ಮರುಕಳಿಸಿದ ಕಾಶಿ ವಿಶ್ವನಾಥನ ವೈಭವ

​ನವದೆಹಲಿ: ಹಿಂದುಗಳ ಪವಿತ್ರ ಧಾರ್ವಿುಕ ಕ್ಷೇತ್ರಗಳಲ್ಲೊಂದಾದ ಕಾಶಿ ಭಾರತ-ಭಾರತೀಯರ ಶಕ್ತಿ, ಸನಾತನ ಸಂಸ್ಕೃತಿಯ ಆತ್ಮ ಹಾಗೂ ಅಸ್ಮಿತೆಯೂ ಹೌದು. ಕಾಶಿಯಾತ್ರೆ ಮಾಡಿದರೆ ಪುಣ್ಯ ಸಿಗುವುದೆಂಬ ಪ್ರತೀತಿ ಹಿನ್ನೆಲೆಯಲ್ಲಿ ವಿಶ್ವನಾಥನ ದರ್ಶನಕ್ಕೆ ನಿತ್ಯ ಸಾವಿರಾರು ಭಕ್ತರು ಬರುತ್ತಾರೆ.

ಗಂಗಾನದಿಯಲ್ಲಿ ಪುಣ್ಯಸ್ನಾನ ಮಾಡುತ್ತಾರೆ. ದಶಕಗಳಿಂದ ದಟ್ಟಣೆ, ಮೂಲಸೌಕರ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದ ಈ ಪುಣ್ಯಕ್ಷೇತ್ರವೀಗ ಗತವೈಭವಕ್ಕೆ ಮರಳಿದೆ. ಗಂಗಾನದಿ ತಟದಿಂದಲೇ ದೇಗುಲಕ್ಕೆ ನೇರ ಸಂಪರ್ಕ ಕಲ್ಪಿಸುವ ಕಾಶಿ ಕಾರಿಡಾರ್ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಉದ್ಘಾಟಿಸಿದರು. ಆ ಮೂಲಕ ಅಭಿವೃದ್ಧಿಯ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆದರು.

ಕಾಶಿಯ ವಿಶ್ವನಾಥ ದೇಗುಲದ ಆವರಣದಲ್ಲಿ ನಿರ್ವಿುಸಲಾಗಿರುವ ಅತ್ಯಾಧುನಿಕ ಕಾರಿಡಾರ್ ಅನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು. ಇದಕ್ಕೂ ಮುನ್ನ ವಿಶ್ವನಾಥ ದೇಗುಲದಲ್ಲಿ ಪೂಜೆ ಸಲ್ಲಿಸಿದರು. ಮೋದಿ ಭಾಷಣದಲ್ಲಿ ಕನ್ನಡ ಹಾಗೂ ದ್ವೈತ ಮತದ ಸ್ಥಾಪಕ ಮಧ್ವಾಚಾರ್ಯರನ್ನು ಸ್ಮರಿಸಿದರು. ‘ಕಾಶಿಯ ವಿಶ್ವನಾಥ ಪಾಪದ ನಿವಾರಣೆ ಮಾಡುತ್ತಾನೆ ಎಂದು ಮಧ್ವಾಚಾರ್ಯರು ಶಿಷ್ಯರಿಗೆ ತಿಳಿಸಿದ್ದರು’ ಎಂದರು.

ಕಾಶಿಯ ವಿಶ್ವನಾಥ ದೇಗುಲವನ್ನು 1669ರ ಸೆ.2ರಂದು ಔರಂಗಜೇಬನ ಆದೇಶದ ಮೇರೆಗೆ ಕೆಡವಲಾಯಿತು. ಹಿಂದು ರಾಣಿ ಅಹಲ್ಯಾಬಾಯಿ ಹೋಳ್ಕರ್ 1776-78ರಲ್ಲಿ ಮರು ನಿರ್ಮಾಣ ಮಾಡಿದರು. ಆಗಿನ ದಿನದಲ್ಲೇ ಕಾಶಿ ಹಲವು ಅಭಿವೃದ್ಧಿ ಕಾಮಗಾರಿ ಗಳನ್ನು ಕಂಡಿತ್ತು. ಇದೀಗ ಹೊಸ ರೂಪ ಪಡೆದಿದೆ.

