ಹೋಳಿ ಜನರ ಬದುಕಿಗೆ ಹೊಸ ಬಣ್ಣಗಳನ್ನು ನೀಡಲಿ : ಪ್ರಧಾನಿ ಮೋದಿ.

ನವದೆಹಲಿ : ದೇಶದಲ್ಲಿ ಇಂದು ಸಂಭ್ರಮದಿಂದ ಹೋಳಿ ಹಬ್ಬ ಆಚರಿಸಲಾಗುತ್ತಿದ್ದು, ದೇಶದ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಹೋಳಿ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಜನರ ಬದುಕಿನಲ್ಲಿ ವೈವಿಧ್ಯಮಯ ರಂಗು ತರಲಿ ಎಂದು ಕೋರಿದ್ದಾರೆ.

‘ನಿಮ್ಮೆಲ್ಲರಿಗೂ ಹೋಳಿ ಶುಭಾಶಯಗಳು. ಹಬ್ಬದ ಬಣ್ಣಗಳು ಜನರ ಬದುಕಿಗೆ ಹೊಸ ಬಣ್ಣಗಳನ್ನು ನೀಡಲಿ. ಪರಸ್ಪರ ಪ್ರೀತಿ, ಭ್ರಾತೃತ್ವ ಮತ್ತು ವಿಶ್ವಾಸ ಎಲ್ಲರ ಬಾಳಿನಲ್ಲೂ ಬೆಳಗಬೇಕು. ಪ್ರತಿ ಬಣ್ಣವೂ ಬದುಕಿಗೆ ಸಂತಸ ತರಲಿ ಎಂದು ಶುಭಾಶಯ ತಿಳಿಸಿದ್ದಾರೆ.

 
 
 
 
 
 
 
 
 

Leave a Reply