ವಿರೋಧಗಳ ನಡುವೆಯು ಕೃಷಿ ಮಸೂದೆ ಅಂಗೀಕಾರ

ನವದೆಹಲಿ: ಇಂದು ಲೋಕಸಭೆಯಲ್ಲಿ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಎರಡು ಮಸೂದೆಗಳು ಅಂಗೀಕಾರಗೊಂಡವು.ವಿರೋಧ ಪಕ್ಷಗಳ ತೀವ್ರ ಆಕ್ಷೇಪದ ನಡುವೆಯೂ ಈ ಎರಡು ಮಸೂದೆಗಳನ್ನು ಧ್ವನಿಮತದ ಮೂಲಕ ಅಂಗೀಕಾರ ಮಾಡಲಾಯಿತು. ಅವುಗಳು, ರೈತರ ಉತ್ಪನ್ನಗಳ ವ್ಯಾಪಾರ ಮತ್ತು ವಾಣಿಜ್ಯ (ಉತ್ತೇಜನ ಮತ್ತು ಸೌಲಭ್ಯ) ಮಸೂದೆ ಹಾಗೂ ಬೆಲೆ ಖಾತರಿ ಮತ್ತು ಕೃಷಿ ಸೇವೆಗಳಿಗೆ ರೈತರ ಒಪ್ಪಿಗೆ (ಸಬಲೀಕರಣ ಮತ್ತು ರಕ್ಷಣೆ) ಮಸೂದೆ. ಆದರೆ ಈ ಮಸೂದೆಗಳನ್ನು ಕಾಂಗ್ರೆಸ್‌, ಡಿಎಂಕೆ ಹಾಗೂ ರೆವಲೂಷನರಿ ಸೋಷಿಯಲಿಸ್ಟ್‌ ಪಾರ್ಟಿ ಸದಸ್ಯರು ವಿರೋಧಸಿ ಸಭಾತ್ಯಾಗ ಮಾಡಿದರು.

ಈ ನಡುವೆಯೇ, ಮಸೂದೆಗೆ ಸಂಬಂಧಿಸಿದಂತೆ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿದ್ದು ಪ್ರಧಾನಿ ನರೇಂದ್ರ ಮೋದಿ ಬೇಸರ ವ್ಯಕ್ತಪಡಿಸಿದ್ದಾರೆ.ಪ್ರತಿಪಕ್ಷಗಳು ರೈತರನ್ನು ದಾರಿ ತಪ್ಪಿಸಲು ಈ ಪ್ರಯತ್ನ ನಡೆಸುತ್ತಿದ್ದಾರೆ ಇಂತಹ ಮಾತುಗಳಿಗೆ ಕಿವಿಗೊಡಬೇಡಿ ಎಂದು ಹೇಳಿದರು. ಬಿಹಾರದಲ್ಲಿ ವಿವಿಧ ರೈಲ್ವೆ ಯೋಜನೆಗಳ ಉದ್ಘಾಟನೆಯಲ್ಲಿ ವಿಡಿಯೋ ಕಾನ್ಫರೆನ್ಸ್‌ ಮೂಲಕ ಪಾಲ್ಗೊಂಡ ಪ್ರಧಾನಿ ಮೋದಿ, ಈ ಮಸೂದೆ ಕುರಿತಂತೆ ಮಾತನಾಡಿದರು. ಈ ಮಸೂದೆ ರೈತರಿಗೆ ಬಹಳ ರೀತಿಯಲ್ಲಿ ಅನುಕೂಲಕರ ಆಗಲಿದೆ. ಮಧ್ಯವರ್ತಿಗಳು ಹಾಗೂ ಇನ್ನಿತರ ಸಮಸ್ಯೆಗಳಿಂದ ರೈತರು ಹಾಗೂ ಕೃಷಿ ಕ್ಷೇತ್ರಕ್ಕೆ ಮುಕ್ತಿ ಸಿಗಲಿದೆ.

