ಹಾಲಿ ಮಾಜಿಗಳ ಭೇಟಿ 

ಪ್ರಧಾನಿ ನರೇಂದ್ರ ಮೋದಿ ಮತ್ತು ಮಾಜಿ ಪ್ರಧಾನಿ ಹೆಚ್.ಡಿ.ದೇವೆಗೌಡರ ನಡುವೆ ಒಳ್ಳೆಯ ಸಂಬಂಧವಿರುವುದು ಹಲವಾರು ಸನ್ನಿವೇಶಗಳಲ್ಲಿ ಅನಾವರಣಗೊಂಡಿದೆ. ಹಲವಾರು ರಾಷ್ಟ್ರ‍ೀಯ ಸಮಾರಂಭಗಳಲ್ಲಿ ದೇವೇಗೌಡರು ಪ್ರಧಾನಿ ನರೇಂದ್ರ ಮೋದಿಯವರ ಜೊತೆಗೆ ಮನ್ ಕಿ ಬಾತ್ ಮಾಡುವ ಫೋಟೋಗಳು ವೈರಲ್ ಆಗಿದ್ದವು. ಇಂದು ಮೋದಿ ಹುಟ್ಟುಹಬ್ಬದ ಪ್ರಯುಕ್ತ ಮಾಜಿ ಪ್ರಧಾನಿ ದೇವೇಗೌಡರು ತನ್ನ ಮನದಾಳದ ಮಾತುಗಳನ್ನು ಪತ್ರದಲ್ಲಿ ಬರೆದು ಪ್ರಧಾನಿ ನರೇಂದ್ರ ಮೋದಿಯವರಿಗೆ ಶುಭ ಹಾರೈಸಿದ್ದಾರೆ. ಕೊರೊನಾ ಸಂದಿಗ್ಧ ಪರಿಸ್ಥಿತಿಯಲ್ಲಿ ದೇಶವನ್ನು ಮುನ್ನಡೆಸುತ್ತಿರುವ ನಿಮಗೆ ನನ್ನ ಸಂಪೂರ್ಣ ಬೆಂಬಲವಿದೆ. ನಿಮ್ಮ ಆರೋಗ್ಯ ಮತ್ತು ಸಂತೋಷಭರಿತ ಜೀವನಕ್ಕಾಗಿ ನಾನು ದೇವರಲ್ಲಿ ಪ್ರಾರ್ಥಿಸುವೆ ಎಂದು ಮಾಜಿ ಪ್ರಧಾನಿ ದೇವೆಗೌಡರು ಪ್ರಧಾನಿ ನರೇಂದ್ರ ಮೋದಿಯವರಿಗೆ ಶುಭ ಕೋರಿದ್ದಾರೆ.

 
 
 
 
 
 
 

Leave a Reply