ಪತ್ರಿಕಾಗೋಷ್ಠಿಯಲ್ಲಿ ತಲೆ ತಗ್ಗಿಸಿದ ಅಮೆರಿಕ ಅಧ್ಯಕ್ಷ ಜೋ ಬೈಡನ್

ವಾಷಿಂಗ್ಟನ್: ಕಾಬೂಲ್ ನಲ್ಲಿ ನಡೆದ ಸ್ಫೋಟದಲ್ಲಿ ಅಮೆರಿಕದ 13 ಯೋಧರು ಮೃತಪಟ್ಟಿರುವ ಹಿನ್ನೆಲೆಯಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಕಾರ್ಯ ವೈಖರಿ ತೀವ್ರ ಟೀಕೆಗೆ ಗುರಿಯಾಗಿದೆ.

ಸಾಮಾಜಿಕ ಜಾಲ ತಾಣಗಳಲ್ಲಿ ಆಕ್ರೋಶ ಸ್ಫೋಟಗೊಂಡಿದೆ.ಬೈಡನ್ ರಾಜೀನಾಮೆ ಬೇಡಿಕೆ ತೀವ್ರಗೊಂಡಿದೆ.ಈ ಮಧ್ಯೆ ಕಾಬೂಲ್ ಸ್ಫೋಟದ ಕುರಿತು ಮಾಹಿತಿ ನೀಡಲು ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಜೋ ಬೈಡನ್ ತಲೆ ತಗ್ಗಿಸಿ ನಿಂತಿರುವ ಚಿತ್ರ ಇದೀಗ ವೈರಲ್ ಆಗಿದೆ.

 
 
 
 
 
 
 
 
 
 
 

Leave a Reply