ಈಗ ಚಾಲ್ತಿಯಲ್ಲಿರುವ ಕನಿಷ್ಠ ಬೆಂಬಲ ಬೆಲೆ, ಸರ್ಕಾರವೇ ಕೃಷಿ ಉತ್ಪನ್ನಗಳ ಖರೀದಿಯಂತಹ ವ್ಯವಸ್ಥೆ ಮುಂದುವರಿಯಲಿದ್ದು, ಈ ಮಸೂದೆಗಳಿಂದಾಗಿ ರೈತರಿಗೆ ಇನ್ನೂ ಹಲವಾರು ಸೌಲಭ್ಯಗಳು, ಅನುಕೂಲಗಳು ದೊರೆಯಲಿವೆ ಎಂದು ಹೇಳಿದ್ದಾರೆ.ಇದು ಕೃಷಿಯಲ್ಲಿ ರೈತರಿಗೆ ಹೊಸ ಸ್ವಾತಂತ್ರ್ಯ ನೀಡುತ್ತದೆ. ಅವರಿಗೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಹೆಚ್ಚಿನ ಆಯ್ಕೆಗಳು ಮತ್ತು ಅವಕಾಶಗಳು ಸಿಗಲಿವೆ ಎಂದು ಮೋದಿ ಹೇಳಿದರು.

ಇದೇ ವೇಳೆಯಲ್ಲಿ ಮಸೂದೆಯನ್ನು ವಿರೋಧಿಸುತ್ತಿರುವ ವಿಪಕ್ಷಗಳ ವಿರುದ್ಧವೂ ಮಾತನಾಡಿದ ಪ್ರಧಾನಿ ಮೋದಿ, ದಶಕಗಳಿಂದ ಈ ದೇಶವನ್ನು ಆಳಿದವರು ಇಂದು ಈ ವಿಷಯದ ಬಗ್ಗೆ ರೈತರನ್ನು ದಾರಿ ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ ಎಂದರು. ರೈಲು ತಡೆಗೆ ನಿರ್ಧಾರ: ಆದರೆ ಇನ್ನೊಂದೆಡೆ, ಈ ಮಸೂದೆ ವಿರೋಧಿಸಿ ಸೆಪ್ಟೆಂಬರ್ 24ರಿಂದ 26ರವರೆಗೆ ರೈಲು ತಡೆದು ಪ್ರತಿಭಟನೆ ನಡೆಸುವುದಾಗಿ ರೈತ ಸಂಘಟನೆ ತಿಳಿಸಿದ್ದು, ಇದು ರೈತರಿಗೆ ಸಹಾಯವಾಗಲಿದೆ ಎಂಬುದು ಸುಳ್ಳು.

ಇದರ ಜಾರಿಯ ನಂತರದಲ್ಲಿ ನಾವು ಕಾರ್ಪೋರೇಟ್​ಗಳ ಕೈಗೊಂಬೆ ಆಗುತ್ತೇವೆ ಎಂದು ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿಯ ಪ್ರಧಾನ ಕಾರ್ಯದರ್ಶಿ ಸರ್ವಾನ್ ಸಿಂಗ್ ಪಂಥೇರ್ ತಿಳಿಸಿದ್ದಾರೆ.  ಇದೇ ವೇಳೆಯಲ್ಲಿ ರೈತ ವಿರೋಧಿ ಮಸೂದೆಗಳನ್ನು ವಿರೋಧಿಸುವ ಸಲುವಾಗಿ ಸೆಪ್ಟೆಂಬರ್ 25ರಂದು ವಿವಿಧ ರೈತಪರ ಸಂಘಟನೆಗಳು ಪಂಜಾಬ್ ಬಂದ್ ಗೆ ಕರೆ ನೀಡಿದೆ.

ಇದೇ ಸಂದರ್ಭ ಈ ಮಸೂದೆಗಳ ಅಂಗೀಕಾರಕ್ಕೆ ಬಿಜೆಪಿ ಮುಂದಾಗಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದ ಮಿತ್ರಪಕ್ಷ ಶಿರೋಮಣಿ ಅಕಾಲಿದಳದ ಕೇಂದ್ರ ಸಚಿವೆ ಹರ್‌ಸಿಮ್ರತ್‌ ಕೌರ್‌ ಬಾದಲ್‌ ತಮ್ಮ ಸ್ಥಾನಕ್ಕೆ ಪಕ್ಷದ ರಾಜೀನಾಮೆ ನೀಡಿದ್ದು, ಇದನ್ನು ರಾಷ್ಟ್ರಪತಿ ಅಂಗೀಕಾರ ಮಾಡಿದ್ದಾರೆ.

 
 
 
 
 
 
 
 
 
 
 

Leave a Reply