Janardhan Kodavoor/ Team KaravaliXpress
21.6 C
Udupi
Thursday, December 8, 2022
Sathyanatha Stores Brahmavara

ವಾಹನ ಚೇಸ್ ಮಾಡಿದಕ್ಕೆ ಮುಂಬೈ ಪೊಲೀಸ್ ಗರಮ್

ವಾಹನ ಹಿಂಬಾಲಿಸಿದಕ್ಕೆ ಮಾಧ್ಯಮಗಳ ಮೇಲೆ ಮುಂಬೈ ಪೋಲಿಸರು ಗರಮ್

ಮುಂಬೈ:ಬಾಲಿವುಡ್​ನಲ್ಲೂ ಡ್ರಗ್ಸ್​ ಮಾಫಿಯಾದ ಪ್ರಕರಣ ಬಾರಿ ಸುದ್ದಿಯಲ್ಲಿದೆ.ಈ ಹಿನ್ನೆಲೆಯಲ್ಲಿ ಕೆಲವು ನಟಿಯರ ವಿಚಾರಣೆಗಳು ನಡೆಯುತ್ತಿವೆ. ಎನ್​ಸಿಬಿ ಅಧಿಕಾರಿಗಳು ಬಾಲಿವುಡ್ ನಟ, ನಟಿಯರನ್ನು ಕರೆಸಿ ವಿಚಾರಣೆಗೆ ಒಳಪಡಿ ಸಿದ್ದಾರೆ.

ಇನ್ನೂ ತಮ್ಮ ನೆಚ್ಚಿನ ನಟ ನಟಿಯರು ವಿಚಾರಣೆಯಲ್ಲಿ ಏನು ಹೇಳಿದ್ದಾರೆ.ನಿಜವಾಗಿಯೂ ಅವರು ಈ ಮಾಫಿಯಾದ ಪಾಲುದಾದರರೆ ಎಂಬ ಕುತೂಹಲ ಜನರಲ್ಲಿ ಇದ್ದೇ ಇರುತ್ತದೆ. ಅಂತೆಯೆ ಆ ಕುರಿತು ತಮ್ಮ ವೀಕ್ಷಕರಿಗೆ ಕ್ಷಣಕ್ಷಣದ ಮಾಹಿತಿ ನೀಡಲು ಮಾಧ್ಯಮದವರು ಹಿಂಬಾಲಿಸಿ,ಮುಗಿಬೀಳುವುದು ಸಹಜ. ಆದರೆ ಇಂದು ನಟಿಯರ ವಾಹನ ಚೇಸ್ ಮಾಡಿದವರಿಗೆಲ್ಲಾ ಒಂದು ಶಾಕ್ ಕಾದಿತ್ತು.

ಹೌದು ಹೀಗೆ ನಟಿಯರ ವಾಹನ ಚೇಸ್ ಮಾಡಿದಕ್ಕೆ ಮುಂಬೈ ಪೊಲೀಸರು ಗರಮ್ ಆಗಿದ್ದಾರೆ.ಯಾಕೆಂದರೆ, ಹೀಗೆ ಚೇಸ್​ ಮಾಡುವುದರಿಂದ ಮಾಧ್ಯಮದವರ ಪ್ರಾಣಕ್ಕೆ ಕುತ್ತು ಮಾತ್ರವಲ್ಲದೆ, ವಿಚಾರಣೆಗೆ ಹಾಜರಾದವರಿಗೂ ಮತ್ತು ಸಾರ್ವಜನಿ ಕರ ಪ್ರಾಣಕ್ಕೂ ಸಂಚಕಾರವಾಗುವ ಸಾಧ್ಯತೆ ಇದೆ.ಹೀಗಾಗಿ ಮುಂಬೈ ಡಿಸಿಪಿ ಸಂಗ್ರಾಮ್​ ಸಿಂಗ್​ ನಿಶಾಂದರ್ ಮಾಧ್ಯಮದವರ ವಾಹನಗಳನ್ನು ಸೀಜ್​ ಮಾಡಲಾಗುತ್ತದೆ ಎಂಬ ಸೂಚನೆಯೊಂದಿಗೆ ಎಚ್ಚರಿಕೆ ನೀಡಿದ್ದಾರೆ.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!