ಕೇಂದ್ರ ಆಹಾರ ಮತ್ತು ನಾಗರಿಕ ಸಚಿವ ರಾಮ್ ವಿಲಾಸ್ ಪಾಸ್ವಾನ್ ನಿಧನ

ಹೊಸದಿಲ್ಲಿ: ತೀವ್ರ ಅನಾರೋಗ್ಯದ ಹಿನ್ನೆಲೆ ದೆಹಲಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೇಂದ್ರ ಆಹಾರ ಮತ್ತು ನಾಗರಿಕ ಸಚಿವ ರಾಮ್ ವಿಲಾಸ್ ಪಾಸ್ವಾನ್ ನಿಧನರಾಗಿದ್ದು, ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ಸೇರಿದಂತೆ ಅನೇಕ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದು, ಪಾಸ್ವಾನ್ ನಿಧಾನಕ್ಕೆ ನಾನು ಪದಗಳನ್ನು ಮೀರಿ ದುಃಖ ತಪ್ತ ನಾಗಿದ್ದೇನೆ. ಅವರ ನಿಧನದಿಂದ ನನಗೆ ವೈಯಕ್ತಿಕ ನಷ್ಟವಾಗಿದ್ದು,, ಒಬ್ಬ ಸ್ನೇಹಿತನನ್ನು ಕಳೆದುಕೊಂಡಿದ್ದೇನೆ. ರಾಮ್  ವಿಲಾಸ್ ಪಾಸ್ವಾನ್ ಅವರು ತಮ್ಮ ಪರಿಶ್ರಮ ಮತ್ತು ಧೃಡ ನಿಶ್ಚಯದ ಮೂಲಕ ರಾಜಕೀಯದಲ್ಲಿ ಬೆಳೆದವರು. ಯುವ ನಾಯಕರಾಗಿ ತುರ್ತು ಸಮಯದಲ್ಲಿ ದಬ್ಬಾಳಿಕೆ ಮತ್ತು ನಮ್ಮ ಪ್ರಜಾಪ್ರಭುತ್ವದ ಮೇಲಿನ ಅಕ್ರಮಣವನ್ನ ವಿರೋಧಿ ಸಿದ್ದರು. ಎಂದು ಪ್ರಧಾನಿ ಮೋದಿ ಟ್ವೀಟ್ ಮೂಲಕ ತಿಳಿಸಿದ್ದಾರೆ.

ರಾಷ್ಟ್ರಪತಿ ರಾಮನಾಥ್ ಈ ಬಗ್ಗೆ ಕೋವಿಂದ್ ಟ್ವೀಟ್​ ಮಾಡಿದ್ದು,ಕೇಂದ್ರ ಸಚಿವ ರಾಮ್​ ವಿಲಾಸ್​ ಪಾಸ್ವಾನ್​ ನಿಧನದಿಂದ ದೇಶ ಓರ್ವ ಉತ್ತಮ ನಾಯಕನನ್ನು ಕಳೆದುಕೊಂಡಿದೆ. ಸಂಸತ್ತಿನಲ್ಲಿ ಅತ್ಯಂತ ಸಕ್ರಿಯ ಮತ್ತು ದೀರ್ಘಕಾಲ ಸೇವೆ ಸಲ್ಲಿಸಿ ರುವ ಸದಸ್ಯರಲ್ಲಿ ಒಬ್ಬರಾಗಿದ್ದ ಇವರು ತುಳಿತಕ್ಕೊಳಗಾದವರ ಧ್ವನಿಯಾಗಿದ್ದರು ಎಂದಿದ್ದಾರೆ.

ಈ ಕುರಿತು ರಾಹುಲ್ ಗಾಂಧಿ ಸಂತಾಪ ಸೂಚಿಸಿದ್ದು, ರಾಮ್​ ವಿಲಾಸ್​ ಪಾಸ್ವಾನ್​ ಜೀ ಅವರ ಅಕಾಲಿನ ನಿಧನದ ಸುದ್ದಿ ಬಹಳ ಬೇಸರ ಉಂಟು ಮಾಡಿದೆ. ಬಡ – ದೀನ ದಲಿತರು ಇಂದು ತಮ್ಮ ಬಲವಾದ ದನಿ ಕಳೆದುಕೊಂಡಿದ್ದಾರೆ ಎಂದಿ ದ್ದಾರೆ.

ಕೇಂದ್ರ ಸಚಿವ ರಾಮ್​ವಿಲಾಸ್​ ಪಾಸ್ವಾನ್ ನಿಧನಕ್ಕೆ ಬಿಹಾರ ಸಿಎಂ ಸಂತಾಪ ಸೂಚಿಸಿದ್ದಾರೆ. ಭಾರತೀಯ ರಾಜ ಕಾರಣದ ಎತ್ತರದ ವ್ಯಕ್ತಿತ್ವ – ತೀಕ್ಷ್ಣವಾದ ವಾಗ್ಮಿ, ಜನಪ್ರಿಯ ನಾಯಕ, ಸಮರ್ಥ ಆಡಳಿತಗಾರ, ಸೌಹಾರ್ದಯುತ ವ್ಯಕ್ತಿತ್ವ ಹೊಂದಿದ್ದ ಪ್ರಬಲ ಸಂಘಟಕರು ಎಂದು ಹೇಳಿದ್ದು, ಅವರ ನಿಧನದಿಂದ ತಮಗೆ ವೈಯಕ್ತಿಕವಾಗಿಯು ನಷ್ಟವಾಗಿದೆ ಎಂದು ಹೇಳಿದ್ದಾರೆ.

 
 
 
 
 
 
 
 
 
 
 

Leave a Reply