ಕೇಂದ್ರ ಸರ್ಕಾರದಿಂದ ದೀಪಾವಳಿ ಉಡುಗೊರೆ

ದೆಹಲಿ: ಕೊರೊನಾ ಆತಂಕದಲ್ಲಿರುವ ಭಾರತೀಯರಿಗೆ ದೇಶದ ಜನತೆಗೆ ಕೇಂದ್ರ ಸರ್ಕಾರ ದೀಪಾವಳಿ ಉಡುಗೊರೆ ಕೊಡಲು ಸಿದ್ಧವಾಗಿದೆ. ರೋನಾದಿಂದ ನಲುಗುತ್ತಿರುವ ಜನರನ್ನು ಮತ್ತು ಆರ್ಥಿಕತೆಯನ್ನು ಪುಷ್ಟಿಕರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ದೀಪಾವಳಿ ಹಬ್ಬದ ವೇಳೆಗೆ ಮತ್ತೊಂದು ಸುತ್ತಿನ ಉತ್ತೇಜಕ ಪ್ಯಾಕೇಜ್​ಗಳನ್ನ ಘೋಷಿಸುವ ಸಾಧ್ಯತೆಗಳಿವೆ.

ಅದರಲ್ಲಿ ನಗರ ಯೋಜನೆಗಳು, ಪ್ರವಾಸೋದ್ಯಮ, ಉತ್ಪಾದನೆ ಸಂಬಂಧಿತ ಉತ್ತೇಜನ ಯೋಜನೆ ವಿಸ್ತರಣೆ ಇತ್ಯಾದಿಯನ್ನು ಆದೇಶಿಸ ಬಹುದು. ಇಂಥ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಉತ್ತೇಜಕ ಪ್ಯಾಕೇಜ್ ರೂಪಿಸುತ್ತಿದೆ. ಈ ಸಂದರ್ಭದಲ್ಲಿ ಹೊರಡಿಸ ಲಿರುವ ನಾಲ್ಕನೇ ಉತ್ತೇಜಕ ಪ್ಯಾಕೇಜ್ ಇದಾಗಿರಲಿದೆ ಎಂದು ಮೂಲಗಳು ತಿಳಿಸಿವೆ.

ಈಗಾಗಲೇ ಕೇಂದ್ರ ಸರ್ಕಾರ ಕೆಲ ಉತ್ತೇಜಕ ಪ್ಯಾಕೇಜ್​ಗಳನ್ನ ಘೋಷಣೆ ಮಾಡಿದೆ. ಹೂಡಿಕೆಯ ಅಗತ್ಯ ಬೀಳುವಂಥ ಕ್ರಮಗಳನ್ನ ಕೈಗೊಳ್ಳಲಾಗಿದೆ. ನವಿ ಮುಂಬೈನಿಂದ ಹಿಡಿದು ಗ್ರೇಟರ್ ನೋಯ್ಡಾವರೆಗೆ ಪ್ರಸ್ತಾವಿತ ಏರ್​ಪೋರ್ಟ್ ನಿರ್ಮಾಣ ಯೋಜನೆಗಳೂ ಇದರಲ್ಲಿ ಒಳಗೊಂಡಿವೆ ಎಂದು ತಿಳಿದು ಬಂದಿದೆ.

 
 
 
 
 
 
 
 

Leave a Reply