ಅಂತ್ಯಗೊಂಡಿದ್ದು ಲಾಕ್ ಡೌನ್ ಮಾತ್ರ ಕೋರೊನಾ ಕೊನೆಗೊಂಡಿಲ್ಲ-ಮೋದಿ

ನವದೆಹಲಿ: ದೇಶವಿಡೀ ಕೌತುಕದಿಂದ ಕಾದಿದ್ದ ಪ್ರಧಾನಿ ಮೋದಿ ಭಾಷಣ ಇಂದು ಸಂಜೆ ನಡೆದಿದ್ದು ಎಲ್ಲರಲೂ ಕೊರೋನಾದ ಕುರಿತು ಮತ್ತಷ್ಟು ಎಚ್ಚರಿಕೆ ಮೂಡಿಸಿದೆ. ಕಳೆದ ಆರು ತಿಂಗಳಿಂದ ಕಾಡುತ್ತಿದ್ದ ಮಾಹಮಾರಿಗೆ ಒಳಗಾಗುತ್ತಿದ್ದವರ ಸಂಖ್ಯೆಯಲ್ಲಿ ಇದೀಗ ಇಳಿಮುಖವಾಗುತ್ತಿರುವ ಸಂತಸದ ವಿಷಯವನ್ನ ಅವರು ಹಂಚಿಕೊಂಡರು.

ಅದರೊಂದಿಗೆ ಕೋವಿಡ್ ಮುಗಿದಿಲ್ಲ, ಮುಗಿದಿರುವುದು ಲಾಕ್ ಡೌನ್ ಮಾತ್ರ ಎಂಬ ಎಚ್ಚರಿಕೆಯನ್ನೂ ನೀಡಿದರು.ಹೌದು ಕೋವಿಡ್ ವ್ಯಾಪಕವಾಗಿರುವ ಈ ಸಂದರ್ಭದಲ್ಲಿ ನವರಾತ್ರಿ ಮತ್ತು ದೀಪಾವಳಿ ಹಬ್ಬಗಳ ಹಿನ್ನೆಲೆಯಲ್ಲಿಯೂ ಮಾತನಾಡಿದ ಅವರು, ದೇಶವಾಸಿಗಳಿಗೆ ಕೆಲವೊಂದು ಎಚ್ಚರಿಕೆಯ ಕ್ರಮ ಕೈಗೊಳ್ಳುವಂತೆ ವಿನಂತಿ ಮಾಡಿಕೊಂಡರು.

ವಿಶ್ವವ್ಯಾಪಿ ಯಾಗಿರುವ ಕೋರೊನಾ ಭಾರತದಲ್ಲಿ ಮಾತ್ರ ಪ್ರತಿಯೊಬ್ಬ ಭಾರತೀಯನ ಪ್ರಯತ್ನದ ಫಲವಾಗಿ ಕಳೆದ 7ರಿಂದ 8 ತಿಂಗಳ ಅವಧಿಯಲ್ಲಿ ಸ್ಥಿರತೆ ಕಂಡಿದೆ. ಅದನ್ನು ಹಾಳುಗೆಡಹುವ ಕೆಲಸ ನಮ್ಮಿಂದ ಆಗದಂತೆ ಎಚ್ಚರಿಕೆ ವಹಿಸಬೇಕು. ಹಬ್ಬದ ಸಂದರ್ಭದಲ್ಲಿ, ಮಾರುಕಟ್ಟೆಗಳು ಮತ್ತೆ ಚೇತರಿಸಿಕೊಂಡಿವೆ. ಆದರೆ ಲಾಕ್‌ಡೌನ್ ಈಗಷ್ಟೇ ಮುಕ್ತಾಯವಾಗಿದೆ ಎಂಬುದನ್ನು ನಾವು ಮರೆಯಬಾರದು, ಜನತಾ ಕರ್ಫ್ಯೂ ಆರಂಭವಾದಂದಿನಿಂದ ಇಂದಿನ ತನಕ ನಾವು ದೀರ್ಘ ಅವಧಿಯನ್ನು ಕಳೆದಿದ್ದೇವೆ.

ಈ ಅವಧಿಯಲ್ಲಿ ಸಾಕಷ್ಟು ಸಂಕಷ್ಟಗಳನ್ನು ಕೂಡಾ ಎದುರಿಸಿದ್ದು ಅದಾದ ಬಳಿಕ ಈಗಷ್ಟೇ ಆರ್ಥಿಕ ಸುಧಾರಣೆಯು ಆಗುತ್ತಿದೆ. ಆದರೂ ಎಲ್ಲಿಯವರೆಗೆ ಕರೊನಾಕ್ಕೆ ಲಸಿಕೆ ಅಭಿವೃದ್ಧಿಗೊಳ್ಳುವುದೊ ಅಲ್ಲಿಯ ತನಕ ನಾವು ಅದರ ವಿರುದ್ಧದ ಹೋರಾಟವನ್ನು ಮುಂದುವರಿಸುವ‌ ಅನಿವಾರ್ಯತೆ ಇದೆ. ಭಾರತೀಯರಾದ ನೀವೆಲ್ಲರೂ ಇದಕ್ಕೆ ಸಾಥ್ ನೀಡಬೇಕಿದೆ ಎಂದು ಮೋದಿ ತಮ್ಮ ಭಾಷಣದಲ್ಲಿ ಕೇಳಿಕೊಂಡರು.

ಇನ್ನು ದೇಶದ 2 ಸಾವಿರ ಲ್ಯಾಬ್ ಗಳಲ್ಲಿ ಕೊರೊನಾ ಟೆಸ್ಟ್ ಮಾಡಲಾಗುತ್ತಿದ್ದು, 90 ಲಕ್ಷದಷ್ಟು ಬೆಡ್ ಗಳ ವ್ಯವಸ್ಥೆ ಇದೆ. ಭಾರತದ ಜನತೆಯ ಜೀವ ಉಳಿಸುವಲ್ಲಿ ಸರ್ಕಾರ ಸಫಲವಾಗಿದೆ. ಈ ಸಮಯದಲ್ಲಿ ಜನರು ಬೇಜವಾಬ್ದಾರಿಯುತವಾಗಿ ನಡೆದುಕೊಳ್ಳಬಾರದು. ನಿರ್ಲಕ್ಷ್ಯ ತೋರಿ ಅಪಾಯಕ್ಕೆ ಒಳಗಾಗಬಾರದು ಎಂದು ಹೇಳಿದರು.

ಸದ್ಯ ದೇಶದೆಲ್ಲೆಡೆ ದಸರಾ, ನವರಾತ್ರಿ, ಈದ್, ಗುರುನಾನಕ, ದೀಪಾವಳಿ ಆಚರಿಸುತ್ತಿರುವ ಜನತೆಗೆ ಪ್ರಧಾನಿ ಶುಭಾಶಯ ತಿಳಿಸಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಕೊರೊನಾ ನಿಯಮಗಳನ್ನು ಪಾಲಿಸುವಂತೆ ಸೂಚಿಸಿದರು.
[8:44 PM, 10/20/2020] Bhavana Sose New:

 
 
 
 
 
 
 
 
 
 
 

Leave a Reply