ಪ್ರಧಾನಿ ನರೇಂದ್ರ ಮೋದಿಯವರಿಗೆ ಶುಭಾಶಯ ಕೋರಿದ ರಾಹುಲ್ ಗಾಂಧಿ 

ಪ್ರಧಾನಿ ನರೇಂದ್ರ ಮೋದಿಯವರು ಇಂದು 70ನೇ ಜನ್ಮದಿನಾಚರಣೆ ನಿತ್ಯವೂ ಒಂದಿಲ್ಲೊಂದು ಟೀಕೆಗಳನ್ನು ಟ್ವೀಟ್ ಮೂಲಕ ಮಾಡುತ್ತ ಬಂದಿರುವ ಕಾಂಗ್ರೆಸ್ ಕಣ್ಮಣಿ ರಾಹುಲ್ ಗಾಂಧಿ ಪ್ರಧಾನಿ ಮೋದಿಯವರಿಗೆ ಶುಭಾಶಯ. ತಾಯಿ ಸೋನಿಯಾ ಅವರ ಜತೆಗೆ ವಿದೇಶಕ್ಕೆ ತೆರಳಿರುವ ರಾಹುಲ್ ಗಾಂಧಿ ಗುರುವಾರ ಬೆಳಗ್ಗೆ 7.11ಕ್ಕೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಹ್ಯಾಪಿ ಬರ್ತ್​ ಡೇ ಎಂದು ವಿಶ್ ಮಾಡಿದ್ದಾರೆ.

ಇದೇ ವೇಳೆ, ಕಾಂಗ್ರೆಸ್ಸಿಗರು ಮತ್ತು ಅವರ ಬೆಂಬಲಿಗರು ಟ್ವಿಟರ್​ನಲ್ಲಿ ಬೇರೋಜಗಾರಿ ದಿವಸ್ ಎಂಬ ವಿಚಾರವನ್ನು ಇಟ್ಟುಕೊಂಡು ಟ್ರೆಂಡಿಂಗ್ ಸೃಷ್ಟಿಸಲು ಪ್ರಯತ್ನಿಸಿದ್ದಾರೆ. ಆ ಮೂಲಕ ಮೋದಿಯವರ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಲು ಮುಂದಾಗಿದ್ದಾರೆ.

Leave a Reply