Janardhan Kodavoor/ Team KaravaliXpress
23.6 C
Udupi
Thursday, December 8, 2022
Sathyanatha Stores Brahmavara

ಎಂ.ಎಸ್ ಧೋನಿ ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಿಗೆ ವಿದಾಯ

ಮುಂಬೈ: ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ.ಎಸ್ ಧೋನಿ ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಿಗೆ ವಿದಾಯ ಘೋಷಿಸಿ ದ್ದಾರೆ.​ ಈ ಕುರಿತು ಧೋನಿ ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ  ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ನಿಮ್ಮ ಪ್ರೀತಿ ಮತ್ತು ಬೆಂಬಲಕ್ಕಾಗಿ ಧನ್ಯವಾದಗಳು ಎಂದು ಇದೇ ವೇಳೆ ಅಭಿಮಾನಿಗಳಿಗೆ ತಿಳಿಸಿದ್ದಾರೆ.​ 

ಭಾರತೀಯ ಕ್ರಿಕೆಟ್ ತಂಡದ ನಾಯಕರಾಗಿ ಇವರು ಎರಡು ಬಾರಿ ವಿಶ್ವಕಪ್ ​ಗೆದ್ದಿದ್ದಾರೆ . ಅಂತರಾಷ್ಟ್ರೀಯ  ಕ್ರಿಕೆಟ್ ಪಂದ್ಯಗಳಿಗೆ ನಿವೃತ್ತಿ ಘೋಷಿಸಿದರೂ ಮುಂದಿನ ಐಪಿಎಲ್ ನಲ್ಲಿ ಆಡುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.​ 2004ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಎಂ.ಎಸ್ ಧೋನಿ ​ಪಾದಾರ್ಪಣೆ ಮಾಡಿದ್ದರು. ಧೋನಿ ನೇತೃತ್ವದಲ್ಲಿ ಭಾರತ 2008ರ ಟಿ20 ವಿಶ್ವಕಪ್ ಮತ್ತು 2011ರಲ್ಲಿ ಏಕದಿನ ವಿಶ್ವಕಪ್ ಕಪ್ ​ಗೆದ್ದು ಕೊಂಡಿತ್ತು . ಮಾತ್ರವಲ್ಲದೆ ಯಶಸ್ವಿ ನಾಯಕ ಮತ್ತು ವಿಕೇಟ್ ಕೀಪರ್ ಆಗಿ ತಂಡದಲ್ಲಿ ಗುರುತಿಸಿಕೊಂಡಿದ್ದರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!