ರೈತರಿಗೆ ಆರ್ಥಿಕ ನೆರವು – ಪ್ರಧಾನಿ ಘೋಷಣೆ

ನವದೆಹಲಿ : ಕೃಷಿ ಮೂಲಸೌಕರ್ಯ ನಿಧಿ ಯೋಜನೆ ಹಾಗೂ 8.5 ಕೋಟಿ ರೈತರಿಗೆ ಕಿಸಾನ್ ಯೋಜನೆಯ 6 ನೇ ಕಂತಿನ 17 ಸಾವಿರ ಕೋಟಿ ರೂ.ಹಣವನ್ನು ಬಿಡುಗಡೆ ಮಾಡಿದರು. ಒಟ್ಟಾರೆ 1 ಲಕ್ಷ ಕೋಟಿ ರೂ. ಯೋಜನೆಗೆ  ಪ್ರಧಾನಿ ನರೇಂದ್ರ ಮೋದಿ ಇಂದು ಚಾಲನೆ ನೀಡಿದರು. ಕೊರೊನಾ ಸಂಕಷ್ಟ ಸಮಯದಲ್ಲಿ ಕೃಷಿಕರಿಗೆ ಈ ಯೋಜನೆ ನೆರವಾಗಲಿದೆ ಎಂದು ತಿಳಿಸಿದರು.  

ವಿಡಿಯೋ ಕಾನ್ಫರೆನ್ಸ್ ಮೂಲಕ ಮೊದಲಿಗೆ ಕರ್ನಾಟಕ ಹಾಸನ ಉಗಣೆ ಪತ್ತಿನ ರೈತರ ಸಹಕಾರ ಸಂಘದ ಅಧ್ಯಕ್ಷ ಬಸವೇಗೌಡ ಹಾಗೂ ಸದಸ್ಯರ ಜೊತೆ ಸಂವಾದ ನಡೆಸಿದ ಪ್ರಧಾನಿ ಅವರ ಸಮಸ್ಯೆಗಳನ್ನು ಆಲಿಸಿ ಪರಿಹಾರ ಸೂಚಿಸಿದರು. ಕೃಷಿ, ಸೊಸೈಟಿಗಳ ಕಾರ್ಯ ಚಟುವಟಿಕೆಗಳ ಬಗ್ಗೆ ಕೂಡಾ ಚರ್ಚಿಸಿದರು. ಪ್ರಧಾನಿ ಮೋದಿ ಜೊತೆ ಸಂವಾದ ನಡೆಸಿದ ಬಸವೇ ಗೌಡ 40 ವರ್ಷದ ಹಿಂದೆ ಸೊಸೈಟಿ ಆರಂಭವಾಗಿದೆ. ಇದರಲ್ಲಿ ಹಾಸನ ಜಿಲ್ಲೆಯ 29 ಹಳ್ಳಿಗಳು ಸೇರಿವೆ. ವರ್ಷದಲ್ಲಿ 50 ಕೋಟಿ ವಹಿವಾಟು ನಡೆಸುತ್ತಿದ್ದೇವೆ ಎಂದು ಪ್ರಧಾನಿಗೆ ಮಾಹಿತಿ ನೀಡಿದರು.

 
 
 
 
 
 
 
 
 
 
 

Leave a Reply