Janardhan Kodavoor/ Team KaravaliXpress
30.6 C
Udupi
Tuesday, August 16, 2022
Sathyanatha Stores Brahmavara

ಪಂಚರಾಜ್ಯಗಳಿಗೆ ಫಿಕ್ಸ್ ಆಯ್ತು ಎಲೆಕ್ಷನ್ ಡೇಟ್!?

ನವದೆಹಲಿ : ಉತ್ತರ ಪ್ರದೇಶ, ಉತ್ತರಾಖಂಡ, ಗೋವಾ, ಮಣಿಪುರ ಮತ್ತು ಪಂಜಾಬ್ ರಾಜ್ಯಗಳಿಗೆ ವಿಧಾನಸಭಾ ಚುನಾವಣೆಗೆ ಕೊನೆಗೂ ದಿನಾಂಕ ನಿಗಧಿಯಾಗಿದೆ. ಚುನಾವಣಾ ಆಯೋಗವು ಫೆಬ್ರವರಿ 10 ರಿಂದ ಮಾರ್ಚ್ 07ರವರೆಗೆ 7 ಹಂತಗಳಲ್ಲಿ ಈ ಐದು ರಾಜ್ಯಗಳಿಗೆ ಚುನಾವಣೆ ನಡೆಸಲಾಗುವುದು ಮತ್ತು ಮಾರ್ಚ್ 10 ರಂದು ಫಲಿತಾಂಶ ಘೋಷಿಸಲಾಗುವುದು ಎಂದು ತಿಳಿಸಿದೆ.

1 ಹಂತ: ಜನವರಿ 14 ರಿಂದ ನಾಮಪತ್ರ ಪಕ್ರಿಯೆ ಆರಂಭ ಚುನಾವಣೆ ಫೆಬ್ರವರಿ 10 ರಂದು.

2 ಹಂತ: 21 ರಿಂದ ನಾಮಪತ್ರ ಪಕ್ರಿಯೆ ಆರಂಭವಾಗಲಿದ್ದು ಚುನಾವಣೆ ಫೆಬ್ರವರಿ 14 ರಂದು.

3 ಹಂತ: 25 ಜನವರಿಯಿಂದ ನಾಮಪತ್ರ ಪಕ್ರಿಯೆ ಚುನಾವಣೆ ಫೆಬ್ರವರಿ 20 ರಂದು.

4 ಹಂತ: 27 ಜನವರಿಂದ ನಾಮಪತ್ರ ಪಕ್ರಿಯೆ ಚುನಾವಣೆ ಫೆಬ್ರವರಿ 23 ರಂದು.

5ನೇ ಹಂತ: 1 ಫೆಬ್ರವರಿಯಿಂದ ನಾಮಪತ್ರ ಪಕ್ರಿಯೆ ಚುನಾವಣೆ ಫೆಬ್ರವರಿ 27 ರಂದು.

6ನೇ ಹಂತ: 4ನೇ ಫೆಬ್ರವರಿಯಿಂದ ನಾಮಪತ್ರ ಪಕ್ರಿಯೆ ಚುನಾವಣೆ ಮಾರ್ಚ್ 3 ರಂದು.

7ನೇ ಹಂತ:10 ಫೆಬ್ರವರಿಯಿಂದ ನಾಮಪತ್ರ ಪಕ್ರಿಯೆ ಮಾರ್ಚ್ 07 ರಂದು.

ಫಲಿತಾಂಶ: 10 ಮಾರ್ಚ್

ಇಂದಿನಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಗೆ ಬರಲಿದೆ. ಉಲ್ಲಂಘಿಸಿದವರ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಕೋವಿಡ್ ಕಾರಣಕ್ಕೆ ಮತದಾನದ ಸಮಯವನ್ನು ಒಂದು ಗಂಟೆ ಹೆಚ್ಚಳ ಮಾಡಲಾಗಿದೆ ಎಂದು ಆಯೋಗ ತಿಳಿಸಿದೆ.

ಅಭ್ಯರ್ಥಿಗಳು ಆನ್‌ಲೈನ್‌ ಮೂಲಕವೇ ನಾಮಪತ್ರ ಸಲ್ಲಿಸುವ ಅವಕಾಶ ನೀಡಲಾಗಿದ್ದು, ಕೋವಿಡ್ ಕಾರಣಕ್ಕೆ ನೇರವಾಗಿ ನಾಮಪತ್ರ ಸಲ್ಲಿಸುವ ಬದಲು ಆನ್‌ಲೈನ್‌ ಮೂಲಕ ಸಲ್ಲಿಸಬಹುದು ಎಂದರು. ಜೊತೆಗೆ ಚುನಾವಣಾ ರ್ಯಾಲಿಗಳನ್ನು, ಪ್ರಚಾರವನ್ನು ಆದಷ್ಟು ಆನ್‌ಲೈನ್ ಮೂಲಕ ಮಾಡಲು ಮನವಿ ಮಾಡಿದರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!