ಮೋದಿ ಮಿಂಚಿನ ಓಟ: ಬೆಳಗ್ಗೆ ವಾರಾಣಸಿಗೆ ಆಗಮನ, ಪ್ರಧಾನಿ ಕಾರಿನ ಮೇಲೆ ಹೂವಿನ ದಳಗಳ ಮಳೆ ಸುರಿಸಿದ ಸ್ಥಳೀಯರು ಗಂಗಾನದಿಗೆ ತೆರಳಿ ಪವಿತ್ರ ಸ್ನಾನ. ವಿಶ್ವನಾಥ ಮಂದಿರಕ್ಕೆ ಭೇಟಿ, ಪೂಜಾ ಕಾರ್ಯಕ್ರಮಗಳಲ್ಲಿ ಭಾಗಿ. ಪೌರ ಕಾರ್ವಿುಕರಿಗೆ ಪುಷ್ಪವೃಷ್ಟಿ ಮಾಡಿ ಗೌರವ, ಜತೆಗೆ ಫೋಟೋ ತೆಗೆಸಿಕೊಂಡು ಸಂಭ್ರಮ, ಕಾರಿಡಾರ್ ಕಾರ್ವಿುಕರ ಜತೆ ಸಹಭೋಜನ. 

ಆಕ್ರಮಣಕಾರರು ಈ ನಗರದ ಮೇಲೆ ದಾಳಿ ಮಾಡಿದ್ದಾರೆ. ನಾಶಕ್ಕೆ ಪ್ರಯತ್ನಿಸಿದ್ದಾರೆ. ಇತಿಹಾಸವು ಔರಂಗಜೇಬನ ಕ್ರೌರ್ಯ, ಅವನ ಭಯೋತ್ಪಾದನೆಗೆ ಸಾಕ್ಷಿಯಾಗಿದೆ. ಆತ ಕತ್ತಿಯಿಂದ ನಾಗರಿಕತೆ ಬದಲಿಸಲು ಪ್ರಯತ್ನಿಸಿದ, ಮತಾಂಧತೆಯಿಂದ ಸಂಸ್ಕೃತಿ ತುಳಿಯಲು ಪ್ರಯತ್ನಿಸಿದ. ಆದರೆ ಜಗತ್ತಿನ ಉಳಿದ ಭಾಗ ಗಳಿಗಿಂತ ಭಿನ್ನವಾದ ಈ ಮಣ್ಣು ಒಬ್ಬ ಮೊಗಲ್ ಚಕ್ರವರ್ತಿಗೆ ಬದಲಾಗಿ ಒಬ್ಬ ಶಿವಾಜಿಯನ್ನು ಹುಟ್ಟುಹಾಕಿತು.
ವಿಶೇಷತೆಗಳು : ನವಕಾರಿಡಾರ್ ಬಳಿಕ ಇಕ್ಕಟ್ಟಾದ ರಸ್ತೆಗಳು ವಿಸ್ತಾರ, ಜನಸಂದಣಿ, ವಾಹನ ದಟ್ಟಣೆಗೆ ಪರಿಹಾರ. ದೇಗುಲ ಬಳಿ 50 ಅಡಿ ಕಾರಿಡಾರ್ ನಿರ್ಮಾಣ. ಗಂಗಾನದಿಯ ಎರಡು ಘಾಟ್​ಗಳಿಗೆ ಸಂಪರ್ಕ. ಯಾತ್ರಿ ಸುವಿಧಾ ಕೇಂದ್ರ, ಪ್ರವಾಸಿ ಸೌಲಭ್ಯ, ವೇದ ಕೇಂದ್ರ, ಮುಮುಕ್ಷು ಭವನ, ವಸ್ತು ಸಂಗ್ರಹಾಲಯ, ವೀಕ್ಷಣಾ ಗ್ಯಾಲರಿ, ಆಹಾರ ಸ್ಥಳ ಸೇರಿ ಹಲವು ಸೌಲಭ್ಯ ಒಳಗೊಂಡ 25 ಕಟ್ಟಡ ಯೋಜನೆ ಒಳಗೊಂಡಿದೆ.
800ಕೋಟಿ ರೂ. ಯೋಜನಾ ವೆಚ್ಚ, 399 ಕೋಟಿ ರೂ. ಮೊದಲ ಹಂತದ ಯೋಜನೆ ವೆಚ್ಚ.  300ಕ್ಕೂ ಹೆಚ್ಚು ಆಸ್ತಿ ಖರೀದಿ ಅಥವಾ ಸ್ವಾಧೀನ. 1400 ಅಂಗಡಿ, ಮನೆ ಮಾಲೀಕರು, ಬಾಡಿಗೆದಾರರಿಗೆ ಸೌಹಾರ್ದ  ಯುತ ಪುನರ್ವಸತಿ.
 
 
 
 
 
 
 
 
 
 
 

Leave a Reply