ವಿ ಆರ್ ಬ್ಯಾಕ್ ಎಂದ ಪೇಟಿಎಂ:ನಿಟ್ಟುಸಿರು ಬಿಟ್ಟ ಗ್ರಾಹಕರು

ನವದೆಹಲಿ: ಗೂಗಲ್​ ಪ್ಲೇ ಸ್ಟೋರ್​ನಲ್ಲಿ ಕಾಣದಾಗಿದ್ದ ಪೇಟಿಎಂ ಇದೀಗ ಕೆಲವೇ ತಾಸುಗಳಲ್ಲಿ ಮರಳಿದೆ. “ಅಪ್​​ಡೇಟ್​: ಆ್ಯಂಡ್​ ವೀ ಆರ್ ಬ್ಯಾಕ್​” ಎನ್ನುತ್ತ ಪ್ಲೇ ಸ್ಟೋರ್​ಗೆ ಪೇಟಿಎಂ ಆ್ಯಪ್ ಬಂದಿದ್ದು, ಹಲವರು ನಿಟ್ಟುಸಿರು ಬಿಡುವಂತಾಗಿದೆ.

 

ಗೂಗಲ್ ಪ್ಲೇಸ್ಟೋರ್​ನಿಂದ ತುಸು ಗಂಟೆಗಳ ಹಿಂದೆ ಪೇಟಿಎಂ ಆ್ಯಪ್​ಅನ್ನು ತೆಗೆಯಲಾಗಿತ್ತು. ಇದನ್ನು ಸ್ವತಃ ಪೇಟಿಎಂ ತಾನೇ ಹೀಗೆ ಹೇಳಿಕೊಂಡಿತ್ತು. “ಪೇಟಿಎಂ ಆ್ಯಂಡ್ರಾಯ್ಡ್​ ಆ್ಯಪ್​ ಗೂಗಲ್ ಪ್ಲೇ ಸ್ಟೋರ್​ನಲ್ಲಿ ತಾತ್ಕಾಲಿಕವಾಗಿ ಲಭ್ಯವಿರುವುದಿಲ್ಲ, ಹಾಗಾಗಿ ಡೌನ್​ಲೋಡ್​ ಅಥವಾ ಅಪ್​ಡೇಟ್​ ಮಾಡಲು ಸಾಧ್ಯವಿಲ್ಲ. ಆದರೆ, ನಿಮ್ಮ ಎಲ್ಲ ಹಣವೂ ಸುರಕ್ಷಿತವಾಗಿರಲಿದೆ, ನಾವು ಶೀಘ್ರದಲ್ಲೇ ವಾಪಸ್ ಬರಲಿದ್ದೇವೆ” ಎಂದು ಕಂಪನಿ ಟ್ವೀಟ್​ ಮೂಲಕ ತಿಳಿಸಿತ್ತು. ಇದಾದ ಸುಮಾರು ನಾಲ್ಕು ಗಂಟೆಗಳಲ್ಲಿ ಪೇಟಿಎಂ ಗೂಗಲ್​ ಪ್ಲೇ ಸ್ಟೋರ್​ಗೆ ಮರಳಿದೆ.

 

“ಪೇಟಿಎಂ ತನ್ನ ಆ್ಯಪ್ ಮೂಲಕ ಜೂಜಿಗೆ ಉತ್ತೇಜನ ನೀಡುತ್ತದೆ. ಆದ್ದರಿಂದ ಅದರ ಮೇಲೆ ನಿಷೇಧ ಹೇರಲಾಗಿದೆ. ಜನರನ್ನು ಜೂಜಿಗೆ ಉತ್ತೇಜಿಸುವ ಯಾವುದೇ ಆ್ಯಪ್ ಅಥವಾ ಗೇಮ್​ಗಳನ್ನು ಪ್ಲೇಸ್ಟೋರ್‌ನಲ್ಲಿ ನಾವು ಇರಿಸಿಕೊಳ್ಳುವುದಿಲ್ಲ. ಪೇಟಿಎಂ ಆ್ಯಪ್ ಡೆವಲಪರ್‌ಗಳಿಗೂ ಇದರ ಕುರಿತು ತಿಳಿಸಲಾಗಿದೆ” ಎಂದು ಗೂಗಲ್​ ಸ್ಪಷ್ಟನೆ ನೀಡಿತ್ತು. ಆದರೆ ಈ ನಾಲ್ಕೈದು ಗಂಟೆಗಳಲ್ಲಿ ಗೂಗಲ್ ಹಾಗೂ ಪೇಟಿಎಂ ಮಧ್ಯೆ ಯಾವ ಒಪ್ಪಂದ ನಡೆದಿರಬಹುದು, ಮತ್ತು ಯಾವ ಷರತ್ತಿನ ಮೇಲೆ ಪೇಟಿಎಂ ಆ್ಯಪ್​ಗೆ ಮತ್ತೆ ಪ್ಲೇಸ್ಟೋರ್​ನಲ್ಲಿ ಅವಕಾಶ ನೀಡಲಾಗಿದೆ ಎಂಬುದು ಸದ್ಯಕ್ಕೆ ಬಹಿರಂಗವಾಗಿಲ್ಲ.

 
 
 
 
 
 
 
 
 
 
 

Leave a Reply