ಸುಧಾ ಮೂರ್ತಿ, ಎಸ್​.ಎಂ ಕೃಷ್ಣ, ಸೇರಿ 106 ಸಾಧಕರಿಗೆ ಪದ್ಮ ಗೌರವ

ಕೇಂದ್ರ ಸರ್ಕಾರವು 2023ನೇ ಸಾಲಿನ ಪ್ರದ್ಮಶ್ರೀ , ಪದ್ಮ, ಪದ್ಮ ವಿಭೂಷಣ ಪ್ರಶಸ್ತಿಗಳನ್ನು ಬುಧವಾರ ಪ್ರಕಟಿಸಿದೆ. 74ನೇ ಗಣರಾಜ್ಯೋತ್ಸವದ ಅಂಗವಾಗಿ ಈ ಪ್ರಶಸ್ತಿ ಘೋಷಣೆಯಾಗಿದ್ದು ಕರ್ನಾಟಕದ ಒಟ್ಟೂ ಎಂಟು ಮಂದಿ ಸಾಧಕರಿಗೆ ಪದ್ಮ ಗೌರವ ಸಂದಿರೋದು ವಿಶೇಷವಾಗಿದೆ. ಮಾಜಿ ಸಿಎಂ ಎಸ್​.ಎಂ ಕೃಷ್ಣರಿಗೆ ಪದ್ಮವಿಭೂಷಣ, ಸುಧಾಮೂರ್ತಿ ಹಾಗೂ ಎಸ್​.ಎಲ್​ ಭೈರಪ್ಪರಿಗೆ ಪದ್ಮ ಭೂಷಣ ಪ್ರಶಸ್ತಿಗಳು ಸಂದಿವೆ.

ರಾಜಕೀಯ ರಂಗದಲ್ಲಿ ತೋರಿದ ಸಾಧನೆಯನ್ನು ಗುರುತಿಸಿ ಮಾಜಿ ಸಿಎಂ ಹಾಗೂ ಮಾಜಿ ರಾಜ್ಯಪಾಲ ಎಸ್​.ಎಂ ಕೃಷ್ಣರಿಗೆ ಈ ಗೌರವನ್ನು ನೀಡಲಾಗಿದೆ. ಇನ್ನೂ ಸಾಮಾಜಿಕ ಕಾರ್ಯಗಳಿಗಾಗಿ ಸುಧಾ ಮೂರ್ತಿಗೆ ಪದ್ಮ ಭೂಷಣ ಗೌರವ ಸಂದಿದೆ. ಇನ್ನು ಕಲೆ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ತೋರಿದ ಸಾಧನೆಗಾಗಿ ಎಸ್​.ಎಲ್​ ಭೈರಪ್ಪ ಪದ್ಮ ಭೂಷಣ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಇನ್ನು ಕಲಾ ವಿಭಾದಲ್ಲಿ ತಮಟೆಯ ತಂದೆ ಎಂಬ ಖ್ಯಾತಿಯನ್ನು ಹೊಂದಿರುವ ನಾಡೋಜ ಪಿಂಡಿಪಾಪನಹಳ್ಳಿ ಮುನಿ ವೆಂಕಟಪ್ಪ ಹಾಗೂ ಐ ಶಾ ರಶೀದ್​ ಅಹಮನ್​ ಕ್ವಾದ್ರಿ, ವಿಜ್ಞಾನ ಮತ್ತು ಇಂಜಿನಿಯರಿಂಗ್​ ವಿಭಾಗದಲ್ಲಿ ಖಾದರ್​ ವಲ್ಲಿ ದೂದೇಕುಲ ಹಾಗೂ ಪುರಾತತ್ವ ಶಾಸ್ತ್ರ ವಿಭಾಗದಲ್ಲಿ ಸುಬ್ಬರಾಮನ್​​ಗೆ ಕೇಂದ್ರ ಸರ್ಕಾರವು ಪದ್ಮ ಗೌರವವನ್ನು ನೀಡಿದೆ.

ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್​ ಯಾದವ್ (ಮರಣೋತ್ತರ)​, ಬಾಲಕೃಷ್ಣ (ಮರಣೋತ್ತರ), ದಿಲೀಪ್​ ಮಹಲನಾಬೀಸ್(ಮರಣೋತ್ತರ)​, ಶ್ರೀನಿವಾಸ್​ ವರದನ್​ ಪದ್ಮವಿಭೂಷಣ ಪ್ರಶಸ್ತಿ ಗೌರವಕ್ಕೆ ಪಾತ್ರರಾಗಿದ್ದಾರೆ. ಪದ್ಮಭೂಷಣ ಪ್ರಶಸ್ತಿಯನ್ನು ಸುಧಾ ಮೂರ್ತಿ, ಎಸ್​.ಎಲ್​ ಭೈರಪ್ಪ ಜೊತೆಯಲ್ಲಿ ಕುಮಾರ ಮಂಗಲಂ ಬಿರ್ಲಾ, ಆಧ್ಯಾತ್ಮ ಕ್ಷೇತ್ರದಲ್ಲಿ ತೆಲಂಗಾಣದ ಸ್ವಾಮಿ ಚಿನ್ನ ಜೀಯರ್​, ಕಮಲೇಶ್​ಡಿ ಪಾಟೀಲ್​, ಸಾಹಿತ್ಯ ಹಾಗೂ ಶಿಕ್ಷಣ ಕ್ಷೇತ್ರದಿಂದ ದೆಹಲಿಯ ಕಪಿಲ್​ ಕಪೂರ್​​, ಸುಮನ್​ ಕಲ್ಯಾಣ ಪುರ, ಕಲಾ ಕ್ಷೇತ್ರದಲ್ಲಿ ತಮಿಳುನಾಡಿನ ವಾಣಿ ಜಯರಾಂಗೆ ನೀಡಲಾಗಿದೆ.

 
 
 
 
 
 
 
 
 
 
 

Leave a Reply