ಪೂರ್ವ ಲಡಾಖ್​ ನ ಆರು ಬೆಟ್ಟ ಪ್ರದೇಶಗಳನ್ನು ತನ್ನಾದಾಗಿಸಿಕೊಂಡ ಭಾರತೀಯ ಸೇನೆ!

ಹೊಸದಿಲ್ಲಿ: ಪೂರ್ವ ಲಡಾಖ್ನ ಎಲ್‌ಎಸಿ ಬಳಿಯ ಆರು ಬೆಟ್ಟ ಪ್ರದೇಶಗಳನ್ನು ಭಾರತೀಯ ಸೇನಾಪಡೆ ಆಕ್ರಮಿಸಿದೆ ಎಂದು ಸರ್ಕಾರದ ಉನ್ನತ ಮೂಲಗಳು ಮಾಹಿತಿಯಿಂದ ತಿಳಿದು ಬಂದಿದೆ.

ಚೀನಾ ಸೇನೆಯು ಎತ್ತರದ ಪ್ರದೇಶಗಳನ್ನು ಆಯ್ದು ಅಲ್ಲಿಂದಲ್ಲೆ ಭಾರತೀಯ ಸೇನೆಯ ಮೇಲೆ ದೃಷ್ಟಿ ನೆಟ್ಟಿತ್ತು. ಇದೀಗ ಅಂತಹ ಪ್ರದೇಶಗಳಲ್ಲಿ ಒಂದನ್ನು ಭಾರತೀಯ ಸೇನೆ ತನ್ನ ಕಬ್ಜ ಮಾಡಿಕೊಂಡಿದೆ.

ಆಗಸ್ಟ್ 29 ಮತ್ತು ಸೆಪ್ಟೆಂಬರ್ ಎರಡನೇ ವಾರದ ನಡುವಿನಲ್ಲಿ ಭಾರತೀಯ ಸೇನೆಯು ಮಾಗರ್ ಬೆಟ್ಟ, ಗುರುಂಗ್ ಹಿಲ್, ರೆಚೆನ್ ಲಾ, ರೆಜಾಂಗ್ ಲಾ, ಮೊಖ್ಪಾರಿ ಮತ್ತು ಫಿಂಗರ್ 4 ಬಳಿಯ ಪ್ರದೇಶಗಳನ್ನು ತನ್ನ ವಶಕ್ಕೆ ಪಡೆದಿದೆ ಎಂದು ಸೇನಾ ಮೂಲಗಳು ಮಾಹಿತಿ ನೀಡಿವೆ.

ಭಾರತೀಯ ಸೇನೆಗೆ ಚೀನಾ ಸೇನೆಯ ಮೇಲೆ ಸೂಕ್ಷ್ಮ ನಿಗಾವಹಿಸಲು ಇದು ಸಹಕಾರಿಯಾಗಿದೆ. ಸದ್ಯಕ್ಕೆ ಭಾರತ ತನ್ನಾದಾಗಿಸಿಕೊಂಡ ಪ್ರದೇಶಗಳು ಎಲ್ಎಸಿಯಿಂದ ಒಳಗಿದ್ದು ಭಾರತದ ಗಡಿಯೊಳಗಿವೆ. ಈಗಾಗಲೇ ವಶ ಪಡೆದಿರುವ ಬ್ಲ್ಯಾಕ್ ಟಾಪ್ ಹಾಗೂ ಹೆಲ್ಮೆಟ್ ಟಾಪ್ಗಳು ಎಲ್ಎಸಿ ಗಡಿಯಾಚೆಗಿನ ಚೀನಾದ ಭಾಗದಲ್ಲಿವೆ ಎಂದು ಮೂಲಗಳು ತಿಳಿಸಿವೆ.  

ಕಳೆದ ಕೆಲವು ವಾರಗಳಿಂದ ಈ ಸ್ಥಳದಲ್ಲಿ ಚೀನಾ ತನ್ನ ಸೇನೆಯನ್ನು ನಿಯೋಜಿಸುತ್ತು. ಹೀಗಿದ್ದರೂ ಭಾರತೀಯ ಸೇನೆಯ ಕಾರ್ಯ ಪೂರ್ಣವಾಗುತ್ತಿದಂತೆ ಚೀನಾ ತನ್ನ ಸುಮಾರು 3 ಸಾವಿರಕ್ಕೂ ಹೆಚ್ಚು ಸೈನಿಕರನ್ನು ರೆಜಾಂಗ್ ಲಾ ಹಾಗೂ ರೆಚೆನ್ ಲಾ ಬಳಿ ನಿಯೋಜಿಸಿದೆ. ಈ ಕಾರ್ಯಾ ಚರಣೆಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ರಕ್ಷಣಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಮತ್ತು ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಾಣೆ ಅವರು ನಿಗಾ ವಹಿಸಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

 
 
 
 
 
 
 
 
 
 
 

Leave a Reply