ನನ್ನ ಗ್ರಾಮವನ್ನು ಕೊರನಾ ಮುಕ್ತ ಮಾಡುತ್ತೇನೆ ಎಂದು ಜನರೇ ಸಂಕಲ್ಪ ಮಾಡಬೇಕು : ಪ್ರಧಾನಿ ಮೋದಿ

ನವದೆಹಲಿ : ನಿಮ್ಮ ಜಿಲ್ಲೆಗಳು, ಗ್ರಾಮಗಳು ಕೊರೊನಾದಿಂದ ಗೆದ್ದಲ್ಲಿ ದೇಶವೇ ಗೆದ್ದಂತೆ.ನನ್ನ ಗ್ರಾಮವನ್ನು ಕೊರನಾ ಮುಕ್ತ ಮಾಡುತ್ತೆನೆ ಎಂದು ದೇಶದ ಜನರೇ ಸಂಕಲ್ಪ ಮಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಪ್ರಧಾನಿ ಮೋದಿ ಜಿಲ್ಲಾಧಿಕಾರಿಗಳ ಜೊತೆಗಿನ ಸಭೆಯಲ್ಲಿ ಮಾತನಾಡಿ,ಕೃಷಿ ಭೂಮಿಯಲ್ಲಿ ಭೌತಿಕ ಅಂತರ ಕಾಪಾಡಿಕೊಂಡು ಕೆಲಸ ಮಾಡಬೇಕು ಎಂದರು.ಕೊರನಾ ನಿಯಂತ್ರಣದಲ್ಲಿ ಜನಪ್ರತಿನಿದಗಳ ಪಾತ್ರ ಮುಖ್ಯ. ಕೊರೊನಾ ದಿಂದ ಕುಟಂಬಸ್ಥರನ್ನು ಭೇಟಿ ಮಾಡದಂತೆ ಆಗಿದೆ. ಪಕ್ಷ ಬೇಧ ಮರೆತು ಕೊರೊನಾ ವಿರುದ್ಧ ಎಲ್ಲರೂ ಒಂದಾಗಬೇಕು.ಡಿ.ಸಿಗಳೇ ಕೊರೊನಾ ವೈರಸ್ ವಿರುದ್ದ ಫೀಲ್ಡ್ ಕಮಾಂಡರ್ ಗಳು ಎಂದು ಜಿಲ್ಲಾಧಿಕಾರಿಗಳ ಕಾರ್ಯವನ್ನು ಶ್ಲಾಘಿಸಿದ್ದಾರೆ.

ಕಾಳಸಂತೆಯಲ್ಲಿ ಔಷಧ ಮಾರಾಟದ ವಿರುದ್ಧ ಕ್ರಮ ಕೈಗೊಳ್ಳಿ, ಕೆಲವು ಜಿಲ್ಲೆಗಳಲ್ಲಿ ಕೊರೊನಾ ಕಡಿಮೆಯಾಗುತ್ತಿದೆ. ಕೊರೊನಾ ತುತ್ತತುದಿ ತಲುಪಿ ಈಗ ಕಡಿಮೆಯಾಗುತ್ತಿದ್ದು,ದೇಶದಲ್ಲಿ ಕೆಲವೆಡೆ ಕೊರನಾ ಕಡಿಮೆಯಾಗುತ್ತಿದೆ.ಆದರೂ ಎಚ್ಚರಿಕೆ ಅಗತ್ಯ ಎಂದು ಹೇಳಿದ್ದಾರೆ.ದೇಶದ ಪ್ರತಿ ಜಿಲ್ಲೆಯಲ್ಲೂ ಆಕ್ಸಿಜನ್ ಪ್ಲಾಂಟ್ ಸ್ಥಾಪನೆ ಮಾಡಲಾಗುವುದು ಎಂದು ಹೇಳಿದ್ದಾರೆ. ಲಸಿಕೆ ನೀಡಿಕೆ ಕುರಿತಂತೆ 15 ದಿನ ಮುಂಚಿತವಾಗಿ ತಿಳಿಸುವಂತೆ ರಾಜ್ಯಗಳಿಗೆ ಮೋದಿ ಸೂಚಿಸಿದ್ದಾರೆ.

 
 
 
 
 
 
 

Leave a Reply