚಾರ್ಯರ ಅವತಾರವೆತ್ತಿದ ಪುಣ್ಯ ಸ್ಥಳ ಪಾಜಕಕ್ಷೇತ್ರದಲ್ಲಿ ಮಧ್ವನವಮಿಯ ಪ್ರಯುಕ್ತ ಕಾಣಿಯೂರು ಮಠಾಧೀಶರಾದ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ 7 ದಿನಗಳಿಂದ ನಡೆಯುತಿದ್ದ ಋಗ್ ಸಂಹಿತಾ ಯಾಗದ ಪೂರ್ಣಾಹುತಿ,ವಿದ್ವಾಂಸರಿಂದ ಸರ್ವಮೂಲ ಪಾರಾಯಣ, ಪ್ರವಚನಗಳು...

ವೇಗವಾಗಿ ಸಾಗುತ್ತಿದೆ ಅಂಬಾಗಿಲು ಪೆರಂಪಳ್ಳಿ ಮಣಿಪಾಲ ರಸ್ತೆ ಅಗಲೀಕರಣ ಕಾಮಗಾರಿ

ಉಡುಪಿ:  ಲೋಕೋಪಯೋಗಿ ಇಲಾಖೆ ವತಿಯಿಂದ ಮತ್ತು ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಟಿ ಡಿ ಆರ್ ಸಹಕಾರದೊಂದಿಗೆ ಚತುಷ್ಪಥ ಗೊಳ್ಳುತ್ತಿರುವ ಅಂಬಾಗಿಲು  ಪೆರಂಪಳ್ಳಿ ಮಣಿಪಾಲ ರಸ್ತೆ ಅಗಲೀಕರಣದ ಕಾಮಗಾರಿbÿಶಾಸಕ ಕೆ. ರಘುಪತಿ ಭಟ್ ಮಾರ್ಗದರ್ಶನದಲ್ಲಿ...

ಉಡುಪಿಯಲ್ಲಿ ವೈದ್ಯರು ಸೇರಿದಂತೆ ಆರೋಗ್ಯ ಕಾರ್ಯಕರ್ತರಿಗೆ ಮೊದಲ ಹಂತದಲ್ಲಿ ಲಸಿಕೆ ವಿತರಣೆ

ಉಡುಪಿಯಲ್ಲಿ  ವೈದ್ಯರು ಸೇರಿದಂತೆ 5078 ಮಂದಿ ಆರೋಗ್ಯ ಕಾರ್ಯಕರ್ತರಲ್ಲಿ 2657 ಮಂದಿ ಶುಕ್ರವಾರ ಕೊರೋನ ವಿರುದ್ಧದ ‘ಕೊವಿಶೀಲ್ಡ್’ ಲಸಿಕೆ ಪಡೆದಿದ್ದಾರೆ. ಇದು ದಿನದ ನಿಗದಿತ ಗುರಿಯ ಶೇ.52ರಷ್ಟು ಸಾಧನೆಯಾಗಿದೆ ಎಂದು ಉಡುಪಿ ಜಿಲ್ಲಾ...

ಮಂಗಳೂರಿನಲ್ಲಿ ರಾಗಿಂಗ್ ನಡೆಸಿದ 9 ವಿದ್ಯಾರ್ಥಿಗಳ ಬಂಧನ

ಮಂಗಳೂರು : ರಾಗಿಂಗ್  ಮಾಡಿದ್ದಕ್ಕಾಗಿ 9 ಮಂದಿ ವಿದ್ಯಾರ್ಥಿಗಳನ್ನು ಮಂಗಳೂರು ನಗರ ಪೊಲೀಸರು ಶುಕ್ರವಾರಬಂಧಿಸಿದ ಘಟನೆ ನಡೆದಿದೆ. ಬಂಧಿತರ ಮೇಲೆ ಕರ್ನಾಟಕ ಶಿಕ್ಷಣ ಕಾಯ್ದೆ ಮತ್ತು ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮಂಗಳೂರಿನ ಖಾಸಗಿ...

ಕೊಡವೂರು ಶ್ರೀ ಶಂಕರನಾರಾಯಣ ದೇವಳದಲ್ಲಿ ಜ.25-ಫೆ.05 ಮಹಾರಥೋತ್ಸವ, ರಾಶಿ ಪೂಜಾ ಮಹೋತ್ಸವದ ಸಡಗರ

ಮಹತೋಬಾರ ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ಜ.25 ರಿಂದ ಫೆ.05ರ ವರೆಗೆ ಶ್ರೀ ದೇವಳದ ಮಹಾರಥೋತ್ಸವ ಹಾಗೂ ರಾಶಿ ಪೂಜೆಯ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ವೇದಮೂರ್ತಿ ಪುತ್ತೂರು ಹಯವದನ ತಂತ್ರಿಗಳ ಮಾರ್ಗದರ್ಶನದಲ್ಲಿ...
error: Content is protected !!