ನವೀಕರಣಗೊಂಡ ಸೆಂಟ್ರಲ್ ವಿಸ್ತ ಅವೆನ್ಯೂ ಅನಾವರಣ

ಸಂಪೂರ್ಣವಾಗಿ ನವೀಕರಣಗೊಂಡ ಸೆಂಟ್ರಲ್ ವಿಸ್ತ ಅವೆನ್ಯೂವನ್ನು ಪ್ರಧಾನಿ ಇಂದು ಅನಾವರಣ ಗೊಳಿಸಿದರು. ರಾಷ್ಟ್ರಪತಿ ಭವನದಿಂದ ಇಂಡಿಯಾ ಗೇಟ್ ವರೆಗಿನ ಮೂರು ಕಿಲೋಮೀಟರ್ ಉದ್ದದ ರಾಜಪಥಕ್ಕೆ ಕರ್ತವ್ಯ ಪಥ ಎಂದು ಪ್ರಧಾನಿ ಮರುನಾಮಕರಣ ಮಾಡಿದ್ದಾರೆ.

ಪ್ರಾರಂಭದಲ್ಲಿ ನೇತಾಜಿ ಪ್ರತಿಮೆಯನ್ನು ಅನಾವರಣಗೊಳಿಸಿದ ಪ್ರಧಾನಿ, ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದರು. ಈ ಪ್ರತಿಮೆ 28 ಎತ್ತರವಿದ್ದು 65 ಟನ್ ತೂಕದ್ದಾಗಿದೆ. ಆಂಧ್ರಪ್ರದೇಶದ ಕಮ್ಮಾಂನ ಗ್ರಾನೈಟ್ ಬಳಸಿ ಪ್ರತಿಮೆಯನ್ನು ಕೆತ್ತಲಾಗಿದೆ. ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಈ ಪ್ರತಿಮೆ ಕೆತ್ತನೆ ಮಾಡಿದ್ದಾರೆ. ನಂತರ ಪ್ರಧಾನಿ ಹೊಸ ಸೆಂಟ್ರಲ್ ವಿಸ್ಟಾ ಅವೆನ್ಯೂದಲ್ಲಿನ ವಸ್ತು ಪ್ರದರ್ಶನ ಕೇಂದ್ರಕ್ಕೆ ಭೇಟಿ ನೀಡಿ, ಸೆಂಟಲ್ ವಿಸ್ತಾ ಯೋಜನೆಯಲ್ಲಿ ಶ್ರಮವಹಿಸಿದ ಕಾರ್ಮಿಕರ ಜೊತೆ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಅಮಿತ್ ಶಾ, ಧರ್ಮೇಂದ್ರ ಪ್ರಧಾನ್, ಗಜೇಂದ್ರ ಚೌಹಾನ್, ಪ್ರಧಾನಿ ಆರ್ಥಿಕ ಮಂಡಳಿಯ ಸದಸ್ಯಕ್ಕೆ ಸಂಜೀವ್ ಸನ್ಯಾಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply