ಮೇ.28ರಂದು ಲೋಕಾರ್ಪಣೆಯಾಗಲಿದೆ ಸಂಸತ್ತಿನ ನೂತನ ಕಟ್ಟಡ

 ಪ್ರಧಾನಿ ನರೇಂದ್ರ ಮೋದಿ ಇದೇ 28ರಂದು ರಾಷ್ಟ್ರ ರಾಜಧಾನಿಯಲ್ಲಿ ನೂತನವಾಗಿ ನಿರ್ಮಿಸಿರುವ ಸಂಸತ್ ಭವನವನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ನಿನ್ನೆ ಪ್ರಧಾನಿಯವರನ್ನು ಭೇಟಿ ಮಾಡಿ ನೂತನ ಸಂಸತ್ ಭವನವನ್ನು ಉದ್ಘಾಟಿಸುವಂತೆ ಆಹ್ವಾನಿಸಿದರು. ಹೊಸ ಸಂಸತ್ತಿನ ಕಟ್ಟಡದ ನಿರ್ಮಾಣವು ಈಗ ಪೂರ್ಣಗೊಂಡಿದೆ. ಹೊಸ ಕಟ್ಟಡವು ಸ್ವಾವಲಂಬಿ ಭಾರತದ ಚೈತನ್ಯವನ್ನು ಸಂಕೇತಿಸುತ್ತದೆ.

ಪ್ರಸ್ತುತ ಸಂಸತ್ತಿನ ಕಟ್ಟಡದ ನಿರ್ಮಾಣವು 1927 ರಲ್ಲಿ ಪೂರ್ಣಗೊಂಡಿತು, ಈಗ ಅದು ಸುಮಾರು 100 ವರ್ಷಗಳಷ್ಟು ಹಳೆಯದಾಗಿದೆ. ಆದರೆ ಈ ಕಟ್ಟಡದಲ್ಲಿ ಅಗತ್ಯಕ್ಕೆ ತಕ್ಕಂತೆ ಜಾಗದ ಕೊರತೆ ಎದುರಾಗಿದೆ. ಉಭಯ ಸದನಗಳಲ್ಲಿ ಸಂಸದರ ಆಸನಕ್ಕೆ ಅನುಕೂಲಕರ ವ್ಯವಸ್ಥೆ ಇಲ್ಲದಿರುವುದು ಸದಸ್ಯರ ಕಾರ್ಯದಕ್ಷತೆಯ ಮೇಲೆ ಪರಿಣಾಮ ಬೀರಿದೆ.

ಸಮಸ್ಯೆಗಳನ್ನು ಪರಿಗಣಿಸಿ, ಲೋಕಸಭೆ ಮತ್ತು ರಾಜ್ಯಸಭೆ ಎರಡೂ ಸಂಸತ್ತಿಗೆ ಹೊಸ ಕಟ್ಟಡವನ್ನು ನಿರ್ಮಿಸಲು ಸರ್ಕಾರವನ್ನು ಒತ್ತಾಯಿಸುವ ನಿರ್ಣಯಗಳನ್ನು ಅಂಗೀಕರಿಸಿದವು. ಪರಿಣಾಮವಾಗಿ, 10 ಡಿಸೆಂಬರ್ 2020 ರಂದು, ಸಂಸತ್ತಿನ ಹೊಸ ಕಟ್ಟಡದ ಅಡಿಪಾಯವನ್ನು ಪ್ರಧಾನಿ ನರೇಂದ್ರ ಮೋದಿಯವರು ಹಾಕಿದರು. ನೂತನವಾಗಿ ನಿರ್ಮಾಣವಾಗಿರುವ ಸಂಸತ್ ಭವನವನ್ನು ಗುಣಮಟ್ಟದ ನಿರ್ಮಾಣದೊಂದಿಗೆ ದಾಖಲೆ ಸಮಯದಲ್ಲಿ ನಿರ್ಮಿಸಲಾಗಿದೆ.

Leave a Reply